ಕರ್ನಾಟಕ

karnataka

ವಸತಿ ನಿವೇಶನಗಳಿಗೆ ಆಹೋರಾತ್ರಿ ಧರಣಿ: 18 ದಿನಗಳಾದರೂ ಕೇಳೋರಿಲ್ಲ ವಸತಿರಹಿತರ ಗೋಳು..!

By

Published : Jan 22, 2020, 9:36 AM IST

Updated : Jan 22, 2020, 9:45 AM IST

ವಸತಿ ನಿವೇಶನಗಳಿಗೆ ಆಹೋರಾತ್ರಿ ಧರಣಿ 18 ದಿನಗಳಾದರೂ ಕೇಳೋರಿಲ್ಲ. ಸೂರಿಗಾಗಿ ನಡೆಯುತ್ತಿರುವ ಈ ಹೋರಾಟ ಅತಿರೇಕಕ್ಕೆ ಹೋಗುವ ಮುನ್ನ ಸರ್ಕಾರ ಪರಿಹಾರ ಕಲ್ಪಿಸಬೇಕಾಗಿದೆ.

Overnight protest continue, Overnight protest continue for residential quarters, Overnight protest continue for residential quarters in Kodagu, ಮುಂದುವರಿದ ಆಹೋರಾತ್ರಿ ಧರಣಿ,  ವಸತಿ ನಿವೇಶನಗಳಿಗೆ ಮುಂದುವರಿದ ಆಹೋರಾತ್ರಿ ಧರಣಿ, ಕೊಡಗಿನಲ್ಲಿ ವಸತಿ ನಿವೇಶನಗಳಿಗೆ ಮುಂದುವರಿದ ಆಹೋರಾತ್ರಿ ಧರಣಿ,
ವಸತಿ ನಿವೇಶನಗಳಿಗೆ ಆಹೋರಾತ್ರಿ ಧರಣಿ

ಕೊಡಗು: ಜಿಲ್ಲೆಯ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ವಸತಿಗಾಗಿ ಆಗ್ರಹಿಸಿ ಮಾಡಿದ್ದ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಸರ್ಕಾರವೇ ಕೊಡಗಿನತ್ತ ಮುಖ ಮಾಡಿತ್ತು. ಇದೀಗ ವಸತಿಗಾಗಿ ಅದೇ ರೀತಿಯ ಇದೀಗ ಮತ್ತೊಂದು ಆಹೋರಾತ್ರಿ ಧರಣಿ ನಡೆಯುತ್ತಿದೆ. 18 ದಿನಗಳಿಂದ ನಿರಂತರ ಧರಣಿ ನಡೆಸುತ್ತಿರೋ ವಸತಿ ವಂಚಿತರು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದಲ್ಲಿ ಕಳೆದ 18 ದಿನಗಳಿಂದ ಈ ಆಹೋರಾತ್ರಿ ಧರಣಿ ನಡೆಯುತ್ತಿದೆ. ಗ್ರಾಮದ ಸರ್ವೇ ನಂ. 337/1 ರಲ್ಲಿರುವ 3.50 ಎಕರೆ ಪೈಸಾರಿ ಜಾಗದಲ್ಲಿ ನಮಗೆ ವಸತಿ ಕಲ್ಪಿಸಿಕೊಡಿ ಎಂದು ಈ ಹೋರಾಟ ನಡೆಸಲಾಗುತ್ತಿದೆ.

ವಸತಿ ನಿವೇಶನಗಳಿಗೆ ಆಹೋರಾತ್ರಿ ಧರಣಿ

ಸುತ್ತಮುತ್ತಲಿನ ಅರ್ಜಿ, ಪೆರುಂಬಾಡಿ, ವೀರಾಜಪೇಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಮಾಡುತ್ತಿರುವ ವಸತಿ ರಹಿತ 55 ಕುಟುಂಬಗಳು ಈ ಹೋರಾಟದಲ್ಲಿ ಭಾಗಿಯಾಗಿವೆ. ವಸತಿ ಹೋರಾಟ ಸಮಿತಿ, ಸಿಐಟಿಯು ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮೂರು ವರ್ಷದ ಹಿಂದೆ ವೀರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಇದೇ ಮಾದರಿಯಲ್ಲಿ ಹೋರಾಟ ಮಾಡಿ ವಸತಿ ಗಿಟ್ಟಿಸಿಕೊಂಡಿದ್ದರು. ಇದೀಗ ಇವರು ಕೂಡ ಅದೇ ಮಾದರಿಯ ಹೋರಾಟದ ಹಾದಿ ಹಿಡಿದಿದ್ದಾರೆ.

