ಕೋಲಾರ: ಕಾಂಗ್ರೆಸ್ ಸರ್ಕಾರಕ್ಕೆ ಆಯುಷ್ಯ ಇಲ್ಲ. ಮುಂದಿನ ಡಿಸೆಂಬರ್, ಜನವರಿಗೆ ಸರ್ಕಾರ ಬೀಳುವುದು ಖಚಿತ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದರು. ಕೋಲಾರದ ಮಾಲೂರಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಂ ಬಿ ಪಾಟೀಲ್, ದೇಶಪಾಂಡೆ, ಮಹಾದೇವಪ್ಪ, ಜಮೀರ್ ಅವರು ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆ ಎಂದು ಹೇಳುತ್ತಿದ್ದು, ಅಧಿಕಾರಕ್ಕಾಗಿ ಕದನ ಸೃಷ್ಟಿಯಾಗಿ ಈ ಸರ್ಕಾರಕ್ಕೆ ಭವಿಷ್ಯವಿಲ್ಲ. ಮುಂದೆ ಎಂದಿಗೂ ಬಿಜೆಪಿ ಪಕ್ಷವೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ ಎಂದು ಹೇಳಿದರು
ಕಾಂಗ್ರೆಸ್ನಲ್ಲಿ ಎರಡು ಮೂರು ಗುಂಪುಗಳಾಗಿವೆ. ಬಿಜೆಪಿ ಕಡೆ ಅವರೆಲ್ಲರೂ ಎದುರು ನೋಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇನ್ನು ಎನ್‌ಡಿಎ ಪಕ್ಷಗಳ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನ ಕೊಟ್ಟಿರುವ ಯೋಜನೆಗಳನ್ನು ನೋಡಿ ಹಲವಾರು ಪಕ್ಷಗಳು ಬೆಂಬಲ ನೀಡುತ್ತಿವೆ. ಕಾನೂನು ಸಿವಿಲ್ ಕೋಡ್ ಬಗ್ಗೆ ಆಮ್ - ಆದ್ಮಿ ಪಕ್ಷ ಸಹ ಬೆಂಬಲ ವ್ಯಕ್ತಪಡಿಸಿದೆ ಎಂದು ಸಮರ್ಥನೆ ಮಾಡಿಕೊಂಡರು. ಮಹಾರಾಷ್ಟ್ರ, ಬಿಹಾರ, ಗೋವಾ ರಾಜ್ಯಗಳಲ್ಲಿ ಸಹ ಅನೇಕ ಪಕ್ಷಗಳು ಎನ್‌ಡಿಎ ಜೊತೆ ಸೇರಿಕೊಂಡಿವೆ. ಬಿಜೆಪಿ ಪಕ್ಷದ ಅಭಿವೃದ್ದಿ ಕಾರ್ಯಗಳನ್ನು ನೋಡಿ ಹಲವಾರು ಪಕ್ಷಗಳು ಮನ ಸೋತಿವೆ. ಮತ್ತೆ ಮುಂದಿನ ದಿನಗಳಲ್ಲಿ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ವಿರುದ್ಧ ಕೇಂದ್ರ ಸಚಿವ ಕರಂದ್ಲಾಜೆ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಕೊಲೆಯಾಗುತ್ತಿದೆ. ಕಾಂಗ್ರೆಸ್ ನೇತೃತ್ವ, ಕೃಪಾ ಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಯಾಗುತ್ತಿದೆ. ದಿಗಂಬರ ಜೈನ ಮುನಿ ಕೊಲೆ, ಬೆಂಗಳೂರಲ್ಲಿ ಹಾಡಹಗಲೇ ಟೆಕ್ಕಿ ಸಾಯ್ತಾರೆ. ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತೆ. ಹನುಮ ಜಯಂತಿ ಯಶಸ್ವಿ ಯಾಗಿದ್ದಕ್ಕೆ ವೇಣು ಗೋಪಾಲ್ ಕೊಲೆಯಾಗಿದೆ. ಎರಡೇ ತಿಂಗಳಿಗೆ ಸರ್ಕಾರ ನೈತಿಕತೆ ಕಳೆದು ಕೊಂಡಿದೆ ಎಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.