ಕರ್ನಾಟಕ

karnataka

ಟಾಂಗಾ ಕುದುರೆಗಳಿಗೆ ಮೇವು ನೀಡಿದ ಮಾಜಿ ಶಾಸಕ ಸೋಮಶೇಖರ್

By

Published : May 2, 2020, 6:48 PM IST

ಲಾಕ್​ಡೌನ್ ಹಿನ್ನೆಲೆ ಹೊತ್ತಿನ ಊಟಕ್ಕೂ ಪರದಾಡುತ್ತಿವರ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ವಲಸಿಗರಿಗೆ ಈಗಾಗಲೇ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಹಾರ ಪದಾರ್ಥಗಳ ಕಿಟ್​ಗಳನ್ನು ಒದಗಿಸುತ್ತಾ ಬಂದಿದ್ದು, ಇಂದು ಟಾಂಗಾ ಕುದುರೆಗಳಿಗೆ ಮೇವು ವಿತರಿಸಿದ್ದಾರೆ.

Former MLA Somashekhar
ಟಾಂಗಾ ಕುದುರೆಗಳಿಗೆ ಮೇವು ನೀಡಿದ ಮಾಜಿ ಶಾಸಕ ಸೋಮಶೇಖರ್

ಮೈಸೂರು:ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನಗರದ ಅಗ್ರಹಾರದಲ್ಲಿರುವ ಟಾಂಗಾ ಗಾಡಿ ನಿಲ್ದಾಣದಲ್ಲಿ ಕುದುರೆಗಳಿಗೆ ಮೇವು ವಿತರಿಸಿದರು.

ಮೈಸೂರು ಟಾಂಗಾಗಳ ನಗರಿಯಂದೇ ಪ್ರಸಿದ್ಧಿ ಪಡೆದಿದ್ದು, ಟಾಂಗಾ ನಂಬಿ ಬದುಕುವ ಜನರು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಮಾಜಿ ಶಾಸಕ ಸೋಮಶೇಖರ್, ಟಾಂಗಾ ಗಾಡಿ ನಿಲ್ದಾಣಕ್ಕೆ ಬಂದು ಕುದುರೆಗಳಿಗೆ ಮೇವು ಹಾಗೂ ಅವುಗಳನ್ನು ನೋಡಿಕೊಳ್ಳುವ ಟಾಂಗಾವಾಲಗಳಿಗೆ ದಿನಸಿ ಕಿಟ್ ವಿತರಿಸಿದರು.

ABOUT THE AUTHOR

...view details