ಕರ್ನಾಟಕ

karnataka

ತಾಯಿ ಬುದ್ಧಿವಾದ ಹೇಳಿದ್ದೇ ತಪ್ಪಾ..? ಹೇಮಾವತಿ ನದಿಗೆ ಹಾರಿ ಪುತ್ರ ಆತ್ಮಹತ್ಯೆ

By

Published : Aug 26, 2021, 2:47 PM IST

ತಾಯಿ ಬುದ್ಧಿವಾದ ಹೇಳಿದಕ್ಕೆ ಕೋಪಗೊಂಡ ಪುತ್ರ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ದೊಬ್ಬ ಮನಗ ಸಾವು ಕುಟುಂಬಸ್ಥರಿಗೆ ಬರಸಿಡಿಲಂತೆ ಅಪ್ಪಳಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

young-boy-commit-suicide
ಹೇಮಾವತಿ ನದಿಗೆ ಹಾರಿ ಪುತ್ರ ಆತ್ಮಹತ್ಯೆ

ಮಂಡ್ಯ:ನೀನು ಕೆಲಸಕ್ಕೆ ಹೋದ್ರೆ ಅಪ್ಪನಿಗೆ ಸಹಾಯ ಆಗುತ್ತೆ ಎಂದಿದಕ್ಕೆ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೆ.ಆರ್​ ಪೇಟೆ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ಶರಣಪ್ಪ, ಭಾಗ್ಯಮ್ಮ ದಂಪತಿ ಪುತ್ರ ಅನಂತ್​​ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಪದವಿ ತರಗತಿಗೆ ದಾಖಲಾಗಿದ್ದ ಆದರೆ, ಕೊರೊನಾ ಕಾರಣದಿಂದಾಗಿ ತರಗತಿಗಳು ಆರಂಭವಾಗದೇ ಮನೆಯಲ್ಲಿಯೇ ಇದ್ದ. ಜೊತೆಗೆ ತಮ್ ಸ್ನೇಹಿತರ ಜೊತೆ ಊರಿನಲ್ಲಿ ಸುತ್ತಾಡಿಕೊಂಡಿದ್ದ. ಹೀಗಾಗಿ ಊರು ಸುತ್ತುವ ಬದಲು ಎಲ್ಲಾದರೂ ಕೆಲಸಕ್ಕೆ ಹೋಗು ತಂದೆಗೆ ಸಹಾಯವಾಗುತ್ತದೆ ಎಂದು ತಾಯಿ ಬುದ್ಧವಾದ ಹೇಳಿದ್ದರು.

ತಾಯಿ ಬುದ್ಧಿವಾದ ಹೇಳಿದಕ್ಕೆ ಕೋಪಗೊಂಡ ಪುತ್ರ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ದೊಬ್ಬ ಮನಗ ಸಾವು ಕುಟುಂಬಸ್ಥರಿಗೆ ಬರಸಿಡಿಲಂತೆ ಅಪ್ಪಳಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಓದಿ:JNU ಕ್ಯಾಂಪಸ್‌ನಲ್ಲಿ ಮಹಿಳೆ ಅನುಮಾನಾಸ್ಪದ ಸಾವು; ಪೊಲೀಸರಿಂದ ತನಿಖೆ

ABOUT THE AUTHOR

...view details