ಕರ್ನಾಟಕ

karnataka

ಭಾರಿ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

By

Published : Jul 7, 2022, 10:46 PM IST

ಹಾವೇರಿ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು,ಇಲ್ಲಿನ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಸೇತುವೆ ಮುಳುಗಡೆಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ.

heavy-rain-in-haveri-district
ಭಾರೀ ಮಳೆ : ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನದಿಗಳು

ಹಾವೇರಿ : ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಗೆ ಜಿಲ್ಲೆಯಲ್ಲಿ ಹರಿಯುವ ತುಂಗ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಹೆಚ್ಚುವರಿ ಮಳೆಯಾಗುತ್ತಿದ್ದು ನದಿಗಳು ಕೆಲವು ಕಡೆ ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಭಾರಿ ಮಳೆ : ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನದಿಗಳು

ಹಾವೇರಿ ತಾಲೂಕು ಮತ್ತು ಹಾನಗಲ್ ತಾಲೂಕು ಸಂಪರ್ಕಿಸುವ ನಾಗನೂರು ಕೂಡಲ ಮಧ್ಯದ ಬ್ಯಾರೇಜ್ ಕಮ್ ಸೇತುವೆ ಮೇಲೆ ವರದಾ ನದಿ ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಹಾವೇರಿ ಜಿಲ್ಲಾಡಳಿತ ಕಚೇರಿ ಮತ್ತು ಕಳಸೂರು ಸಂಪರ್ಕಿಸುವ ಸೇತುವೆಯೂ ಮುಳುಗಡೆಯಾಗಿದೆ. ಮುಂಜಾಗೃತಾ ಕ್ರಮವಾಗಿ ಜನರಿಗೆ ನದಿ ತಟಗಳಿಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ತೀರದಲ್ಲಿ ವಾಸಿಸುವ ಜನರು ಮುಂಜಾಗೃತೆಯಿಂದ ಇರುವಂತೆ ಸೂಚಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಜಿಲ್ಲೆಗೆ ಮೀಸಲಿಡಲಾಗಿದೆ.

ಓದಿ :ಕಲಬುರಗಿಯಲ್ಲಿ ಭಾರಿ ಮಳೆ.. ಟ್ರಾಫಿಕ್ ಜಾಮ್​ನಿಂದ ವಾಹನ ಸವಾರರಿಗೆ ತೊಂದರೆ

ABOUT THE AUTHOR

...view details