ಕರ್ನಾಟಕ

karnataka

ಮೈಸೂರು: ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ನಡೆದ ಹನುಮ ಜಯಂತಿ

By

Published : Dec 8, 2022, 7:24 AM IST

Updated : Dec 8, 2022, 8:20 AM IST

ಹನುಮ ಜಯಂತಿ ಪ್ರಯುಕ್ತ ಹುಣಸೂರಿನಲ್ಲಿ ಆಂಜನೇಯಸ್ವಾಮಿ, ಬಜರಂಗಿ, ರಾಮ- ಲಕ್ಷ್ಮಣ- ಸೀತೆ, ದತ್ತಾತ್ರೇಯ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.

hanuman-jayanti-procession-in-mysore
ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ನಡೆದ ಹನುಮ ಜಯಂತಿ

ಮೈಸೂರು: ಹುಣಸೂರಿನಲ್ಲಿ ಎರಡು ವರ್ಷದ ಬಳಿಕ ಹನುಮ ಜಯಂತಿ ಪೊಲೀಸರ ಬಿಗಿಭದ್ರತೆ ನಡುವೆ ಶಾಂತಿಯುತವಾಗಿ ನಡೆಯಿತು‌. ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ಶೋಭಾಯಾತ್ರೆಗೆ ಶಾಸಕ ಎಚ್.ಪಿ.ಮಂಜುನಾಥ್, ಗಾವಡಗೆರೆ ಶ್ರೀಗಳು ಚಾಲನೆ ನೀಡಿದರು.

ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ನಡೆದ ಹನುಮ ಜಯಂತಿ

ಆಂಜನೇಯಸ್ವಾಮಿ, ಬಜರಂಗಿ, ರಾಮ- ಲಕ್ಷ್ಮಣ- ಸೀತೆ, ದತ್ತಾತ್ರೇಯ ಮೂರ್ತಿಗಳನ್ನು ಪ್ರಮುಖ ರಸ್ತೆಗಳಲ್ಲಿ ಮೆರಚಣಿಗೆ ಮಾಡಲಾಯಿತು. ಕೇಸರಿ ಟೀ ಶರ್ಟ್, ಶಾಲು ತೊಟ್ಟು ಗುಂಪು ಗುಂಪಾಗಿ ಜನ ಸೇರಿದರು. ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಭಕ್ತರಿಗೆ ರಸ್ತೆ ಉದ್ದಕ್ಕೂ ಉಪಹಾರದ ವ್ಯವಸ್ಥೆ ಮಾಡಿದರು. ಮೆರವಣಿಗೆ ಮುಗಿಯವರೆಗೂ ಪೊಲೀಸರು ರಸ್ತೆಗಳಲ್ಲಿ ಭದ್ರತೆ ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಇದನ್ನೂ ಓದಿ:ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಬೃಹತ್ ದತ್ತಮಾಲಾ ಶೋಭಾಯಾತ್ರೆ ಆರಂಭ

Last Updated : Dec 8, 2022, 8:20 AM IST

ABOUT THE AUTHOR

...view details