ಕರ್ನಾಟಕ

karnataka

ಪ್ರೇಯಸಿಗಾಗಿ 35 ವರ್ಷ ಕಾದ ಪ್ರಿಯತಮ: 65ನೇ ವಯಸ್ಸಿನಲ್ಲಿ ಸಪ್ತಪದಿ ತುಳಿದ ಸಖತ್​ ಜೋಡಿ

By

Published : Dec 2, 2021, 10:11 PM IST

Updated : Dec 2, 2021, 10:41 PM IST

elderly couple married in mandya
65ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ವೃದ್ದ ಜೋಡಿ ()

ಈ ಹಿಂದೆ ಜಯಮ್ಮಗೆ ಬೇರೊಬ್ಬರೊಂದಿಗೆ ಮದುವೆ ಆಗಿತ್ತು. ಆದರೆ, ಮಕ್ಕಳು ಇರಲಿಲ್ಲ. ಜಯಮ್ಮ ಅವರನ್ನು ಗಂಡ ಬಿಟ್ಟು ಹೋಗಿದ್ದ. ಅತ್ತ ಜಯಮ್ಮ ಅವರನ್ನು ಚಿಕ್ಕಣ್ಣ ಪ್ರೀತಿಸುತ್ತಿದ್ದರು. ಆಕೆಯ ನೆನಪಲ್ಲೇ ಬರೋಬ್ಬರಿ 35 ವರ್ಷವನ್ನೂ ಸಹ ಕಳೆದಿದ್ದರು.

ಮಂಡ್ಯ:ನಿಜವಾದ ಪ್ರೀತಿಗೆ ಹಣ, ಅಂತಸ್ತು, ವಯಸ್ಸು ಯಾವುದೂ ಅಡ್ಡಿ ಬರುವುದಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರೇಯಸಿಗಾಗಿ ಬರೋಬ್ಬರಿ 35 ವರ್ಷ ಕಾದ ಪ್ರಿಯಕರ ಕೊನೆಗೂ ತಾನು ಇಷ್ಟಪಟ್ಟಾಕೆಯೊಂದಿಗೆ ಸಪ್ತಪದಿ ತುಳಿದಿರುವ ಘಟನೆ ಮೇಲುಕೋಟೆಯಲ್ಲಿ ನಡೆದಿದೆ.

ಸಪ್ತಪದಿ ತುಳಿದ ಸಖತ್​ ಜೋಡಿ

ತಮ್ಮ 65 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರ ಹೆಸರು ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ. ಈ ಹಿಂದೆ ಜಯಮ್ಮಗೆ ಬೇರೊಬ್ಬರೊಂದಿಗೆ ಮದುವೆ ಆಗಿತ್ತು. ಆದರೆ ಮಕ್ಕಳು ಇರಲಿಲ್ಲ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಜಯಮ್ಮರನ್ನು ಗಂಡ ಬಿಟ್ಟು ಹೋಗಿದ್ದ. ಅತ್ತ ಜಯಮ್ಮ ಅವರನ್ನು ಚಿಕ್ಕಣ್ಣ ಪ್ರೀತಿಸುತ್ತಿದ್ದರು. ಆಕೆಯ ನೆನಪಲ್ಲೇ ಬರೋಬ್ಬರಿ 35 ವರ್ಷ ಕಳೆದರು. ಕೊನೆಗೂ ಜಯಣ್ಣರ ಪ್ರೀತಿಗೆ ಕರಗಿದ ದೇವರು ಅಸ್ತು ಎಂದಿದ್ದು, 35 ವರ್ಷದ ನಂತರ ಲವ್ ಸಕ್ಸಸ್ ಆಗಿದೆ.

ವಿವಾಹ ಸಂಭ್ರಮದಲ್ಲಿ ವೃದ್ದ ಜೋಡಿ

ಇವರಿಬ್ಬರೂ ಪರಸ್ಪರ ಒಪ್ಪಿ ಮೇಲುಕೋಟೆ ಶ್ರೀ ಚೆಲುವರಾಯಸ್ವಾಮಿ ದೇವಾಲಯ ‌ಮುಂಭಾಗದ ಶ್ರೀನಿವಾಸ್ ಗುರೂಜಿ ಅವರ ಆಶ್ರಮದಲ್ಲಿ ಗುರುವಾರ ಮದುವೆ ಆದರು. ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರೇಯಸಿಯನ್ನು ಕೈ ಹಿಡಿದ ಪ್ರೇಮಿ

ಓದಿ:ಆದಿವಾಸಿ ಮೇಲೆ ಗುಂಡು ಹಾರಿಸಿದ ಪ್ರಕರಣ: ಸೂಕ್ತ ತನಿಖೆಗೆ ಆಗ್ರಹಿಸಿದ ನಟ ಚೇತನ್

Last Updated :Dec 2, 2021, 10:41 PM IST

ABOUT THE AUTHOR

...view details