ETV Bharat / crime

JNU ಕ್ಯಾಂಪಸ್‌ನಲ್ಲಿ ಮಹಿಳೆ ಅನುಮಾನಾಸ್ಪದ ಸಾವು; ಪೊಲೀಸರಿಂದ ತನಿಖೆ

author img

By

Published : Aug 26, 2021, 1:44 PM IST

ಪಿಎಚ್‌ಡಿ ಮಾಡುತ್ತಿದ್ದ ವ್ಯಕ್ತಿಯ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಗೆ ಜೆಎನ್‌ಯು(JNU) ಕ್ಯಾಂಪಸ್‌ನಲ್ಲಿ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Woman dies in suspicious condition in JNU campus
ಜೆಎನ್‌ಯು ಕ್ಯಾಂಪಸ್‌ನಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವು; ಪೊಲೀಸರಿಂದ ತನಿಖೆ

ನವದೆಹಲಿ: ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ(JNU)ದ ಕ್ಯಾಂಪಸ್‌ ಆವರಣದಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಮೃತಪಟ್ಟಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೆಎನ್‌ಯುವಿನಲ್ಲಿ ಮೃತ ಮಹಿಳೆಯ ಪತಿ ಪಿಎಚ್‌ಡಿ ಮಾಡುತ್ತಿದ್ದಾರೆ. ಬ್ರಹ್ಮಪುತ್ರ ಹಾಸ್ಟೆಲ್‌ನಲ್ಲಿ ದಂಪತಿ ತಂಗಿದ್ದರು. ಹಾಸ್ಟೆಲ್‌ ಕಟ್ಟಡದ 2ನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ.

ವಸಂತ್‌ ಕುಂಜ್‌ ನಾರ್ಥ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.