ಒಂದು ವಾರಗಳ ಹಿಂದೆ ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ ಇವರು ನಿರ್ಮಾಣ ಮಾಡಿದಂತಹ ತಾತ್ಕಾಲಿಕ ಶೆಡ್​ಗಳನ್ನು ಕಿತ್ತು ಹಾಕಿ ಹೋಗಿದ್ದಾರೆ. ಇನ್ನೂ ವೀರಾಜಪೇಟೆ ತಹಶೀಲ್ದಾರರು ಆಗಮಿಸಿ ಜಾಗದಿಂದ ಹೊರಹೋಗುವಂತೆ ಸೂಚನೆ ನೀಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಜಾಗ ಬಿಟ್ಟು ಹೋಗಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.

ಸರಕಾರ ಎಲ್ಲಾರಿಗೂ ವಸತಿ ಕೊಡುತ್ತೇವೆ ಎಂದು ಹೇಳುತ್ತದೆ. ಆದರೆ ನಮಗೆ ಇದುವರೆಗೂ ವಸತಿ ಸಿಕ್ಕಿಲ್ಲ. ಚುನಾವಣೆಗೆ ಮಾತ್ರ ಮತಭಿಕ್ಷೆ ಕೇಳಲು ನಮ್ಮ ಬಳಿ ಜನಪ್ರತಿನಿಧಿಗಳು ಬರುತ್ತಾರೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ, ಸೂರಿಗಾಗಿ ನಡೆಯುತ್ತಿರುವ ಈ ಹೋರಾಟ ಅತಿರೇಕಕ್ಕೆ ಹೋಗುವ ಮೊದಲು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸರ್ಕಾರ ಈ ಹೋರಾಟಗಾರರ ಬೇಡಿಕೆಗೆ ಯಾವ ರೀತಿ ಮನವೊಲಿಸುವ ಕೆಲಸ ಮಾಡುತ್ತೆ ಕಾದು ನೋಡಬೇಕಿದೆ.

Intro:ವಸತಿ ನಿವೇಶನಗಳಿಗೆ ಆಹೋರಾತ್ರಿ ಧರಣಿ: 18 ದಿನಗಳಾದರೂ ಕೇಳೊರಿಲ್ಲ ವಸತಿ ರಹಿತರ ಗೋಳು..!

ಕೊಡಗು : ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ವಸತಿಗಾಗಿ ಆಗ್ರಹಿಸಿ ಮಾಡಿದ್ದ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು.ಸರ್ಕಾರವೇ ಕೊಡಗಿನತ್ತ ಮುಖ ಮಾಡಿತ್ತು.ಇದೀಗ ವಸತಿಗಾಗಿ ಅದೇ ರೀತಿಯ ಇದೀಗ ಮತ್ತೊಂದು ಆಹೋರಾತ್ರಿ ಧರಣಿ ನಡೆಯುತ್ತಿದೆ.18 ದಿನಗಳಿಂದ ನಿರಂತರ ಧರಣಿ ನಡೆಸುತ್ತಿರೋ ವಸತಿ ವಂಚಿತರು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.ಹಾಗಾದರೆ ಆ ಹೋರಾಟದ ಸ್ವರೂಪ ಯಾವ ರೀತಿ ಇದೆ.ಜಿಲ್ಲಾಡಳಿತ ರೆಸ್ಪಾನ್ಸ್ ಯಾವ ರೀತಿ ಇದೆ ನೀವೇ ನೋಡಿ.

ಸೂರು ಬೇಕೇ ಬೇಕು ಎಂದು ಘೋಷಣೆ ಹಾಕುತ್ತಿರುವ ಹೋರಾಟಗಾರರು.ಅಲ್ಲಲ್ಲಿ ನಿರ್ಮಾಣ ಮಾಡಲಾಗಿರುವ ತಾತ್ಕಾಲಿಕ ಶೆಡ್​ಗಳು.ಅಧಿಕಾರಿಗಳು ಕಿತ್ತು ಹಾಕಿರುವ ಕೆಲವು ಶೆಡ್​ಗಳ ಅವಶೇಷಗಳು.ಮತ್ತೊಂದೆಡೆ ಕಾಡು ಕಡಿದು ಜಾಗವನ್ನು ಸ್ವಚ್ಚಗೊಳಸುತ್ತಿರುವ ಮಹಿಳೆಯರು...ಹೌದು ಇದು ನಮಗೆ ಸೂರು ಕೊಡಿ ಸ್ವಾಮಿ ಎಂದು ಸರ್ಕಾರವನ್ನು ಒತ್ತಾಯಿಸಲು ವಸತಿ ರಹಿತರು ಮಾಡುತ್ತಿರುವ ಆಹೋರಾತ್ರಿ ಧರಣಿಯ ದೃಶ್ಯಗಳು..!

