ಕರ್ನಾಟಕ

karnataka

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು.. ಗೃಹಸಚಿವರ ಪ್ರತಿ ಏಟು

By

Published : Jan 9, 2023, 7:38 PM IST

Updated : Jan 9, 2023, 9:44 PM IST

ಸ್ಯಾಂಟ್ರೋ ರವಿ ಮಂತ್ರಿಗಳ ನಡವಿನ ಸಂಬಂಧದ ವಿಚಾರವಾಗಿ ಇಂದು ಕಲಬುರಗಿಯಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

hdk react on araga jnanendra statement
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಹೆಚ್​ಡಿಕೆ ಪ್ರತಿಕ್ರಿಯೆ

ಆರಗ ಜ್ಞಾನೇಂದ್ರ ಹೇಳಿಕೆಗೆ ಹೆಚ್​ಡಿಕೆ ಪ್ರತಿಕ್ರಿಯೆ

ಕಲಬುರಗಿ:ಸ್ಯಾಂಟ್ರೋ ರವಿ ಮತ್ತು ಮಂತ್ರಿಗಳ ನಡುವೆ ಸಂಬಂಧ ವಿಚಾರವಾಗಿ ಇಲ್ಲ ಸಲ್ಲದ ಆರೋಪ‌ ಮಾಡುತ್ತಿದ್ದಾರೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಖಜೂರಿಯಲ್ಲಿ ಮಾತನಾಡಿದ ಅವರು, ನಾನು ಯಾವ ಇಲ್ಲ ಸಲ್ಲದ ಆರೋಪ ಮಾಡಿದಿನಿ?, ಸ್ಯಾಂಟ್ರೋ ರವಿ ಕೆಲವು ಮಂತ್ರಿಗಳ ಜೊತೆ ಇರುವ ಫೋಟೋ ಬಂದಿದೆ. ಇದೆಲ್ಲಾ ನಾನು ಬಿಡುಗಡೆ ಮಾಡಿದ್ದಲ್ಲ, ಸಾರ್ವಜನಿಕವಾಗಿ ಹರಿದಾಡುತ್ತಿದೆ.

ಆ ವ್ಯಕ್ತಿ ನೂರಾರು ಜನ ಪೊಲೀಸ್ ಅಧಿಕಾರಿಗಳ ಹತ್ತಿರ ಹಣ ತಗೊಂಡು ಬನ್ನಿ ಎಲ್ಲಿಗೆ ಬೇಕೋ ವರ್ಗಾವಣೆ ಮಾಡಿಸ್ತಿನಿ ಅಂತ ಹೊರಟವನು. ಆ ಹಣ ಗೃಹ ಸಚಿವರ ಮನೆಯಲ್ಲಿ ಲೆಕ್ಕಾ ಹಾಕದಿದ್ರೆ ಇನ್ನೆಲ್ಲಿ ಲೆಕ್ಕ ಹಾಕ್ತಿದ್ರು ಅನ್ನೋ ಬಗ್ಗೆ ತನಿಖೆ ಮಾಡಬೇಕಲ್ವೆ? ಎಂದು ಹೇಳಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ದೇವರಾಜ್ ಎನ್ನುವ ಅಧಿಕಾರಿ ಜೊತೆ ಈತ ಸೇರಿ ಎಷ್ಟು ವರ್ಷಗಳಿಂದ ಈ ವ್ಯವಹಾರ ನಡೆಸುತ್ತಿದ್ದಾನೆ‌.

ಇದಕೆಲ್ಲ ಒಪ್ಪಿಗೆ ಕೊಟ್ಟಿದ್ದು ಯಾರು?. ಸರ್ಕಾರಕ್ಕೆ ಗೊತ್ತಿರಲಿಲ್ವಾ? ಈ ಸಮಯದಲ್ಲಿ ಗೃಹ ಇಲಾಖೆ ಏನು ಮಾಡುತಿತ್ತು?. ಜನ ನನ್ನ ಜೊತೆ ಫೋಟೋ ತೆಗೆಸಿಕೊಂಡಷ್ಟು ಬೇರಾವ ರಾಜಕಾರಣಿ ಜೊತೆ ತೆಗೆಸಿಕೊಂಡಿರಲ್ಲ‌. ಆ ರೀತಿ ಪೊಟೋ ತೆಗೆಸಿಕೊಂಡಿದ್ದು ತಪ್ಪು ಅಂತ ನಾನು ಅನ್ನಲ್ಲ. ಆದರೆ ಆ ವ್ಯಕ್ತಿ ಸರಕಾರದ ಆಡ್ಮಿನಿಸ್ಟ್ರೇಷನ್​ನಲ್ಲಿ ಶಾಮೀಲಾಗಿದ್ದಾನೆ. ಆ ವ್ಯಕ್ತಿ ಡಿಜಿ ಜೊತೆ ಒನ್​ ಟು ಒನ್ ಇದ್ದೇನೆ ಅಂತ ಆಡಿಯೋದಲ್ಲಿ ಹೇಳಿದ್ದಾನೆ. ಹೀಗಿರುವಾಗ ಇವರು ಡಿಜಿ ಅವರಿಂದ ತನಿಖೆ ಮಾಡಿಸಿದರೆ ಅವರು ಎಲ್ಲಿಂದ ತನಿಖೆ ಮಾಡ್ತಾರೆ ? ಎಂದು ಪ್ರಶ್ನಿಸಿದರು.

