ಕರ್ನಾಟಕ

karnataka

ಚರ್ಚ್​ಗೆ ಪಾದ್ರಿ ಬಾರದಂತೆ ಪ್ರತಿಭಟನೆ: ವಿರೋಧದ ನಡುವೆಯೂ ಪ್ರಾರ್ಥನೆ

By

Published : Sep 25, 2022, 9:19 PM IST

Protest in Kolar against accused priest

ಜಾಮೀನಿನ ಮೇಲೆ ಹೊರ ಬಂದಿರುವ ಪಾದ್ರಿ ಭಾನುವಾರದ ಸಭೆಯಲ್ಲಿ ಭಾಗವಹಿಸಬಾರದು ಎಂದು ಪ್ರತಿಭಟನೆ ನಡೆಸಲಾಯಿತು.

ಕೋಲಾರ: ಮೆಥೋಡಿಸ್ಟ್​ ಚರ್ಚ್​ಗೆ ಸೇರುವ ಕೋಲಾರದ ಮಿಷನ್​ ಹಾಸ್ಪಿಟಲ್​ ಎಂದು ಪ್ರಸಿದ್ಧಯಾಗಿದ್ದ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್​ ಕುಂದರ್​ ಎಂಬುವರ ಮೇಲೆ ಮೆಥೋಡಿಸ್ಟ್​ ಚರ್ಚ್​ನ ಪಾದ್ರಿ ಶಾಂತಕುಮಾರ್​ ಅವರು ನಕಲಿ ವಿದ್ಯಾರ್ಥಿನಿಯರಿಂದ ಕೋಲಾರ ಮಹಿಳಾ ಪೊಲೀಸ್​ ಠಾಣೆಗೆ ಲೈಂಗಿಕ ಕಿರುಕುಳ ಕೊಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಈ ವಿಷಯ ಬಯಲಾದ ಹಿನ್ನೆಲೆ ಪಾದ್ರಿ ಶಾಂತಕುಮಾರ್​ ಸೇರಿ ನಾಲ್ವರ ವಿರುದ್ದ ನಕಲಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿ ಶಾಂತಕುಮಾರ್ ಸೇರಿ ನಾಲ್ವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ಹಾಗಾಗಿ ಪೊಲೀಸ್​ ಠಾಣೆಯಲ್ಲಿ ಪಾದ್ರಿ ಶಾಂತಕುಮಾರ್ ಮೇಲೆ ಕೇಸ್​ ಬಾಕಿ ಇರುವ ಕಾರಣ ಅವರು ಚರ್ಚ್​ನ ಪಾದ್ರಿಯ ಸ್ಥಾನವನ್ನು, ಚರ್ಚ್​ನ ಸಭೆಯನ್ನು ನಡೆಸಲು ಯೋಗ್ಯರಲ್ಲ ಹಾಗಾಗಿ ಅವರನ್ನು ಚರ್ಚ್​ನಿಂದ ಹೊರಹಾಕುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.

ಪಾದ್ರಿ ಚರ್ಚ್​ಗೆ ಬಾರದಂತೆ ಪ್ರತಿಭಟನೆ ವಿರೋಧದ ನಡುವೆಯೂ ಪ್ರಾರ್ಥನೆ

ಇನ್ನು ಚರ್ಚ್​ಗೆ ಸೇರಿದ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ, ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈವೇಳೆ ಪೊಲೀಸರು ಮೆಥೋಡಿಸ್ಟ್​ ಚರ್ಚ್​ ಒಳಗೆ ಹೋಗದಂತೆ ತಡೆದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು, ಪ್ರತಿಭಟನಾಕಾರರು ಪಾದ್ರಿ ಶಾಂತಕುಮಾರ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇನ್ನು ಒಂದು ಕಡೆ ಪಾದ್ರಿಯವರು ಚರ್ಚ್​ಗೆ ಪ್ರವೇಶ ಮಾಡಬಾರದು. ಸಭೆಯಲ್ಲಿ ಭಾಗವಹಿಸಬಾರದು ಎಂದು ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಪೊಲೀಸ್​ ಬಂದೋಬಸ್ತ್​ನಲ್ಲಿ ಪಾದ್ರಿ ಶಾಂತಕುಮಾರ್ ಅವರು ಎಂದಿನಂತೆ ಮೆಥೋಡಿಸ್ಟ್​ ಚರ್ಚ್​ ಪ್ರವೇಶ ಮಾಡಿ ಸಭೆ ನಡೆಸಿದರು.

ವಿದ್ಯಾರ್ಥಿಗಳಿಗೆ ದೂರು ದಾಖಲಿಸಲು ಧೈರ್ಯ ಹೇಳಿದ್ದೆ : ಇದೇ ವೇಳೆ ಮಾತನಾಡಿದ ಶಾಂತಕುಮಾರ್ ಅವರು, 'ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಜಾನ್ಸನ್​ ಕುಂದರ್ ಅವರ ಮೇಲೆ ಬಂದಿದ್ದ ಲೈಂಗಿಕ ಕಿರುಕುಳ ಆರೋಪ ಮಾಡಿ ಬಂದ ವಿದ್ಯಾರ್ಥಿನಿಯರಿಗೆ ನಾನು ಧೈರ್ಯ ಹೇಳಿ ದೂರು ನೀಡಲು ಸಹಕಾರ ಕೊಟ್ಟೆ. ಆದರೆ ಆರೋಪ ಸುಳ್ಳಲ್ಲ. ವಿದ್ಯಾರ್ಥಿನಿಯರು ಭವಿಷ್ಯದ ದೃಷ್ಟಿಯಿಂದ ತಮ್ಮ ಹೆಸರುಗಳನ್ನು ತಪ್ಪಾಗಿ ಹೇಳಿದ್ದಾರೆ' ಎಂದರು.

ಆಸ್ಪತ್ರೆ ಮಾರಾಟ ಮಾಡಲ್ಲ : ಅಲ್ಲದೆ ಇಟಿಸಿಎಂ ಆಸ್ಪತ್ರೆ ಮಾರಾಟ ಮಾಡುವುದಾಗಿ ಅಥವಾ ಬೇರೆಯವರಿಗೆ ಗುತ್ತಿಗೆ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೆಲ್ಲವೂ ನನ್ನ ವಿರುದ್ಧ ಜಾನ್ಸನ್​ ಕುಂದರ್​ ಹಾಗೂ ಕೆಲವರು ಮಾಡುತ್ತಿರುವ ಷಡ್ಯಂತ್ರ ಎಂದು ದೂರಿದ್ದಾರೆ.

ಇದನ್ನೂ ಓದಿ :ಆಸ್ಪತ್ರೆ ಅಧಿಕಾರದಾಸೆಗೆ ಮಹಿಳೆಯರ ಮೂಲಕ ನಕಲಿ ದೂರು: ಚರ್ಚ್​ ಪಾದ್ರಿ ಸೇರಿ ನಾಲ್ವರ ಬಂಧನ

ABOUT THE AUTHOR

...view details