ಕರ್ನಾಟಕ

karnataka

ಕೋಳಿ ಫಾರಂಗೆ ನುಗ್ಗಿದ ಮಳೆ ನೀರು : ಹಲಗೇರಿ ಗ್ರಾಮದಲ್ಲಿ 7 ಸಾವಿರ ಕೋಳಿಗಳು ಸಾವು

By

Published : Nov 20, 2021, 8:45 PM IST

ಸುಮಾರು ಹತ್ತ ಲಕ್ಷಕ್ಕೂ ಅಧಿಕ ಸಾಲ ಮಾಡಿ ಖತೀಬ್​​ ಕೋಳಿ ಫಾರಂ ಮಾಡಿದ್ದರು. ಆದರೆ, ಮಳೆಯಿಂದ ಉಂಟಾಗಿರುವ ನಷ್ಟದಿಂದ ಕುಟುಂಬ ಪರಿಹಾರ ಕಂಗಾಲಾಗಿದೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ..

7 Thousand chickens died
ಮಳೆ ನೀರು ನುಗ್ಗಿ ಕೋಳಿಗಳು ಸಾವು

ರಾಣೇಬೆನ್ನೂರು :ಮಳೆಯ ನೀರು ಕೋಳಿ ಫಾರಂಗೆ ನುಗ್ಗಿ ಸುಮಾರು 7 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ಕೋಳಿ ಫಾರಂಗೆ ಮಳೆ ನೀರು ನುಗ್ಗಿ ಕೋಳಿಗಳು ಸಾವು..

ಗ್ರಾಮದ ಮಹಮದ್ ಶೇನ್ ಖತೀಬ್ ಎಂಬುವರಿಗೆ ಸೇರಿದ ಕೋಳಿ ಫಾರಂಗೆ ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ನೀರು ನುಗ್ಗಿ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಘಟನೆಯಿಂದ ಸುಮಾರು 7 ಲಕ್ಷ ರೂ. ನಷ್ಟ ಉಂಟಾಗಿದೆ. ಫಾರಂ ಮಾಲೀಕನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಸುಮಾರು ಹತ್ತ ಲಕ್ಷಕ್ಕೂ ಅಧಿಕ ಸಾಲ ಮಾಡಿ ಖತೀಬ್​​ ಕೋಳಿ ಫಾರಂ ಮಾಡಿದ್ದರು. ಆದರೆ, ಮಳೆಯಿಂದ ಉಂಟಾಗಿರುವ ನಷ್ಟದಿಂದ ಕುಟುಂಬ ಪರಿಹಾರ ಕಂಗಾಲಾಗಿದೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: COVID Update: ರಾಜ್ಯದಲ್ಲಿಂದು 213 ಜನರಲ್ಲಿ ಸೋಂಕು.. 5 ಮಂದಿ ಸಾವು

ABOUT THE AUTHOR

...view details