ಗೃಹ ಸಚಿವರ ವೈಯಕ್ತಿಕ ವಿಚಾರ ಇಟ್ಟುಕೊಂಡು ತೇಜೋವಧೆ ಮಾಡಲು ನಾನು ಹೋಗಿಲ್ಲ. ಅವರ ಇಲಾಖೆಗೆ ಸಂಬಂಧಿಸಿದ ವಿಚಾರ ಪ್ರಶ್ನೆ ಮಾಡಬಾರದಾ? ಇದು ಟೆರರಿಸಂಗಿಂತ ದೊಡ್ಡ ಸಮಾಜ ಘಾತಕ ಕೆಲಸ. ಟೆರರಿಸಂ ನಿಂದ ಅಮಾಯಕರು ಬಲಿ ಆಗುತ್ತಾರೆ. ಆದರೆ, ಇದರಿಂದ ಸಮಾಜವೇ ಬಲಿಯಾಗುತ್ತಿದೆ. ಆ ವ್ಯಕ್ತಿ ಸಿಎಂ ನನಗೆ ಸಾರ್ ಅಂತಾ ಕರಿತಾರೆ ಎಂದು ಹೇಳುತ್ತಾನೆ. ಈ ಥರ ಇರುವಾಗ ಸರಕಾರದಿಂದ ಹೇಗೆ ತನಿಖೆ ಸಾಧ್ಯ?, ನೂರಾರು ಜನ ಪೊಲೀಸರೇ ಆತನೊಂದಿಗೆ ಹಣದ ವ್ಯವಹಾರ ಮಾಡಿರುವಾಗ ಅವರಿಂದ ತನಿಖೆಗೆ ಸಾಧ್ಯವಿಲ್ಲ ಎಂದು ಆರೋಪಿಸಿದರು.

ಪ್ರಕರಣದ ತನಿಖೆ ಬಗ್ಗೆ ಹೈಕೋರ್ಟ ಚೀಫ್ ಜಸ್ಟಿಸ್​ಗೆ ಮನವಿ ಮಾಡಿಕೊಳ್ಳಿ, ಹೈಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಯಲಿ ಎಂದು ಹೇಳಿದ ಎಚ್‌ಡಿಕೆ, ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾನೆ.‌ ಜಾಮೀನು ಪಡೆಯೋವರೆಗೆ ಅವನನ್ನು ಬಿಡ್ತಾರೆ. ನಂತರ ಹಿಡಿಯೋದ್ರಿಂದ ಏನು ಪ್ರಯೋಜನ ಎಂದು‌ ಪ್ರಶ್ನೆ ಮಾಡಿದರು.

ಹೆಚ್​​ಡಿಕೆ ಹೇಳಿಕಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ: ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆ ಸ್ಯಾಂಟ್ರೋ ರವಿಯ ಪೋಟೋ ವಿಚಾರವಾಗಿ ಹೆಚ್​ಡಿಕೆ ಆರೋಪಕ್ಕೆ, ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಹೆಚ್​ಡಿಕೆ ನನ್ನ ಮೇಲೆ ವೈಯಕ್ತಿಕ ತೇಜೋವಧೆ ಮಾಡುವುದರಿಂದ ಅವರಿಗೆ ಏನೂ ಲಾಭವಿಲ್ಲ. ಮೈಸೂರು ಆಯುಕ್ತರು ಮತ್ತು ಡಿಜಿಯವರಿಗೆ ಸ್ಯಾಂಟ್ರೋ ರವಿಯನ್ನು ಕರೆತಂದು ಸಂಪೂರ್ಣ ವಿಚಾರಣೆ ನಡೆಸಲು ಹೇಳಲಾಗಿದೆ.

ಸ್ಯಾಂಟ್ರೋ ರವಿ ನನ್ನ ಜೊತೆ ಬಂದಿರಬಹುದು, ಯಾರು ಬೇಕಾದರೂ ನನ್ನ ಮನೆಗೆ ಬರುತ್ತಾರೆ. ಬೇಡಿಕೆ ಇಡುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದವರು, ಸಾವಿರಾರು ಜನರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಯಾರಿಗೂ ಪೊಲೀಸ್ ಸರ್ಟಿಫಿಕೇಟ್ ಇಟ್ಟುಕೊಂಡು ಬನ್ನಿ ಎಂದಿದ್ದನ್ನು ನೋಡಿಲ್ಲ ಎಂದರು.

ಇದನ್ನೂ ಓದಿ:ಫೋಟೋದಿಂದ ತೇಜೋವಧೆ ಮಾಡಿದರೆ ಏನೂ ಲಾಭವಿಲ್ಲ: ಸಚಿವ ಆರಗ ಜ್ಞಾನೇಂದ್ರ

Last Updated :Jan 9, 2023, 9:44 PM IST

ABOUT THE AUTHOR

...view details