ETV Bharat / city

ಕಲಬುರಗಿಯಲ್ಲಿ ಭಾರಿ ಮಳೆ.. ಟ್ರಾಫಿಕ್ ಜಾಮ್​ನಿಂದ ವಾಹನ ಸವಾರರಿಗೆ ತೊಂದರೆ

author img

By

Published : Jul 7, 2022, 9:55 PM IST

ತುಂಗಾ ಜಲಾಶಯದಿಂದ ನದಿಗೆ 59 ಕ್ಯುಸೆಕ್ ನೀರು ಬಿಡಲಾಗಿದೆ. ಜೊತೆಗೆ ಶಿವಮೊಗ್ಗ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ನದಿಪಾತ್ರದ ವಿಜಯನಗರ ಜಿಲ್ಲೆಯ ಜನರು ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.

ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿರುವುದು
ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿರುವುದು

ಕಲಬುರಗಿ: ಜಿಲ್ಲೆಯ ವಿವಿಧೆಡೆ ವರುಣಾರ್ಭಟ ಮುಂದುವರೆದಿದೆ. ಪರಿಣಾಮ ನಗರದ ಆರ್ಚಿಡ್ ಮಾಲ್, ಸೂಪರ್ ಮಾರ್ಕೆಟ್ ರಸ್ತೆ ಸಂಪೂರ್ಣ ಜಲಮಯವಾಗಿತ್ತು. ಚರಂಡಿ ಭರ್ತಿಯಾಗಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಭಾರಿ ಮಳೆಯಿಂದ ನೀರು ಹರಿಯುತ್ತಿರುವುದು

ಕಳೆದ ಎರಡು ಮೂರು ದಿನಗಳಿಂದ ನಗರದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಏಕಾಏಕಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಅಂಗಡಿ ಮುಂಗಟ್ಟುಗಳಿಗೆ ನೀರು ಹಾಕಿದ್ದಲ್ಲದೇ ನಗರದ ಬಹುಪಾಲು ಪ್ರದೇಶಗಳಲ್ಲಿ ನೀರು ಶೇಖರಣೆಗೊಂಡು ಜನ ಪರದಾಡಿದ ಪ್ರಸಂಗ ನಡೆಯಿತು.

ವಿಜಯನಗರ: ತುಂಗಾ ಜಲಾಶಯದಿಂದ ನದಿಗೆ 59 ಕ್ಯೂಸೆಕ್ ನೀರು ಬಿಡಲಾಗಿದೆ. ಜೊತೆಗೆ ಶಿವಮೊಗ್ಗ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ನದಿಪಾತ್ರದ ವಿಜಯನಗರ ಜಿಲ್ಲೆಯ ಜನರು ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.

ತುಂಗಾ ಜಲಾಶಯ

ನದಿಪಾತ್ರಕ್ಕೆ ತೆರಳದೇ ಜನರು ಎಚ್ಚರಿಕೆ ವಹಿಸಬೇಕು. ಮೀನುಗಾರರು ನದಿಗೆ ಇಳಿಯಬಾರದು. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯಬೇಕು. ನದಿಪಾತ್ರದ ಊರುಗಳ ಜನರು ಎಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹೇಶ್​ಬಾಬು ಅಲರ್ಟ್ ಸಂದೇಶ ರವಾನಿಸಿದ್ದಾರೆ.

ಜಿಲ್ಲಾಡಳಿತದಿಂದ ಸೂಚನೆ
ಜಿಲ್ಲಾಡಳಿತದಿಂದ ಸೂಚನೆ

ಓದಿ: PSI ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.