ಕರ್ನಾಟಕ

karnataka

ಪತಿ ಮೊಬೈಲ್ ಕಿತ್ತುಕೊಂಡಿದ್ದೇ ತಪ್ಪಾಯ್ತ? ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ!

By

Published : Oct 17, 2020, 6:56 PM IST

ಮುಜಾಮಿಲ್ ಎಂಬಾತ 2 ದಿನಗಳ ಹಿಂದೆ ಪತ್ನಿ ಸೂಫಿಯಾಳ ಮೊಬೈಲ್ ಕಿತ್ತು ಕೊಂಡಿದ್ದು, ಈ ವಿಚಾರದಲ್ಲಿ ಪತಿ - ಪತ್ನಿಯರ ನಡುವೆ ಗಲಾಟೆ ಆಗಿತ್ತು. ಇದರಿಂದ ತೀವ್ರ ಮನನೊಂದ ಪತ್ನಿ, ಪತಿ ಮನೆಯಲ್ಲಿದ್ದ ವೇಳೆಯೇ ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿದ್ದಾಳೆ.

lady committed suicide after killing her two children
ಪತಿ ಮೊಬೈಲ್ ಕಿತ್ತುಕೊಂಡಿದ್ದೇ ತಪ್ಪಾಯ್ತ? ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ!

ಮೈಸೂರು: ಪತಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದ ಪತ್ನಿ ತನ್ನಿಬ್ಬರ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಿತ್ರಿಪುರಂನ ಎರಡನೇ ಹಂತದ ನಿವಾಸಿ‌ಗಳಾದ ಸೂಫಿಯಾ(24), ಮುನೇಜಾ(3), ಇನಯಾ(1) ಎಂಬುವವರೇ ಮೃತರು. ಮುಜಾಮಿಲ್​ನು ಪತ್ನಿಯ ಮೊಬೈಲ್ ಕಿತ್ತುಕೊಂಡಿದ್ದರಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿದ್ದಾಳೆ.

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

ಖಾಸಗಿ ಕಂಪನಿಯಲ್ಲಿ ಡಿಪ್ಲೊಮಾ ಇಂಜಿನಿಯರ್ ಆಗಿರುವ ಮುಜಾಮಿಲ್, ಎರಡು ದಿನಗಳ ಹಿಂದೆ ಪತ್ನಿಯ ಮೊಬೈಲ್ ಕಿತ್ತುಕೊಂಡಿದ್ದ. ಈ ವಿಚಾರದಲ್ಲಿ ಪತಿ - ಪತ್ನಿಯರ ನಡುವೆ ಗಲಾಟೆ ಆಗಿತ್ತು. ಇದರಿಂದ ತೀವ್ರ ಮನನೊಂದ ಪತ್ನಿ, ಪತಿ ಮನೆಯಲ್ಲಿದ್ದ ವೇಳೆಯೇ ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ ಪೊಲೀಸರು, ಮುಜಾಮಿಲ್​​ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details