ಕರ್ನಾಟಕ

karnataka

ಸರ್ವಪಕ್ಷ ಸಭೆ ಅಟೆಂಡ್​ ಮಾಡೋಕೆ ಆಗಿಲ್ಲ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

By ETV Bharat Karnataka Team

Published : Sep 13, 2023, 4:53 PM IST

ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಹಾವೇರಿ : ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಗಳು ಇಂದು ಸರ್ವಪಕ್ಷ ಸಭೆ ಕರೆದಿದ್ದರು. ಇದಕ್ಕೆ ಹೋಗಲು ನನಗೆ ತಡರಾತ್ರಿ ಆಹ್ವಾನ‌ ಬಂದಿತ್ತು. ಹೀಗಾಗಿ ಅದಕ್ಕೆ ಅಟೆಂಡ್ ಮಾಡೊಕೆ ಆಗಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲಾ ಸವಣೂರಲ್ಲಿ ಮಾತನಾಡಿದ ಅವರು, ನಾನು ಇಂದು ಪ್ರವಾಸದಲ್ಲಿದ್ದೇನೆ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಈಗಾಗಲೇ 15,16 ಟಿಎಂಸಿಯ 15,000 ಕ್ಯೂಸೆಕ್​ ನೀರು ಹರಿಸಿದ್ದಾರೆ. ಮತ್ತೆ ನೀರು ಬಿಡಿ ಎನ್ನುವುದು ಸಾಧ್ಯವಾಗದ ಮಾತು. ಅಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟ ಇದೆ. ಮಳೆಗಾಲ ಇಲ್ಲ. ಹೀಗಾಗಿ ಕುಡಿವ ನೀರಿಗಾಗಿ ಸಂಗ್ರಹ ಮಾಡುವ ಅವಶ್ಯವಿದೆ. ತಮಿಳುನಾಡಿನವರು 1.8 ಲಕ್ಷ ಹೆಕ್ಟೇರ್​​ ಮಾಡಬೇಕು ಅಂತಾ ಕೇಳಿದ್ರು. ಆದರೆ, ಅವಶ್ಯಕತೆಗಿಂತ ಹೆಚ್ಚು 4 ಲಕ್ಷ ಹೆಕ್ಟೇರ್ ಮಾಡಿ ಅಕ್ರಮವಾಗಿ ನೀರು ಕೇಳ್ತಾ ಇದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ಪದೇ ಪದೆ ಹಿನ್ನಡೆಯ ವಿಚಾರ ಕುರಿತಂತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಗೆ ನೀರು ಕೊಡೊಲ್ಲಾ ಅಂತಾ 12ನೇ ತಾರೀಖಿನಂದೇ ಹೇಳಿದೆ. ಅದಕ್ಕೆ ಸರ್ಕಾರ ಬದ್ದವಾಗಿ ಇರಬೇಕು. ಯಾವುದೇ ಕಾರಣಕ್ಕೂ ನೀರು ಬಿಡಕೂಡದು. ಕೂಡಲೇ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ನೀರು ಯಾಕೆ ಬಿಡೊಕೆ ಆಗೋದಿಲ್ಲ ಎಂದು ಗಟ್ಟಿಯಾಗಿ ಪ್ರತಿಪಾದಿಸಬೇಕು. ಇದನ್ನೇ ಸರ್ಕಾರಕ್ಕೆ ಹೇಳಿದ್ದೇನೆ. ಇದೇ ನಮ್ಮ ಆಗ್ರಹ. ಮತ್ತೆ ಸರ್ವಪಕ್ಷ ಸಭೆ ಕರೆದಿರುವುದು ನೋಡಿದ್ರೆ. ಸುಪ್ರೀಂಕೋರ್ಟ್​ನಲ್ಲಿ ಪ್ರತಿಪಾದಿಸೋಕೆ ಆಗ್ತಾ ಇಲ್ಲ, ಮತ್ತೆ ಒತ್ತಡಕ್ಕೆ ಸಿಲುಕಿದ್ದಾರೆ ಎನಿಸುತ್ತೆ ಎಂದು ಬೊಮ್ಮಾಯಿ ಅನುಮಾನ ವ್ಯಕ್ತಪಡಿಸಿದರು.

ನಾವೆಲ್ಲ ಅವರ ಜೊತೆ ಇದ್ದೇವೆ. ಒತ್ತಡಕ್ಕೆ ಮಣಿಯಬಾರದು. ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಬೇಕು. ಗಟ್ಟಿಯಾಗಿ ನಿಲ್ಲುವ ಕಾಲ ಬಂದಿದೆ. ಹಿಂದೆ ಸರಿಯಬಾರದು. ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂದು ಈ ವೇಳೆ ತೋರಿಸಿಕೊಡಬೇಕಾಗಿದೆ ಎಂದು ಬೊಮ್ಮಾಯಿ ಒತ್ತಾಯಿಸಿದರು.

ಇದನ್ನೂ ಓದಿ:ಇಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ: ಜೆಡಿಎಸ್‌ ಜೊತೆ ಮೈತ್ರಿ ಕುರಿತು ವಿಸ್ತೃತ ಚರ್ಚೆ

ಕಮಿಷನರ್​ಗಳು ಕೂತು ಬಗೆಹರಿಸಬೇಕು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುವ ವಿಚಾರ ಕುರಿತಂತೆ ಮಾತನಾಡಿದ ಅವರು, ಅಲ್ಲಿಯ ಲೋಕಲ್ ನಾಯಕರು, ಕಮಿಷನರ್​ಗಳು ಕೂತು ಬಗೆಹರಿಸಬೇಕು. ಕಳೆದ ಬಾರಿ ಯಾವ ರೀತಿ ಆಗಿದೆ ಎನ್ನೋದು ನೋಡಿ. ಯಾರಿಗೂ ಸಮಸ್ಯೆ ಆಗದಂತೆ ಮಾಡಬೇಕು ಎಂದು ಬೊಮ್ಮಾಯಿ ತಿಳಿಸಿದರು.

ಉದ್ಯಮಿಗೆ ಮೋಸ ಚೈತ್ರಾ ಕುಂದಾಪುರ ಅರೆಸ್ಟ್ ವಿಚಾರ ಕುರಿತಂತೆ ಮಾತನಾಡಿದ ಅವರು, ಯಾರಾದರೂ ಅಪರಾಧದಲ್ಲಿ ಸಿಕ್ಕಾಗ ತಮ್ಮ ಮೈಮೇಲೆ ಇರೋದನ್ನ ತಪ್ಪಿಸಿಕೊಳ್ಳಲು ಹೇಳ್ತಾರೆ. ಪೊಲೀಸರು ಅದನ್ನು ತನಿಖೆ ಮಾಡಲಿ ಎಂದು ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ:ಕಾವೇರಿ ನದಿ ನೀರು ಹಂಚಿಕೆ ವಿಚಾರ: ಕಾನೂನು ತಜ್ಞರ ಜತೆ ಚರ್ಚಿಸಿ ಸುಪ್ರೀಂಕೋರ್ಟ್​ಗೆ ಮನವಿ - ಸಿಎಂ ಸಿದ್ದರಾಮಯ್ಯ

ABOUT THE AUTHOR

...view details