ಕರ್ನಾಟಕ

karnataka

ನರ್ಸ್​ ವೇಷದಲ್ಲಿ ಅರಕಲಗೂಡು ಆಸ್ಪತ್ರೆಗೆ ನುಗ್ಗಿದ ಕಿರಾತಕ.. ನವಜಾತ ಶಿಶು ಕದ್ದು ನಾಲ್ವರು ಎಸ್ಕೇಪ್​

By

Published : Mar 14, 2022, 5:11 PM IST

Updated : Mar 14, 2022, 6:44 PM IST

ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದ ನಾಲ್ವರು ಕಳ್ಳರು ಹೊಂಚು ಹಾಕಿ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್ ಗೆ ತೆರಳಿ ಹಸುಗೂಸನ್ನು ಕದ್ದಿದ್ದಾರೆ.

ಹಾಸನದ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕದ್ದು ಪರಾರಿಯಾದ ಕಳ್ಳರು
ಹಾಸನದ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕದ್ದು ಪರಾರಿಯಾದ ಕಳ್ಳರು

ಹಾಸನ: ಜನರನ್ನು ಬೆಚ್ಚಿಬೀಳಿಸುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನರ್ಸ್​ ವೇಷದಲ್ಲಿ ಬಂದು ನವಜಾತ ಶಿಶುವನ್ನು ಕಳ್ಳತನ ಮಾಡಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಮಗುವಿನ ಹುಡುಕಾಟಕ್ಕೆ ಆಸ್ಪತ್ರೆ ಅಧಿಕಾರಿಗಳು ಹಾಗೂ ಪೊಲೀಸರು ಮುಂದಾಗಿದ್ದಾರೆ.

ಘಟನೆ ವಿವರ:ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದ ನಾಲ್ವರು ಖದೀಮರು ಹೊಂಚು ಹಾಕಿ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್ ಗೆ ತೆರಳಿ ಹಸುಗೂಸನ್ನು ಹೊತ್ತೊಯ್ದಿದ್ದಾರೆ. ಅಸ್ಸೋಂ ನ ಕೂಲಿ ಕಾರ್ಮಿಕ ಮಹಿಳೆಗೆ ನಿನ್ನೆ ಸಂಜೆ ಏಳು ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಈಕೆಗೆ ಗಂಡು ಮಗು ಜನನವಾಗಿತ್ತು. ಈ ನಾಲ್ವರು ಖದೀಮರಲ್ಲಿ ಓರ್ವ ನರ್ಸ್ ಸಮವಸ್ತ್ರ ಧರಿಸಿದ್ದ ಎಂದು ತಿಳಿದುಬಂದಿದೆ.

ನವಜಾತ ಶಿಶು ಕದ್ದು ನಾಲ್ವರು ಎಸ್ಕೇಪ್​

ಇದನ್ನೂ ಓದಿ: ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್​ : ವೃದ್ಧೆ ಸೇರಿ ಇಬ್ಬರು ಸಾವು, ಐವರು ಪ್ರಯಾಣಿಕರ ಸ್ಥಿತಿ ಗಂಭೀರ

ಆಸ್ಪತ್ರೆ ಹಿಂಭಾಗದ ಬಾಗಿಲಲ್ಲಿ ಮಗು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದೃಶ್ಯ ಆಸ್ಪತ್ರೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಅರಕಲಗೂಡು ಪಟ್ಟಣ ಠಾಣೆಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ದೂರು ನೀಡಿದ್ದಾರೆ.

ಈ ಸಂಬಂಧ ವೃತ್ತ ನಿರೀಕ್ಷಕ ಸತ್ಯನಾರಾಯಣ ಹಾಗೂ ಸಿಬ್ಬಂದಿ ಆಸ್ಪತ್ರೆಯ ಬಾಣಂತಿಯ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated :Mar 14, 2022, 6:44 PM IST

TAGGED:

ABOUT THE AUTHOR

...view details