ಕರ್ನಾಟಕ

karnataka

ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್​, ಅಪಾರ ಬೆಳೆಹಾನಿ

By

Published : Oct 15, 2022, 4:53 PM IST

ಮಂಡ್ಯ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಹಲವು ಕೆರೆಗಳು ಕೋಡಿ ಬಿದ್ದು ರಸ್ತೆಗಳು, ಜಮೀನುಗಳು ಜಲಾವೃತವಾಗಿವೆ.

heavy-rain-caused-damages-in-mandya
ಮಂಡ್ಯದಲ್ಲಿ ಭಾರೀ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್​ , ಅಪಾರ ಬೆಳೆಹಾನಿ

ಮಂಡ್ಯ : ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಬಿದ್ದು, ಸಾವಿರಾರು ಎಕರೆಯಲ್ಲಿ ಬೆಳೆಗಳು ಜಲಾವೃತಗೊಂಡಿವೆ. ಜೊತೆಗೆ ಭಾರಿ ಮಳೆಗೆ ಇಲ್ಲಿನ ರಸ್ತೆ, ಸೇತುವೆಗಳು ಜಲಾವೃತವಾಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್​ : ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಬೂದನೂರು ಕೆರೆ ಕೋಡಿಬಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಬಂದ್​ ಆಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಬೂದನೂರಿನಿಂದ ಕಿರಗಂದೂರು ಗೇಟ್ ಬಳಿಯ ವಿ.ಸಿ.ಫಾರಂ ಗೇಟ್​ವರೆಗೆ ರಸ್ತೆಯ ಇಕ್ಕೆಲಗಳು ಸಂಪೂರ್ಣ ಜಲಾವೃತವಾಗಿವೆ.

ಅಲ್ಲದೆ ಹೆದ್ದಾರಿ ಸಮೀಪದ ಗದ್ದೆಗಳಲ್ಲಿ ನಾಟಿ ಮಾಡಿದ್ದ ಭತ್ತ, ಕಬ್ಬು ಬೆಳೆ ಸೇರಿದಂತೆ ಇನ್ನಿತರೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಜೊತೆಗೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.

ಮಂಡ್ಯದಲ್ಲಿ ಭಾರೀ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್​ , ಅಪಾರ ಬೆಳೆಹಾನಿ

ಚಿಕ್ಕಮಂಡ್ಯ ಕೆರೆ ಕೋಡಿ ಬಿದ್ದು ಬಡಾವಣೆ ಜಲಾವೃತ : ಇಲ್ಲಿನ ಚಿಕ್ಕಮಂಡ್ಯ ಕೆರೆ ಬಳಿ ಇರುವ ವಿವೇಕಾನಂದ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ಊಟ, ನಿದ್ರೆಯಿಲ್ಲದೇ ಮಹಡಿ ಏರಿ ಕುಳಿತು ತಮ್ಮ ಪ್ರಾಣ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ಹೆಚ್ಚಿನ ಮಳೆ ಹಾನಿ ಉಂಟಾಗಿದೆ.

ಹೊಳಲು ಮತ್ತು ಮಂಡ್ಯ ಮೇಲ್ಸೇತುವೆ ಜಲಾವೃತ : ಬೆಂಗಳೂರು-ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಗೆ ಹೊಳಲು ಗ್ರಾಮದ ಬಳಿ ನಿರ್ಮಿಸಿರುವ ಮೇಲ್ಸೇತುವೆ ಜಲಾವೃತವಾಗಿದೆ.

ಇದನ್ನೂ ಓದಿ :ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ: 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ABOUT THE AUTHOR

...view details