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದಲ್ಲಿ ಕಳೆದ 18 ದಿನಗಳಿಂದ ಈ ಆಹೋರಾತ್ರಿ ಧರಣಿ ನಡೆಯುತ್ತಿದೆ.ಗ್ರಾಮದ ಸರ್ವೇ ನಂ. 337/1 ರಲ್ಲಿರುವ 3.50 ಎಕರೆ ಪೈಸಾರಿ ಜಾಗದಲ್ಲಿ ನಮಗೆ ವಸತಿ ಕಲ್ಪಿಸಿಕೊಡಿ ಎಂದು ಈ ಹೋರಾಟ ನಡೆಸಲಾಗುತ್ತಿದೆ.ಸುತ್ತಮುತ್ತಲಿನ ಆರ್ಜಿ, ಪೆರುಂಬಾಡಿ , ವೀರಾಜಪೇಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಮಾಡುತ್ತಿರುವ ವಸತಿ ರಹಿತ 55 ಕುಟುಂಬಗಳು ಈ ಹೋರಾಟದಲ್ಲಿ ಭಾಗಿಯಾಗಿವೆ.ವಸತಿ ಹೋರಾಟ ಸಮಿತಿ,ಸಿಐಟಿಯು ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮೂರು ವರ್ಷದ ಹಿಂದೆ ವೀರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಇದೇ ಮಾದರಿಯಲ್ಲಿ ಹೋರಾಟ ಮಾಡಿ ವಸತಿ ಗಿಟ್ಟಿಸಿಕೊಂಡಿದ್ದರು. ಇದೀಗ ಇವರು ಕೂಡ ಅದೇ ಮಾದರಿಯ ಹೋರಾಟದ ಹಾದಿ ಹಿಡಿದಿದ್ದಾರೆ.

ಬೈಟ್-1 ಪಳಂಗಪ್ಪ - ಹೋರಾಟಗಾರ

ಒಂದು ವಾರಗಳ ಹಿಂದೆ ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ ಇವರು ನಿರ್ಮಾಣ ಮಾಡಿದಂತಹ ತಾತ್ಕಾಲಿನ ಶೆಡ್​ಗಳನ್ನು ಕಿತ್ತು ಹಾಕಿ ಹೋಗಿದ್ದಾರೆ. ಇನ್ನೂ ವೀರಾಜಪೇಟೆ ತಹಶೀಲ್ದಾರರು ಆಗಮಿಸಿ ಜಾಗದಿಂದ ಹೊರಹೋಗುವಂತೆ ಸೂಚನೆ ನೀಡಿದ್ದಾರೆ.ಆದರೆ ನಾವು ಯಾವುದೇ ಕಾರಣಕ್ಕೂ ಜಾಗ ಬಿಟ್ಟು ಹೋಗಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.ಸರಕಾರ ಎಲ್ಲಾರಿಗೂ ವಸತಿ ಕೊಡುತ್ತೇವೆ ಎಂದು ಹೇಳುತ್ತದೆ.ಆದರೆ ನಮಗೆ ಇದುವರೆಗೂ ವಸತಿ ಸಿಕ್ಕಿಲ್ಲ.ಚುನಾವಣೆಗೆ ಮಾತ್ರ ಮತಭಿಕ್ಷೆ ಕೇಳಲು ನಮ್ಮ ಬಳಿ ಜನಪ್ರತಿನಿಧಿಗಳು ಬರುತ್ತಾರೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

ಬೈಟ್-2 ಶೋಭಾ- ವಸತಿ ವಂಚಿತ ಮಹಿಳೆ.

ಒಟ್ಟಿನಲ್ಲಿ, ಸೂರಿಗಾಗಿ ನಡೆಯುತ್ತಿರುವ ಈ ಹೋರಾಟ ಅತಿರೇಕಕ್ಕೆ ಹೋಗುವ ಮೊದಲು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸರ್ಕಾರ ಈ ಹೋರಾಟಗಾರರ ಬೇಡಿಕೆಗೆ ಯಾವ ರೀತಿ ಮನವೊಲಿಸುವ ಕೆಲಸ ಮಾಡುತ್ತೆ ಕಾದು ನೋಡಬೇಕಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.


Body:0


Conclusion:0
Last Updated :Jan 22, 2020, 9:45 AM IST

ABOUT THE AUTHOR

...view details