ಕರ್ನಾಟಕ

karnataka

ಕೋವಿಡ್‌ ಲಸಿಕೆ ಬಗ್ಗೆ ಸಿದ್ದರಾಮಯ್ಯಗೆ ಮಾಹಿತಿ ಕೊರತೆಯಿದೆ: ಶಾಸಕ ಬಸವರಾಜ

By

Published : Oct 24, 2021, 12:53 PM IST

ಕೋವಿಡ್​ ಲಸಿಕೆಯ 100 ಕೋಟಿ ಡೋಸ್​​ ನೀಡಿರುವುದರ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತಿದೆ. ಆದರೆ ಸಿದ್ದರಾಮಯ್ಯ ಮಾತ್ರ ಎಲ್ಲಿ ನೂರು ಕೋಟಿ ಡೋಸ್ ಆಗಿದೆ ಎಂದು ಪ್ರಶ್ನಿಸಿದ್ದಾರೆ. ಅವರು ಮಾತನಾಡುತ್ತಿರುವುದನ್ನು ಗಮನಿಸಿದರೆ ಅವರಿಗೆ ಮಾಹಿತಿ ಕೊರತೆ ಇದೆ ಎನಿಸುತ್ತಿದೆ ಎಂದು ಶಾಸಕ ಬಸವರಾಜ ವ್ಯಂಗ್ಯವಾಡಿದರು.

mla basavaraja
ಶಾಸಕ ಬಸವರಾಜ

ಗಂಗಾವತಿ: ಕೋವಿಡ್​ ಲಸಿಕೆಯ 100 ಕೋಟಿ ಡೋಸ್​​ ನೀಡಿರುವುದರ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತಿದೆ. ಇಡೀ ವಿಶ್ವವೇ ಭಾರತದ ಸಾಧನೆಯತ್ತ ದೃಷ್ಟಿ ಹಾಯಿಸಿದೆ. ಆದರೆ ಸಿದ್ದರಾಮಯ್ಯ ಮಾತ್ರ ಎಲ್ಲಿ ನೂರು ಕೋಟಿ ಡೋಸ್ ಆಗಿದೆ ಎಂದು ಪ್ರಶ್ನಿಸುವ ಮೂಲಕ ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ ಎಂದು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ವ್ಯಂಗ್ಯವಾಡಿದರು.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದವರು. ಹಿರಿಯ ಅನುಭವಿ ನಾಯಕ, ಸದ್ಯ ವಿರೋಧ ಪಕ್ಷದ ನಾಯಕರು. ಎಲ್ಲವನ್ನೂ ಅಳೆದು ತೂಗಿ ಮಾತನಾಡಿದರೆ ಅವರ ವ್ಯಕ್ತಿತ್ವ, ಹಿರಿತನಕ್ಕೆ ಗೌರವ ಸಿಗುತ್ತದೆ. ಆದರೆ ಟೀಕಿಸುವ ಉದ್ದೇಶಕ್ಕಾಗಿಯೇ ಎಲ್ಲವನ್ನೂ ಪ್ರಶ್ನಿಸುವುದು ಸಿದ್ದರಾಮಯ್ಯರಂತಹ ಹಿರಿಯರಿಗೆ ಶೋಭೆ ತರುವುದಿಲ್ಲ ಎಂದರು.

ಶಾಸಕ ಬಸವರಾಜ

ಕೇವಲ ತಮ್ಮ ಪಕ್ಷದ ಹೈಕಮಾಂಡ್ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಓಲೈಸಲು ಸಿದ್ದರಾಮಯ್ಯ ಇಂತಹ ಆಧಾರ ರಹಿತ ಆರೋಪ ಮಾಡುತ್ತಾರೆ. ಡೋಸ್ ಪಡೆದಿರುವ ಬಗ್ಗೆ ಎಲ್ಲವೂ ದಾಖಲೆ ಇರುತ್ತವೆ. ಒಟಿಪಿ ಜನರೇಟ್ ಆಗುತ್ತದೆ. ಪ್ರತಿಯೊಬ್ಬರ ಮಾಹಿತಿ ಸಿಗುತ್ತದೆ. ಈ ಬಗ್ಗೆ ಬೇಕಿದ್ದರೆ ಸಿದ್ದರಾಮಯ್ಯ ಪರಿಶೀಲಿಸಲಿ ಎಂದರು.

ಇದನ್ನೂ ಓದಿ:ಇದಪ್ಪಾ ಕನ್ನಡ ಪ್ರೇಮ: ಈ ದರ್ಗಾದಲ್ಲಿ ಪ್ರಾರ್ಥನೆ, ಸಂದೇಶಗಳೆಲ್ಲಾ ಕನ್ನಡದಲ್ಲೇ

ಸಿದ್ದರಾಮಯ್ಯ ಅವರು ಮಾತನಾಡುತ್ತಿರುವುದನ್ನು ಗಮನಿಸಿದರೆ ಅವರಿಗೆ ಮಾಹಿತಿ ಕೊರತೆ ಇದೆ ಎನಿಸುತ್ತಿದೆ. ಈಗಾಗಲೇ ಬಿಜೆಪಿ ಪಕ್ಷದಿಂದ ನಾಯಕರು ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ನಾದರೂ ಸಿದ್ದರಾಮಯ್ಯ ಅವರು ಬದಲಾಗಬೇಕು ಎಂದು ಹೇಳಿದರು.

ABOUT THE AUTHOR

...view details