ಕರ್ನಾಟಕ

karnataka

ಯಮಲೋಕದ ದಾರಿಯಾಗಿದ್ದ ಬೆಂಗಳೂರು - ಚೆನ್ನೈ ಹೆದ್ದಾರಿ -75: ಇದೀಗ ರಸ್ತೆ ಮಾರ್ಪಾಡಿಗೆ ತರಾತುರಿ

By

Published : Nov 25, 2020, 12:38 PM IST

ಕೋಲಾರ ಜಿಲ್ಲೆಯಲ್ಲಿ ಸುಮಾರು 100 ಕಿ.ಮೀ ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ-75 ಹಾದು ಹೋಗಲಿದೆ. ಆದರೆ, ಕೆಲ ಅವೈಜ್ಞಾನಿಕ ತಿರುವುಗಳು, ಸರ್ವಿಸ್ ರಸ್ತೆ ಇಲ್ಲದಿರುವುದು, ಹೈವೇಗೆ ಬೇಕಾದ ಕನಿಷ್ಠ ಸೌಲಭ್ಯಗಳಿಲ್ಲದ ಕಾರಣ ರಸ್ತೆ ಅಪಘಾತಗಳು ಸಂಭವಿಸಿದ್ದು, ಕಳೆದ ವರ್ಷ 800 ಜನರು ಬಲಿಯಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಆದೇಶದ ಮೇರೆಗೆ, ರಸ್ತೆ ಅಪಘಾತಗಳನ್ನ ಕಡಿಮೆ ಮಾಡುವ ದೃಷ್ಟಿಯಿಂದ ಹೊಸದಾಗಿ ಮೇಲ್ಸೇತುವೆ, ಅಂಡರ್ ಪಾಸ್, ಸರ್ವಿಸ್ ರಸ್ತೆಗಳ ನಿರ್ಮಾಣ ಮಾಡಿ, ರಸ್ತೆ ಮಾರ್ಪಾಟು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

bengaluru- chennai highway 75 to repair
ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ-75

ಕೋಲಾರ: ಉತ್ತರ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ಚೆನ್ನೈ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನಿಯಮ ಉಲ್ಲಂಘಿಸಿ ಅವೈಜ್ಞಾನಿಕವಾಗಿ ಮಾಡಿದ್ದ ರಸ್ತೆಗೆ ವರ್ಷದಲ್ಲಿ ಒಂದು ಸಾವಿರ ಜನ ಬಲಿಯಾಗುತ್ತಿದ್ರು. ಜಿಲ್ಲಾಡಳಿತದ ಸೂಚನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ತಂಡ ರೋಡಿಗಿಳಿದು ಹೈವೇ ಪರಿಶೀಲನೆ ನಡೆಸಿದ್ರು.

ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ-75

ಕಳೆದ ವರ್ಷದಲ್ಲಿ 800 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಕೆಲ ಅವೈಜ್ಞಾನಿಕ ತಿರುವುಗಳು, ಸರ್ವಿಸ್ ರಸ್ತೆ ಇಲ್ಲದಿರುವುದು, ಹೈವೇಗೆ ಬೇಕಾದ ಕನಿಷ್ಠ ಸೌಲಭ್ಯಗಳನ್ನ ಒದಗಿಸಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಇತ್ತೀಚೆಗೆ ಸಭೆಯಲ್ಲಿ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ರು. ಅಲ್ಲದೇ ಜಿಲ್ಲೆಯಲ್ಲಿ ಮಾತ್ರವೇ 28 ಬ್ಲಾಕ್ ಸ್ಪಾಟ್ಸ್ ಗಳನ್ನ ಗುರುತಿಸಿ ಸಾವಿನ ದಾರಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು.

