ಕರ್ನಾಟಕ

karnataka

ಹಾವೇರಿ: ಹಗಲು ಹೊತ್ತಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

By ETV Bharat Karnataka Team

Published : Dec 17, 2023, 1:18 PM IST

ಹಾವೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್​ಗಳನ್ನು​ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ
ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ಹಾವೇರಿ :ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಹಗಲು ಹೊತ್ತಿನಲ್ಲಿ ಹೊಂಚು ಹಾಕಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದ ಸಚಿನ್ ಸಂಕ್ಲಿಪುರ (24) ಮತ್ತು ಉಡಚಪ್ಪ ದಿಪಾಳಿ (25) ಎಂದು ಗುರುತಿಸಲಾಗಿದೆ. ಸುಮಾರು 4,65,000 ಲಕ್ಷ ಮೌಲ್ಯದ 13 ಬೈಕ್​ಗಳ ಜಪ್ತಿ ಮಾಡಿ, ವಶಕ್ಕೆ ಪಡೆಯಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಬಸ್ ನಿಲ್ದಾಣ, ಹೋಟೆಲ್, ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆ ನಿಲ್ಲಿಸಿದ್ದ ಬೈಕಗಳನ್ನು ಕಳ್ಳತನ ಮಾಡಿದ್ದರು. ಹಾವೇರಿ ನಗರದಲ್ಲಿ ಇತ್ತೀಚೆಗೆ ಬೈಕ್‌ಗಳ ಕಳ್ಳತನ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ಹಾವೇರಿ ಎಸ್ಪಿ ಅಂಶುಕುಮಾರ್ ಹಾವೇರಿ ನಗರ ಠಾಣೆಯ ಸಿಪಿಐ ಮೋತಿಲಾಲ್ ಪವಾರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ಜಿಲ್ಲೆಯಾದ್ಯಂತ ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು.

ಆರೋಪಿಗಳು ಹೆಲ್ಮೆಟ್​ ತಪಾಸಣೆ ವೇಳೆ ಅನುಮಾನಕಾರವಾಗಿ ವರ್ತಸಿದ್ದರು. ಇದನ್ನರಿತ ತಂಡ ಹೆಚ್ಚಿನ ವಿಚಾರಣೆ ನಡೆಸಿದಾಗ ಬೈಕ್‌ಗಳ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದು, ಕದ್ದ ಬೈಕ್‌ಗಳನ್ನು ಕಡಿಮೆ ಹಣಕ್ಕೆ ಮಾರುತ್ತಿದ್ದರು. ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುವವರು ಎಲ್ಲ ದಾಖಲಾತಿಗಳ ಪರಿಶೀಲಿಸಿ ನಡೆಸಿದ ನಂತರ ಬೈಕ್ ಖರೀದಿ ಮಾಡಬೇಕು. ಯಾವುದಾದರೂ ವ್ಯಕ್ತಿ ಕಡಿಮೆ ಹಣಕ್ಕೆ ದಾಖಲಾತಿಗಳಿಲ್ಲದ ಬೈಕ್ ಮಾರಾಟ ಮಾಡುತ್ತಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಅಲ್ಲದೆ ಬೈಕ್‌ಗಳನ್ನು ನಿಲ್ಲಿಸಿ ಹೋಗುವಾಗ ಹ್ಯಾಂಡಲ್​ ಲಾಕ್ ಮಾಡಿ ಪರಿಚಯದವರ ಅಂಗಡಿ ಮನೆಗಳ ಮುಂದೆ ಇರಿಸಿ ಹೋಗಬೇಕು. ಇಲ್ಲವೇ ಕೆಲವು ಕಡೆ ಹಣ ಪಾವತಿಸಿದ ಪಾರ್ಕಿಂಗ್ ಲಾಟ್‌ಗಳಲ್ಲಿ ಬೈಕ್ ನಿಲ್ಲಿಸಿ ಹೋದರೆ ಸೂಕ್ತ ಎಂದು ಹಾವೇರಿ ನಗರ ಸಿಪಿಐ ಮೋತಿಲಾಲ್ ಪವಾರ್ ಸಲಹೆ ನೀಡಿದ್ದಾರೆ. ತಂಡದ ಕಾರ್ಯಾಚರಣಿಗೆ ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಪ್ಯಾಂಟ್​ನಲ್ಲಿ ಚಿನ್ನ ಅಡವಿಟ್ಟು ಅಕ್ರಮ ಸಾಗಣೆ:ಪ್ಯಾಂಟ್​ನಲ್ಲಿ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಓರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಡಿಸೆಂಬರ್ 14 ರಂದು ದುಬೈನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ ಆರೋಪಿ ಪ್ರಯಾಣಿಕ ತಪಾಸಣೆ ವೇಳೆ ಆತ ಧರಿಸಿದ್ದ ಪ್ಯಾಂಟ್ ಅನ್ನು ಖುದ್ದಾಗಿ ಪರಿಶೀಲಿಸಿದಾಗ ಮತ್ತು ಸ್ಕ್ಯಾನ್ ಮಾಡುವಾಗ ಕಪ್ಪು ಚಿತ್ರ ಕಾಣಿಸಿಕೊಂಡಿತು ಮತ್ತು ಪ್ಯಾಂಟ್ ಅನ್ನು ಮತ್ತಷ್ಟು ತೆರೆದಾಗ, ಪ್ಯಾಂಟ್‌ನ ಪದರಗಳಲ್ಲಿ ಮರೆಮಾಡಲಾಗಿದ್ದ ಹಳದಿ ಬಣ್ಣದ ಪೇಸ್ಟ್ ವಸ್ತು ಪತ್ತೆಯಾಗಿದೆ. ಇದರಲ್ಲಿ 286 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ. 17,73,200 ಎಂದು ಅಂದಾಜಿಸಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.

ಇದನ್ನೂ ಓದಿ :ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಸ್ನೇಹಿತರಿಬ್ಬರ ಬಂಧನ

ABOUT THE AUTHOR

...view details