ಕರ್ನಾಟಕ

karnataka

ಹಣತೆ ಹಚ್ಚಿದ ಮುಸ್ಲಿಂ ಬಾಂಧವರು: ಕುಷ್ಟಗಿಯಲ್ಲಿ ಭಾವೈಕ್ಯತೆ ಮೆರೆದ ಕುಟುಂಬ

By

Published : Nov 15, 2020, 2:08 PM IST

Updated : Nov 15, 2020, 3:31 PM IST

dipavali-celebration-by-muslim-family-at-kustagi
ಹಣತೆ ಹಚ್ಚಿದ ಮುಸ್ಲಿಂ ಭಾಂದವರು ()

ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ.

ಕುಷ್ಟಗಿ (ಕೊಪ್ಪಳ): ತಾಲೂಕಿನಮುಸ್ಲಿಂ ಕುಟುಂಬವೊಂದು ದೀಪಾವಳಿ ಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಎಲ್ಲರ ಗಮನ ಸೆಳೆದಿದೆ.

ಮುಸ್ಲಿಂ ಕುಟುಂಬಸ್ಥರಿಂದ ದೀಪಾವಳಿ ಆಚರಣೆ

ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ.

ಲಕ್ಷ್ಮಿ ಕಂಬಕ್ಕೆ ವಿಶೇಷ ಪೂಜೆ

ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿರುವ ಹುಸೇನಸಾಬ್ ದೀಪಾವಳಿವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡಿ, ಲಕ್ಷ್ಮಿ ಕಂಬಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.

Last Updated :Nov 15, 2020, 3:31 PM IST

TAGGED:

ABOUT THE AUTHOR

...view details