ಇದರಿಂದ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರ ಹಿರಿಯ ಯೋಜನಾಧಿಕಾರಿ ಸೋಮಶೇಖರ್ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ರು. ಕೋಲಾರ ತಾಲೂಕು ರಾಮಸಂದ್ರದಿಂದ ಹೆದ್ದಾರಿ ಪರಿಶೀಲನೆ ನಡೆಸಿದ್ರು. ಕೋಲಾರ ಡಿಸಿ, ಎಸ್ಪಿ, ಸಿಇಒ ಸ್ಥಳೀಯ ಸಮಸ್ಯೆಗಳ ಕುರಿತು ವಿವರಣೆ ನೀಡಿದ್ರು. ಇದೀಗ ರಸ್ತೆ ಅಪಘಾತಗಳನ್ನ ಕಡಿಮೆ ಮಾಡುವ ದೃಷ್ಟಿಯಿಂದ ಹೊಸದಾಗಿ ಮೇಲ್ಸೇತುವೆ, ಅಂಡರ್ ಪಾಸ್, ಸರ್ವಿಸ್ ರಸ್ತೆಗಳ ನಿರ್ಮಾಣ ಮಾಡಿ ಮಾರ್ಪಾಟು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿ ಸತ್ಯಭಾಮ ಅಧ್ಯಕ್ಷತೆಯಲ್ಲಿ ಎಸ್ಪಿ ಕಾರ್ತಿಕ್ ರೆಡ್ಡಿ, ಸಿಇಒ ರವಿಕುಮಾರ್ ಸಮ್ಮುಖದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಸಭೆ ನಡೆಸಿದ್ದಾರೆ. ಸಭೆಯಲ್ಲಿ 28 ಬ್ಲಾಕ್ ಸ್ಪಾಟ್‌ಗಳನ್ನ ಗುರುತಿಸಿರುವ ಜಿಲ್ಲಾಡಳಿತ ಸದ್ಯ ಅಪಘಾತಗಳನ್ನ ತಡೆಯಲು ರಸ್ತೆ ಮಾರ್ಪಾಡು ಮಾಡಲು ಮುಂದಾಗಿದೆ. ಹೀಗಾಗಲೆ ಮೂರು ಸ್ಥಳಗಳಲ್ಲಿ ಹೊಸದಾಗಿ ಬ್ರಿಡ್ಜ್ ನಿರ್ಮಾಣ ಹಾಗೂ ಕೆಲವೆಡೆ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜೊತೆಗೆ ಮತ್ತಷ್ಟು ಮುನ್ನಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವ ದೃಷ್ಟಿಯಿಂದ ಹೆಚ್ಚಿನ ಸರ್ವೀಸ್ ರೋಡ್, ಸ್ಕೈ ವಾಕ್ ಹಾಗೂ ಬ್ಯಾರಿಕೇಡ್​ಗಳನ್ನ ಅಳವಡಿಸಿ ಅಪಘಾತಗಳನ್ನ ತಡೆಯಲು ಸೂಚನೆ ನೀಡಲಾಗಿದೆ.

ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ವಡಗೂರು, ಜಿಲ್ಲಾಧಿಕಾರಿ ಕಚೇರಿ, ಕೊಂಡರಾಜನಹಳ್ಳಿ, ಮಡೇರಹಳ್ಳಿ, ನರಸಾಪುರ ಸೇರಿದಂತೆ ಹಲವೆಡೆ ಕೆಲಸ ಆರಂಭವಾಗಿದ್ದು, ಮುಂದಿನ 2 ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಾಣಲಿದ್ದೇವೆ. ಅಪಘಾತಗಳನ್ನ ತಡೆಯುವ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಆದಷ್ಟು ಬೇಗ ಪ್ರಯಾಣಿಕರಿಗೆ ಬೇಕಾದ ಸುರಕ್ಷತೆಗಳನ್ನು ಕೈಗೊಂಡು ಅಮೂಲ್ಯ ಜೀವಗಳ ರಕ್ಷಣೆ ಮಾಡುವ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

TAGGED:

ABOUT THE AUTHOR

...view details