ಕರ್ನಾಟಕ

karnataka

ಮೈಸೂರಿನಲ್ಲಿ ಸಾವಿರ ದಾಟಿದ ಕೊರೊನಾ ಸೋಂಕಿತರ ಸಾವು : ಸಂಪೂರ್ಣ ವರದಿ ಇಲ್ಲಿದೆ..

By

Published : Dec 2, 2020, 3:25 PM IST

ಕೋವಿಡ್‌ನಿಂದ ನಿಧನರಾದವರ ಸಾವಿರ ಸೋಂಕಿತರ ಸರಾಸರಿ ವಯಸ್ಸು 62 ಆಗಿದೆ. ಸಾವಿರ ಸಾವಿನ ಪೈಕಿ 300 ಮಂದಿ ಮಹಿಳೆಯರಾಗಿದ್ದಾರೆ. ಶೇ. 87.28ರಷ್ಟು ಸೋಂಕಿತರ ಸಾವಿಗೆ ನಾನಾ ಕಾಯಿಲೆ ಕಾರಣ ಎನ್ನಲಾಗಿದೆ..

covid death rate in mysuru district news
ಮೈಸೂರಿನಲ್ಲಿ ಸಾವಿರ ದಾಟಿದ ಕೊರೊನಾ ಸೋಂಕಿತರ ಸಾವು

ಮೈಸೂರು :ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19ನಿಂದ ಸಾವಿಗೀಡಾದವರ ಸಂಖ್ಯೆ ಸಾವಿರ ದಾಟಿದೆ. ಅದರ ಸಂಪೂರ್ಣ ವರದಿ ಇಲ್ಲಿದೆ.

ಮೈಸೂರಿನಲ್ಲಿ ಸಾವಿರ ದಾಟಿದ ಕೊರೊನಾ ಸೋಂಕಿತರ ಸಾವು

ಜಿಲ್ಲೆಯಲ್ಲಿ ನವೆಂಬರ್‌ ತಿಂಗಳಿನಲ್ಲಿ ಸೋಂಕಿತರ ಮತ್ತು ಮೃತರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಅಂತಿಮವಾಗಿ 1 ಸಾವಿರ ಆಗಿದೆ. ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಆರಂಭವಾದ ಕೊರೊನಾಗೆ ಮೊದಲ ಹಂತದಲ್ಲಿ 90 ಮಂದಿ ಸೋಂಕಿತರು ಕಂಡು ಬಂದರೂ ಜೂನ್ ಎರಡನೇ ವಾರದ ಹೊತ್ತಿಗೆ ಎಲ್ಲರೂ ಗುಣಮುಖರಾಗಿ ʻಮೈಸೂರು ಕೊರೊನಾ ಮುಕ್ತʼ ಜಿಲ್ಲೆ ಆಗಿತ್ತು. ಆದರೆ, ಎರಡನೇ ಹಂತದಲ್ಲಿ ಸೋಂಕು ಹೆಚ್ಚಾಯಿತು.

ತಿಂಗಳವಾರು ಮೃತಪಟ್ಟ ಅಂಕಿ-ಅಂಶ:

ತಿಂಗಳು ಮೃತರ ಸಂಖ್ಯೆ

ಮಾರ್ಚ್, ಏಪ್ರಿಲ್, ಮೇ 0

ಜೂನ್ 3

ಜುಲೈ 165

ಆಗಸ್ಟ್ 308

ಸೆಪ್ಟೆಂಬರ್ 319

ಅಕ್ಟೋಬರ್ 164

ನವೆಂಬರ್ 40

ಡಿಸೆಂಬರ್ 1

ಒಟ್ಟು =1000 ಆಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 300ಕ್ಕಿಂತ ಹೆಚ್ಚಿದೆ. ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ 165ರ ಆಸುಪಾಸಿನಲ್ಲಿ ಸಾವು ಸಂಭವಿಸಿವೆ. ನವೆಂಬರ್‌ನಲ್ಲಿ ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದು, 40 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲಿ ಇಂದು 99 ಪ್ರಕರಣ ಪತ್ತೆ: ಸೋಂಕಿಗೆ 6 ಮಂದಿ ಬಲಿ

