ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿಸಿ ತಮ್ಮಣ್ಣ ಅವರಿಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಮದ್ದೂರು ಪಟ್ಟಣದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಡಿಸಿ ತಮ್ಮಣ್ಣನಿ ಅವರಿಗೆ ಚುನಾವಣೆ ಠೇವಣಿ ಕಟ್ಟಲು ದೇವರಹಳ್ಳಿ ಗ್ರಾಮಸ್ಥರು ಹಣ ಕೊಟ್ಟು ಆಶೀರ್ವಾದಿಸಿದರು.
ಬಳಿಕ ತೆರದ ವಾಹನದಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ವಿವಿಧ ಕಲಾತಂಡಗಳ ಜೊತೆ ಬೃಹತ್ ಮೆರವಣಿ ಮತ್ತು ಬೈಕ್ ರ್ಯಾಲಿ ಮೂಲಕ ಮದ್ದೂರು ತಾಲ್ಲೂಕು ಕಚೇರಿಗೆ ಕರೆತಂದರು. ನಾಮಪತ್ರ ಸಲ್ಲಿಸಲು ಬರಿಗಾಲಿನಲ್ಲೆ ಬೈಕ್ನಲ್ಲಿ ಬಂದಿಳಿತ ಡಿಸಿ ತಮ್ಮಣ್ಣ ನಂತರ ಪತ್ನಿ ಪ್ರಮೀಳಾ, ಪುತ್ರಿ ಸೌಮ್ಯ ಜೊತೆ ತೆರಳಿ ಹಸಿರು ಶಾಲು ಧರಿಸಿ ರೈತರ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದರು. ತಾಲೂಕೂ ಕಚೇರಿಯ ಮುಂಬಾಗ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು.
ಬಳಿಕ ಮಾತನಾಡಿದ ಅವರು "ಇಂದು ಬಹಳ ಸಂತೋಷವಾಗುತ್ತಿದೆ. 23 ವರ್ಷದ ರಾಜಕೀಯ ಸೇವೆ ಗುರುತಿಸಿ ಆಶೀರ್ವಾದ ಮಾಡಿದ್ದಾರೆ. ಮತದಾರರ ಪ್ರತಿಕ್ರಿಯೆಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ. ಕ್ಷೇತ್ರದ ಜನರು ನನ್ನ ಮರೆತಿಲ್ಲ, ನನ್ನ ಜೀವ ಇರುವವರೆಗೆ ಅವರ ಋಣ ನನ್ನ ಮೇಲಿರುತ್ತೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿಯುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಎಂ ಹಾಗಲು ಜನರು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ" ಎಂದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!