ಹಾವೇರಿ: ಲಾಕ್ಡೌನ್ ಪರಿಣಾಮ ಹಾವೇರಿಯಲ್ಲಿರುವ ಪತ್ರಿ ಕೋಳಿ ಸಾಕಾಣಿಕೆ ಕೇಂದ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಲಾಕ್ಡೌನ್ನಿಂದಾಗಿ ಕೋಳಿ ಫಾರ್ಮ್ಗಳಿಗೆ ಕಾರ್ಮಿಕರು ಬರುವುದು ನಿಂತಿದೆ. ಕಾರ್ಮಿಕರಿಲ್ಲದೆ ಕೋಳಿ ಫಾರ್ಮ್ ನಡೆಸುವುದೇ ಕಷ್ಟವಾಗಿದೆ. ಕೋಳಿ ಫಾರ್ಮ್ನಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳ ವಿತರಣೆ, ಸಾಗಣಿಕೆಗೂ ತೊಂದರೆಯಾಗಿದೆ ಎಂದು ಕೋಳಿ ಸಾಕಣಿಕೆ ಕೇಂದ್ರದ ಮಾಲೀಕರು ಹೇಳುತ್ತಾರೆ.
ಪ್ರತ್ಯೇಕ ಪ್ಯಾಕೇಜ್ ಘೋಷಿಸುವಂತೆ ಮಾಲೀಕರ ಆಗ್ರಹ ಕೋಳಿ ಮೊಟ್ಟೆಗಳ ಪ್ರಮುಖ ಖರೀದಿದಾರರು ಎಗ್ರೈಸ್ ಸೆಂಟರ್ನವರು, ಡಾಬಾಗಳು. ಇದೀಗ ಇವುಗಳು ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ಮೊಟ್ಟೆ ಮಾರಾಟ ಕುಸಿದಿದ್ದು ನಷ್ಟವಾಗುತ್ತಿದೆ.
ಹಲವು ಸಂಕಷ್ಟಗಳ ನಡುವೆ ತಾವು ಕೋಳಿ ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದು, ಇದರ ನಡುವೆ ಲಾಕ್ಡೌನ್ ಜಾರಿಗೆಯಾಗಿರುವುದು ಗಂಭೀರ ಸಮಸ್ಯೆ ತಂದಿದೆ. ಲಾಕ್ಡೌನ್ ವೇಳೆ ತಮಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.