ಕರ್ನಾಟಕ

karnataka

ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ: ಸಿಎಂ

By

Published : Feb 1, 2023, 9:52 PM IST

Updated : Feb 1, 2023, 10:50 PM IST

ಕಾಂಗ್ರೆಸ್​ ಸರ್ಕಾರ ಇದ್ದಾಗ ಮೆಡಿಕಲ್​ ಕಾಲೇಜು ಗದಗಕ್ಕೆ ಸ್ಥಳಾಂತರಗೊಂಡಿತ್ತು. ಈಗ ಹಾವೇರಿಯಲ್ಲೇ ಸ್ಥಾಪನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ಕೊಟ್ಟರು.

politically-i-will-answer-where-i-have-to-answer-basavaraja-bommai
ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಉತ್ತರ ಕೊಡುತ್ತೇನೆ : ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ತಿರುಗೇಟು

ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ: ಸಿಎಂ

ಹಾವೇರಿ: ಕೃಷಿಗೆ ಉತ್ತೇಜನ ನೀಡುವ ಬಜೆಟ್ ಮಂಡನೆಯಾಗಿದೆ. ಸುಮಾರು ಒಂದೂವರೆ ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾವೇರಿ ಜಿಲ್ಲೆಗೆ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅವರಿಗೆ ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ. ಸಾರ್ವಜನಿಕ ಜೀವನದಲ್ಲಿದ್ದಾಗ ಬದ್ಧತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಇವರಿಂದ ಕಲಿಯಬೇಕಿಲ್ಲ ಎಂದರು.

ಹಿಂದಿನ ಕಾಂಗ್ರೆಸ್​ ಸರ್ಕಾರ ಕಳೆದ ಐದು ವರ್ಷದಲ್ಲಿ ಇಡೀ ಹಾವೇರಿ ಜಿಲ್ಲೆಯ ನೀರಾವರಿ ಯೋಜನೆಗೆ 271 ಕೋಟಿ ರೂ ಅನುಮೋದನೆ ಕೊಟ್ಟಿದ್ದರು. ಅನುಮೋದನೆಗೊಂಡ ಮೊತ್ತದಲ್ಲಿ ಸುಮಾರು 200 ಕೋಟಿ ಹಣವನ್ನು ಬಿಡುಗಡೆ ಮಾಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ 1614 ಕೋಟಿ ಮೊತ್ತವನ್ನು ಜಿಲ್ಲೆಯ ಅಭಿವೃದ್ಧಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಜನೋಪಯೋಗಿ ಶಾಸಕ. ಬ್ಯಾಡಗಿ ಕ್ಷೇತ್ರದ ಮತದಾರರು ಬರುವ ಮುಂದಿನ ಚುನಾವಣೆಯಲ್ಲಿ ವಿರುಪಾಕ್ಷಪ್ಪ ಬಳ್ಳಾರಿ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಸಿಎಂ ಮನವಿ ಮಾಡಿದರು. ಈ ಮಾತುಗಳಿಂದ ವಿರುಪಾಕ್ಷಪ್ಪ ಬಳ್ಳಾರಿ ಅವರಿಗೆ ಬ್ಯಾಡಗಿ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಪರೋಕ್ಷವಾಗಿ ಸ್ಪಷ್ಟಪಡಿಸಿದರು.

ಹಾವೇರಿಯಲ್ಲಿಯೇ ಮೆಡಿಕಲ್ ಕಾಲೇಜು ಉದ್ಘಾಟನೆ: ನಮ್ಮ ಸರ್ಕಾರ ಬದ್ಧತೆ ಇರುವ ಸರ್ಕಾರ. ನೀರಾವರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ರೈತರಿಗೆ ಶಕ್ತಿ ನೀಡಿದರೆ ಆತ ದೇಶಕ್ಕೆ ಅನ್ನ ನೀಡುತ್ತಾನೆ. ನಮ್ಮ ಸರ್ಕಾರ ರೈತನಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಯಾವ ದೇಶದಲ್ಲಿ ಆಹಾರದ ಸುರಕ್ಷತೆ ಇರುತ್ತದೋ ಅದು ಸ್ವಾವಲಂಬಿ ದೇಶವಾಗಿರುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಹಾವೇರಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಅನ್ನು ಗದಗ ಜಿಲ್ಲೆಗೆ ಸ್ಥಳಾಂತರ ಮಾಡಿದ್ದರು. ಆದರೆ, ನಮ್ಮ ಸರ್ಕಾರ ಹಾವೇರಿಯಲ್ಲಿಯೇ ಮೆಡಿಕಲ್ ಕಾಲೇಜ್ ಸ್ಥಾಪಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್‌ನವರು ದೇಶಕ್ಕೆ ಸ್ವಾತಂತ್ರ ಬಂದ ಮೇಲೆ 60ವರ್ಷ ಆಡಳಿತ ಮಾಡಿದ್ದಾರೆ. ಆದರೆ, ಅದು ಜನರಿಗೆ ವರ ಆಗಲಿಲ್ಲ ಬದಲಾಗಿ ಶಾಪವಾಗಿ ಪರಿಣಮಿಸಿತು ಎಂದು ಹರಿಹಾಯ್ದರು. ಕಾಂಗ್ರೆಸ್‌ನವರು ದೊಡ್ಡಾಟದಲ್ಲಿ ಪಾತ್ರದಾರಿಗಳಂತೆ ನಾವು ಅಕ್ಕಿ ಕೊಟ್ಟೆವು, ಕೋಳಿ ಕೊಟ್ಟೇವು ಎಂದು ಕುಣಿಯುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನೀಡಿದ್ದು ಪ್ರಧಾನಿ ಮೋದಿಯವರು. ಆದರೆ ಅಕ್ಕಿ ಚೀಲಕ್ಕೆ ಸಿದ್ದರಾಮಯ್ಯ ಫೋಟೋ ಅಂಟಿಸಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ಮುಂದುವರಿದ ಭಾಗವೇ ಈ ಬಜೆಟ್‌': ಸಿದ್ದರಾಮಯ್ಯ

Last Updated :Feb 1, 2023, 10:50 PM IST

ABOUT THE AUTHOR

...view details