ಕರ್ನಾಟಕ

karnataka

ಕಾಂಗ್ರೆಸ್​ನವರು ಇಂದಿಗೂ ನಿಜಾಮನ ಗುಲಾಮಗಿರಿಯಲ್ಲಿದ್ದಾರೆ : ಶಾಸಕ ರಾಜಕುಮಾರ್ ಪಾಟೀಲ್

By

Published : Sep 18, 2022, 9:35 PM IST

ಶಾಸಕ ರಾಜಕುಮಾರ್ ಪಾಟೀಲ್

ಕಾಂಗ್ರೆಸ್ ಪಕ್ಷದವರು ಇಂದಿಗೂ ನಿಜಾಮನ ಗುಲಾಮಗಿರಿ, ನಿಜಾಮನ ಗುಂಗಿನಲ್ಲಿ ಇದ್ದಾರೆ ಅನಿಸ್ತಿದೆ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಹೇಳಿದ್ದಾರೆ.

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸಿಎಂ, ಅನುದಾನ ಘೋಷಣೆ ಮಾಡಿರುವ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಮಾಡಿರುವ ಟೀಕೆಗೆ ಮಾಧ್ಯಮಗೋಷ್ಟಿಗಾಗಿಯೇ ಕಲಬುರಗಿಯ ಕೆಲವು ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದವರು ಇಂದಿಗೂ ನಿಜಾಮನ ಗುಲಾಮಗಿರಿ, ನಿಜಾಮನ ಗುಂಗಿನಲ್ಲಿ ಇದ್ದಾರೆ ಅನಿಸ್ತಿದೆ. ಕಾಂಗ್ರೆಸ್ ಪಕ್ಷದವರು ವಿಮೋಚನಾ ದಿನಾಚರಣೆಗೆ ತಮ್ಮ ಪಾರ್ಟಿ ಕಚೇರಿಯಲ್ಲಿ ಧ್ವಜಾರೋಹಣ ಕೂಡಾ ಮಾಡಲಿಲ್ಲ. ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನ ಕಾಂಗ್ರೆಸ್ ಪಕ್ಷದವರು ಆಚರಿಸಿಲ್ಲ ಎಂದು ಟೀಕಿಸಿದರು.

ನಿಜಾಮ ಒಬ್ಬ ಮತಾಂಧ ಆಗಿದ್ದ. ಈ ದೇಶದ ಸ್ವಾತಂತ್ರ್ಯ ಒಪ್ಪಿಕೊಳ್ಳದ ಒಬ್ಬ ಹೇಡಿಯಾಗಿದ್ದ. ಸೆಪ್ಟೆಂಬರ್ 17 ಸ್ವಾತಂತ್ರ್ಯ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಎಂದು ನೀವು ನಂಬೋದಿಲ್ವಾ? ಕಾಂಗ್ರೆಸ್ ಪಕ್ಷದವರೇ ಎಂದು ಶಾಸಕ ತೇಲ್ಕೂರು ಪ್ರಶ್ನಿಸಿದರು.

ಕಾಂಗ್ರೆಸ್​ ವಿರುದ್ಧ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಕಿಡಿ

ಪ್ರಚಾರಕ್ಕಾಗಿ ಕಾಂಗ್ರೆಸ್​ನವರು ಮಾತಾಡ್ತಿದ್ದಾರೆ: ಸಿಎಂ ಕೆಕೆಆರ್ ಡಿಬಿಗೆ 5 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ನ ಕೆಲವರು ಟೀಕೆ ಮಾಡ್ತಿದ್ದಾರೆ. ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾಂಗ್ರೆಸ್ ಕಾರಣ. ಮಾತೆತ್ತಿದ್ರೆ 40% ಅಂತಾ ಕಾಂಗ್ರೆಸ್ ಪಕ್ಷದವರು ಹೇಳ್ತಾರೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ತಂದ್ರು. ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್​ನವರು ಮಾತಾಡ್ತಿದ್ದಾರೆ ಎಂದು‌ ವಾಗ್ದಾಳಿ ನಡೆಸಿದರು.

ಪ್ರಿಯಾಂಕ್​ ಖರ್ಗೆ ವಿರುದ್ಧ ವಾಗ್ದಾಳಿ: ಈ ಭಾಗದಲ್ಲಿ ಸ್ಯಾಂಡ್ ಮಾಫಿಯಾ ಕಾಂಗ್ರೆಸ್ ಕೈವಾಡದಿಂದ ನಡೆಯುತ್ತಿತ್ತು. ಚುನಾವಣೆಗೆ ಸ್ಪರ್ಧಿಸಿದಾಗ ನಿಮ್ಮ ಆಸ್ತಿ ಎಷ್ಟಿತ್ತು?. ಈಗ ನಿಮ್ಮ ಆಸ್ತಿ ಎಷ್ಟಿದೆ. ಕಾಂಗ್ರೆಸ್ ಪಕ್ಷದವರೇ ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ. ಸಮಾಜ, ಧರ್ಮಗಳನ್ನು ಕಾಂಗ್ರೆಸ್​ನವರು ಒಡೆದ್ರು. 40% ಅಂತಾ ಹೇಳಿದ್ದು ಯಾರು ?. ಕಾಂಗ್ರೆಸ್​ನವರ ಕೈಗೊಂಬೆ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಹೊರಬಂದು 40% ಅಂತಾ ಹೇಳಿದ್ದಾರೆ ಎಂದು ಹೆಸರು ಹೇಳದೆ ಶಾಸಕ ಪ್ರಿಯಾಂಕ್​ ಖರ್ಗೆ ವಿರುದ್ಧ ಹರಿಹಾಯ್ದರು.

ಓದಿ:ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತನ್ನಿ: ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details