ಕರ್ನಾಟಕ

karnataka

ಕಲಬುರಗಿ ಪಿಎಫ್​ಐ ಮುಖಂಡರು ಪೊಲೀಸ್​ ವಶಕ್ಕೆ

By

Published : Sep 27, 2022, 10:46 AM IST

ಕಲಬುರಗಿಯಲ್ಲಿ ಪಿಎಫ್​​ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.

Kn_klb_01_p
ವಶಕ್ಕೆ ಪಡೆದ ಪಿಎಫ್​​ಐ ಕಾರ್ಯಕರ್ತರು

ಕಲಬುರಗಿ: ನಗರದಲ್ಲಿ ಪಿಎಫ್ಐ ಸಂಘಟನೆ ಮುಖಂಡರ ಮನೆ ಮೇಲಿನ ದಾಳಿ ಮುಂದುವರಿದ್ದು, ಮತ್ತೆ ನಾಲ್ಕು ಕಡೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಇಕ್ಬಾಲ್ ಕಾಲೋನಿಯ ಮಜಾರ್ ಹುಸೇನ್ ಹಾಗೂ ಇಸಾಮುದ್ದಿನ್ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು‌, ತೀವ್ರ ಶೋಧಕಾರ್ಯ ನಡೆಸಿ ನಂತರ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಪಿಎಫ್ಐ ಸಂಘಟನೆ ಸಕ್ರಿಯ ಕಾರ್ಯಕರ್ತರಾಗಿದ್ದು, ನಾಲ್ಕು ದಿನಗಳ ಹಿಂದಷ್ಟೇ ಬಂಧಿತನಾದ ಪಿಎಫ್ಐ ಜಿಲ್ಲಾಧ್ಯಕ್ಷ ಏಜಾಜ್ ಅಲಿಯ ನಿಕಟವರ್ತಿಗಳು ಇವರಾಗಿದ್ದರು. ಇನ್ನೆರಡು ಕಡೆ ದಾಳಿ ನಡೆಸಲಾಗಿದ್ದು ಮತ್ತಷ್ಟು ಕಾರ್ಯಕರ್ತರನ್ನ ವಶಕ್ಕೆ ಪಡೆಯುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮಂಗಳೂರಿನಲ್ಲೂ ಪೊಲೀಸರ ಕಾರ್ಯಾಚರಣೆ.. ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಮುಖಂಡರು ವಶಕ್ಕೆ

ABOUT THE AUTHOR

...view details