ಕೋವಿಡ್ ಮತ್ತು ಇತರೆ ಕಾಯಿಲೆಯಿಂದ ಮೃತಪಟ್ಟವರೇ ಹೆಚ್ಚು :ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಸಾವಿರವಿದೆ. ಈ ಪೈಕಿ ಶೇ. 87.28ರಷ್ಟು (873) ಮಂದಿ ಸಾವಿಗೆ ಕೋವಿಡ್ ನೆಪವಾದ್ರೂ, ಇವರಿಗೆ ಮೊದಲೇ ನಾನಾ ಕಾಯಿಲೆಗಳಿದ್ದವು. ಶೇ. 22.71ರಷ್ಟು (127) ಮಂದಿ ಯಾವುದೇ ಕಾಯಿಲೆ ಇಲ್ಲದೆ ಕೋವಿಡ್‌ನಿಂದ ಮೃತರಾಗಿದ್ದಾರೆ.

ಇತರ ಕಾಯಿಲೆಗಳು ಮತ್ತು ಸಾವು :ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ 21 ಮಂದಿ ಸಾವನ್ನಪ್ಪಿದ್ದಾರೆ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ 104 ಮಂದಿ, ಲೀವರ್ ಸಂಬಂಧಿ ಕಾಯಿಲೆಗೆ 10 ಮಂದಿ, ಮಲಿಗ್ರೆನ್ಸಿ (ವಿಷಮತೆ) 13 ಮಂದಿ, ಡಯಾಬಿಟಿಸ್ 415 ಮಂದಿ, ಹೃದಯ ಸಂಬಂಧಿ ಕಾಯಿಲೆಯಿಂದ 156 ಮಂದಿ, ಅಧಿಕ ರಕ್ತದೊತ್ತಡದಿಂದ 141 ಮಂದಿ ಹಾಗೂ ಇತರೆ ಕಾಯಿಲೆಯಿಂದ 13‌ ಮಂದಿ ಮೃತಪಟ್ಟಿದ್ದಾರೆ.

ತಾಲೂಕುಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ:ಹೆಚ್‌ ಡಿ ಕೋಟೆ 18 ಮಂದಿ, ಹುಣಸೂರು 28, ಕೆಆರ್‌ನಗರ 34, ಮೈಸೂರು ನಗರ 804, ಮೈಸೂರು 33, ನಂಜನಗೂಡು 38, ಪಿರಿಯಾಪಟ್ಟಣ 10, ತಿ.ನರಸೀಪುರ ತಾಲೂಕಿನಲ್ಲಿ 35 ಮಂದಿ ಸೇರಿ ಒಟ್ಟು 1000 ಜನ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ನಿನ್ನೆಯವರೆಗೆ 51 ಮಂದಿಗೆ ಸೋಂಕು ದೃಢಪಟ್ಟಿದ್ದು, 75 ಮಂದಿ ಗುಣಮುಖ. 330 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಈವರೆಗೂ 50,731 ಮಂದಿ ಸೋಂಕಿತರಿಗೆ ಕೊರೊನಾ ದೃಢವಾಗಿದೆ.

ಅದರಲ್ಲಿ ಒಟ್ಟು 49,401 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್‌ನಿಂದ ನಿಧನರಾದವರ ಸಾವಿರ ಸೋಂಕಿತರ ಸರಾಸರಿ ವಯಸ್ಸು 62 ಆಗಿದೆ. ಸಾವಿರ ಸಾವಿನ ಪೈಕಿ 300 ಮಂದಿ ಮಹಿಳೆಯರಾಗಿದ್ದಾರೆ. ಶೇ. 87.28ರಷ್ಟು ಸೋಂಕಿತರ ಸಾವಿಗೆ ನಾನಾ ಕಾಯಿಲೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:ಮೈಸೂರು: ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ವೃದ್ಧ ಸಾವು!

ABOUT THE AUTHOR

...view details