ಕರ್ನಾಟಕ

karnataka

ಮತ್ತೆ ಶುರುವಾಯ್ತಾ ಆಪರೇಷನ್ ಬಿಜೆಪಿ: ಗ್ರಾಮ ಪಂಚಾಯಿತಿ ಮುಖಂಡರೇ ಈ ಬಾರಿ ಟಾರ್ಗೆಟ್!

By

Published : Jan 2, 2020, 10:55 PM IST

ಈ ಬಾರಿಯ ವಿಧಾನಸಭೆ ಉಪ ಚುನಾವಣೆಯಲ್ಲಿ ಸದ್ದು ಮಾಡಿದ್ದ ಆಪರೇಷನ್ ಬಿಜೆಪಿ ಮತ್ತೆ ಶುರುವಾಗಿದೆ. ಅಭಿವೃದ್ಧಿಗಾಗಿ ಹಲವು ಗ್ರಾಮ ಪಂಚಾಯಿತಿ ಮುಖಂಡರು ಬಿಜೆಪಿ ಸೇರಿದ್ದಾರೆ.

Again Operation BJP has started
ಮತ್ತೆ ಶುರುವಾಯ್ತಾ ಆಪರೇಷನ್ ಬಿಜೆಪಿ

ಮಂಡ್ಯ:ವಿಧಾನಸಭೆ ಉಪ ಚುನಾವಣೆಯಲ್ಲಿ ಸದ್ದು ಮಾಡಿದ್ದ ಆಪರೇಷನ್ ಬಿಜೆಪಿ ಮತ್ತೆ ಶುರುವಾಗಿದೆ. ಅಭಿವೃದ್ಧಿಗಾಗಿ ಹಲವು ಗ್ರಾಮ ಪಂಚಾಯಿತಿ ಮುಖಂಡರು ಬಿಜೆಪಿ ಸೇರಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಮಾದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಸದಸ್ಯರು ಹಾಗೂ ಮುಖಂಡರು ಬಿಜೆಪಿ ಶಾಸಕ ನಾರಾಯಣಗೌಡರ ಸಮ್ಮುಖದಲ್ಲಿ ಬಿಜೆಪಿ ಸೇರಿ, ಗ್ರಾಮದ ಅಭಿವೃದ್ಧಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

ಮತ್ತೆ ಶುರುವಾಯ್ತಾ ಆಪರೇಷನ್ ಬಿಜೆಪಿ

ನಾರಾಯಣಗೌಡರು ತಮ್ಮ ಮನೆಯಲ್ಲಿ ಮುಖಂಡರ ಹಾಗೂ ಸದಸ್ಯರ ಸಭೆ ಮಾಡಿ ಪಕ್ಷಕ್ಕೆ ಮುಕ್ತವಾಗಿ ಸ್ವಾಗತ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಗೆಲುವಿಗೆ ಶ್ರಮಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಯಾರು ಬೇಕಾದರೂ ಬಿಜೆಪಿಗೆ ಬರಬಹುದು. ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ಅವರು ಅಭಿವೃದ್ಧಿಗೆ ಪೂರಕವಾದ ಮನಸ್ಸುವಳ್ಳರಾಗಿಬೇಕು ಎಂದು ಮನವಿ ಮಾಡಿದ್ದಾರೆ

ABOUT THE AUTHOR

...view details