ಕರ್ನಾಟಕ

karnataka

ಅಧಿವೇಶನದ ಬಳಿಕ 1-5ನೇ ತರಗತಿ ಪುನಾರಂಭ ಕುರಿತು ಅಂತಿಮ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

By

Published : Sep 19, 2021, 1:43 PM IST

ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್ ()

ಅಧಿವೇಶನದ ಬಳಿಕ ಪ್ರಾಥಮಿಕ ಶಾಲೆಗಳ ಪುನಾರಂಭ ಕುರಿತು ಸರ್ಕಾರ ಹಾಗೂ ತಜ್ಞರ ಜತೆ ಚರ್ಚಿಸಿ ತೀರ್ಮಾನ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ರಾಣೆಬೆನ್ನೂರು(ಹಾವೇರಿ): ಅಧಿವೇಶನ ಮುಗಿದ ಬಳಿಕ ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ 1 ರಿಂದ 5ನೇ ತರಗತಿಗಳ ಪುನಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ

ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮಾತನಾಡಿದ ಅವರು, ಸದ್ಯ ಅಧಿವೇಶನ ನಡೆಯುತ್ತಿದೆ. ಶಾಲಾ ಪುನಾರಂಭದ ಬಗ್ಗೆ ಸದನದಲ್ಲಿ ಎಲ್ಲಾ ಸಚಿವರ ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗುವುದು. ಅಧಿವೇಶನ ಮುಗಿದ ತಕ್ಷಣ ತಾಂತ್ರಿಕ ತಜ್ಞರ ಜತೆ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಬಳಿಕ, ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಇದನ್ನೂ ಓದಿ: ‌ವೃತ್ತಿಪರ ಕೋರ್ಸ್​ಗೆ ನಡೆದಿದ್ದ CET ಪರೀಕ್ಷೆ.. ನಾಳೆಯೇ ಫಲಿತಾಂಶ ಪ್ರಕಟ

ರಾಜ್ಯದಲ್ಲಿ ಶಾಲೆ ಪುನಾರಂಭ ಮಾಡಬಾರದು ಅನ್ನುವ ಉದ್ದೇಶ ನಮ್ಮಗಿಲ್ಲ. ಸರ್ಕಾರ ಹಾಗೂ ತಜ್ಞರು ನಾಳೆ ಶಾಲೆ ಪುನಾರಂಭ ಮಾಡಿ ಎಂದು ತಿಳಿಸಿದರೆ ಶಿಕ್ಷಣ ಇಲಾಖೆ, ನಮ್ಮ ಶಿಕ್ಷಕರು ಶಾಲೆ ಆರಂಭಕ್ಕೆ ಸಿದ್ಧವಾಗಿದ್ದಾರೆ. ಕೋವಿಡ್ ಇರುವ ಹಿನ್ನೆಲೆ ಒಂದರಿಂದ ಮೂರನೇ ತರಗತಿ ಮಕ್ಕಳ ಬಗ್ಗೆ ನಮಗೆ ಭಯವಿದೆ ಎಂದು ಸಚಿವರು ಹೇಳಿದ್ರು.

ABOUT THE AUTHOR

...view details