ಕರ್ನಾಟಕ

karnataka

ಹಾವೇರಿ ಜಿಲ್ಲಾ ಪೊಲೀಸ್​ ಸಿಬ್ಬಂದಿಗೆ ಲಸಿಕೆ; ಡೋಸ್​​ ಸಿಗದೆ ಸಾರ್ವಜನಿಕರಿಗೆ ನಿರಾಸೆ

By

Published : May 15, 2021, 6:40 PM IST

ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗೆ ಕೊರೊನಾ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅವರ ಸಂಬಂಧಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

haveri-district-police-received-the-covid-vacc
ಹಾವೇರಿ ಜಿಲ್ಲಾ ಪೊಲೀಸ್

ಹಾವೇರಿ: ಜಿಲ್ಲಾ ಪೊಲೀಸ್​​ ಸಿಬ್ಬಂದಿ ಮತ್ತು ಕುಟುಂಬದವರಿಗೆ ಕೋವಿಡ್ ಲಸಿಕೆ ಹಾಕಲಾಯಿತು. ಎಎಸ್ಪಿ ವಿಜಯಕುಮಾರ್​ ಸ್ವತಃ ಆರೋಗ್ಯ ತಪಾಸಣೆಗೆ ಒಳಪಡುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗೆ ಕೊರೊನಾ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅವರ ಸಂಬಂಧಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

ಕೋವಿಡ್​​ ಲಸಿಕೆ ಪಡೆದ ಹಾವೇರಿ ಜಿಲ್ಲಾ ಪೊಲೀಸ್​ ಸಿಬ್ಬಂದಿ

ಮೊದಲನೇ ಡೋಸ್​ ಖಾಲಿ

ಸಾರ್ವಜನಿಕರಿಗೆ ಹಾವೇರಿ ಮುನಿಸಿಪಲ್ ಮೈದಾನದಲ್ಲಿ ಕೊರೊನಾ ಲಸಿಕೆ ನೀಡಲಾಯಿತು. ಲಸಿಕೆ ಕೊರತೆ ಇರುವ ಕಾರಣ ಮೊದಲ ಡೋಸ್ ಪಡೆದವರಿಗೆ ಮಾತ್ರ ಎರಡನೆಯ ಡೋಸ್ ನೀಡಲಾಯಿತು. ಕೊವ್ಯಾಕ್ಷಿನ್ ಲಸಿಕೆ ಪೂರೈಕೆ ಇಲ್ಲದಿರುವುದರಿಂದ ಮತ್ತು ಮೊದಲ ಡೋಸ್ ಲಸಿಕೆ ಪಡೆಯಲು ಬಂದ ಜನರು ತೀವ್ರ ನಿರಾಸೆ ವ್ಯಕ್ತಪಡಿಸಿದರು. ಲಸಿಕೆ ಹಾಕುವ ಕುರಿತಂತೆ ಆರೋಗ್ಯ ಇಲಾಖೆ ಸರಿಯಾದ ಮಾಹಿತಿ ಪ್ರಕಟಿಸುವಂತೆ ಜನರು ಆಗ್ರಹಿಸಿದರು.

ABOUT THE AUTHOR

...view details