ಕರ್ನಾಟಕ

karnataka

ಕಲಬುರಗಿಗೆ ಬಂದ ಏರ್ ಆ್ಯಂಬುಲೆನ್ಸ್: ಇಂದು ಸಿಪಿಐ ಶ್ರೀಮಂತ ಇಲ್ಲಾಳ ಬೆಂಗಳೂರಿಗೆ ಏರ್​ಲಿಫ್ಟ್

By

Published : Sep 25, 2022, 10:06 PM IST

Updated : Sep 26, 2022, 6:33 AM IST

ಕುಟುಂಬ ಸದಸ್ಯರ ಮನವಿ ಮೇರೆಗೆ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ಸೋಮವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿಗೆ ಏರ್‌ ಲಿಫ್ಟ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

district-administration-ready-for-airlift-of-cpi-shreemant-illal-to-bengaluru
ನಾಳೆ ಸಿಪಿಐ ಶ್ರೀಮಂತ ಇಲ್ಲಾಳರನ್ನು ಬೆಂಗಳೂರಿಗೆ ಏರ್‌ ಲಿಫ್ಟ್

ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಚಿಂತಾಜನಕ‌ ಸ್ಥಿತಿಯಲ್ಲಿರುವ ಕಲಬುರಗಿ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ಶ್ರೀಮಂತ ಇಲ್ಲಾಳ ಅವರನ್ನು ಸೋಮವಾರ ಏರ್‌ ಲಿಫ್ಟ್ ಮೂಲಕ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಈಗಾಗಲೇ ಕೊಚ್ವಿಯಿಂದ ಏರ್ ಆ್ಯಂಬುಲೆನ್ಸ್​ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಸದ್ಯ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಇಲ್ಲಾಳ ಅವರ ಆರೋಗ್ಯ ಕೊಂಚ ಸುಧಾರಿಸಿದೆ. ರಕ್ತದೊತ್ತಡ, ಕಿಡ್ನಿ ಕೆಲಸಗಳು ಸಹಜ ಸ್ಥಿತಿಗೆ ಮರಳಿವೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆದಿದೆ.

ಆದರೆ, ಇಲ್ಲಾಳ ಅವರ ಕುಟುಂಬ ಸದಸ್ಯರು ಹೆಚ್ಚಿನ ಚಿಕಿತ್ಸೆಗೆ ಒತ್ತಾಯಿಸಿದ ಹಿನ್ನೆಲೆ ಇಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿಗೆ ಏರ್​ಲಿಫ್ಟ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಏರ್​ಲಿಫ್ಟ್ ಮೂಲಕ ಕರೆದೊಯ್ಯಲು ವೈದ್ಯರು ಇನ್ನೂ ಸಂಪೂರ್ಣವಾದ ಒಪ್ಪಿಗೆ ಸೂಚಿಸಿಲ್ಲ. ಯುನೈಟೆಡ್ ಆಸ್ಪತ್ರೆ ವೈದ್ಯರು, ಮಣಿಪಾಲ ಆಸ್ಪತ್ರೆ ವೈದ್ಯರು, ಏರ್ ಆ್ಯಂಬುಲೆನ್ಸ್ ವೈದ್ಯರು ಜಂಟಿಯಾಗಿ ಚರ್ಚಿಸಿದ್ದು, ಇಂದು ಮತ್ತೊಮ್ಮೆ ಆರೋಗ್ಯ ಸ್ಥಿರತೆ ನೋಡಿಕೊಂಡು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ:ಸಿಪಿಐ ಆರೋಗ್ಯದಲ್ಲಿ ಕೊಂಚ ಚೇತರಿಕೆ, ಆದರೂ 24 ಗಂಟೆ ಏನನ್ನೂ ಹೇಳಲು ಆಗಲ್ಲ: ವೈದ್ಯರ ಸ್ಪಷ್ಟನೆ

Last Updated : Sep 26, 2022, 6:33 AM IST

ABOUT THE AUTHOR

...view details