ಕರ್ನಾಟಕ

karnataka

ಲಾಕ್​ಡೌನ್​ ಬಳಿಕ ಆದಾಯ ಕುಸಿತ: ಮೈಸೂರು ಅರಮನೆ ಪ್ರವೇಶ ದರ ಏರಿಕೆ

By

Published : Sep 25, 2021, 1:07 PM IST

mysore palace entry fee hiked
ಮೈಸೂರು ಅರಮನೆ ಪ್ರವೇಶ ದರ ಏರಿಕೆ ()

ಕೊರೊನಾ ಲಾಕ್​​ಡೌನ್​ ನಿಂದಾಗಿ ಆದಾಯ ಕುಸಿತವಾದ ಹಿನ್ನೆಲೆ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.

ಮೈಸೂರು: ಲಾಕ್​​ಡೌನ್ ಹಾಗೂ ಕೊರೊನಾ ಹಾವಳಿಯಿಂದ ಆದಾಯ ಕುಸಿತ ಆಗಿರುವುದರಿಂದ,ಮೈಸೂರು ಅರಮನೆ ಪ್ರವೇಶ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಅರಮನೆ ಮಂಡಳಿಯು ದರ ಹೆಚ್ಚಳ ಮಾಡಿದೆ.

ಅರಮನೆ ಪ್ರವೇಶ ದರ 70 ರೂ. ನಿಂದ 100 ಕ್ಕೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೆಯ ದರ 30, ಈಗ ಹೊಸ ದರ 50 ರೂ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ. ಇತ್ತು ಹೊಸ ದರ 30ರೂ. ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂ ನಿಗದಿ ಮಾಡಲಾಗಿದೆ.

ಮೈಸೂರು ಅರಮನೆ ಪ್ರವೇಶ ದರ ಏರಿಕೆ

ಅಗತ್ಯ ವಸ್ತುಗಳ ದರಗಳ ಏರಿಕೆ ಬೆನ್ನಲ್ಲೆ ಅರಮನೆ ಪ್ರವೇಶ ದರ ಟಿಕೆಟ್ ದರ ಹೆಚ್ಚಳವಾಗಿರುವುದು ಪ್ರವಾಸಿಗರಿಗೆ ಬೇಸರ ತಂದಿದೆ.

ಇದನ್ನೂ ಓದಿ:ನಾಡಹಬ್ಬ ದಸರಾಕ್ಕೆ ಸಿದ್ಧತೆ: ಅಕ್ಟೋಬರ್ 1ಕ್ಕೆ ಚಿನ್ನದ‌ ಸಿಂಹಾಸನ ಜೋಡಣೆ

ABOUT THE AUTHOR

...view details