ಕರ್ನಾಟಕ

karnataka

ಸುಪಾರಿ ಕೊಟ್ಟವನಿಗೇ ಸ್ಕೆಚ್ ಹಾಕಿದ ಚೇತು ಗ್ಯಾಂಗ್.. ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡ ಕಿರಣ್

By

Published : Jul 29, 2021, 6:21 AM IST

ಹಾಸನ ಜಿಲ್ಲೆ ಚನ್ನರಾಯಪಟ್ಟಣ ನಗರದಲ್ಲಿ ಇಂತಹದ್ದೊಂದು ಕೃತ್ಯ ನಡೆದಿದ್ದು, ಮತ್ತೊಮ್ಮೆ ಪಟ್ಟಣದ ಜನತೆ ಭಯಭೀತರಾಗಿದ್ದಾರೆ. ಜೈಲಿನಲ್ಲೇ ಇದ್ದುಕೊಂಡು ಚೇತು ತನ್ನ ಸಹಚರರಿಗೆ ಸುಪಾರಿ ನೀಡಿ ಕಿರಣ್ ಎಂಬಾತನನ್ನ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಾಸನ ರೌಡಿ ಶೀಟರ್​ ಕೊಲೆ ಯತ್ನ
ಹಾಸನ ರೌಡಿ ಶೀಟರ್​ ಕೊಲೆ ಯತ್ನ

ಹಾಸನ:ನಟೋರಿಯಸ್ ರೌಡಿಶೀಟರ್ ಚೇತುವಿನ ಕೊಲೆಗೆ ಸುಪಾರಿ ಕೊಟ್ಟಿದ್ದ ಬಾಂದು ಅಲಿಯಾಸ್ ಕಿರಣ್ ಎಂಬುವವನ ಮೇಲೆ ದುಷ್ಕರ್ಮಿಗಳು ಇಂದು ರಾತ್ರಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಆದರೆ, ಕಿರಣ್​ ದಾಳಿಯಿಂದ ಬಚಾವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದುಬಂದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದಲ್ಲಿ ಇಂತಹದ್ದೊಂದು ಕೃತ್ಯ ನಡೆದಿದ್ದು ಮತ್ತೊಮ್ಮೆ ಪಟ್ಟಣದ ಜನತೆ ಭಯಭೀತರಾಗಿದ್ದಾರೆ. ಜೈಲಿನಲ್ಲೇ ಇದ್ದುಕೊಂಡು ಚೇತು ತನ್ನ ಸಹಚರರಿಗೆ ಸುಪಾರಿ ನೀಡಿ ಕಿರಣ್ ಎಂಬಾತನನ್ನ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಚೇತುವಿನ ಮೇಲೆ ಗುಂಡಿನ ದಾಳಿ ಮಾಡಿದ್ದ ಮಾಸ್ತಿ ಮತ್ತು ಕಿರಿಣ್
ಏನಿದು ಪ್ರಕರಣ?

ಮೇ 3 ರಂದು ಕಿರಣ್​, ನಟೋರಿಯಸ್ ರೌಡಿಶೀಟರ್ ಯಾಚೇನಹಳ್ಳಿ ಚೇತುವನ್ನು ಕೊಲೆ ಮಾಡಲು ಮಾಸ್ತಿ ಗ್ಯಾಂಗಿಗೆ ಸುಪಾರಿ ನೀಡಿದ್ದ. ಆದರೆ ಕೂದಲೆಳೆಯಲ್ಲಿ ಚೇತು ತಪ್ಪಿಸಿಕೊಂಡಿದ್ದ. ಎರಡು ದಿನದ ಬಳಿಕ ಕಿರಣ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಕೋವಿಡ್ 19ರ ಎರಡನೇ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಲಯ ಮಾಸ್ತಿ ಗ್ಯಾಂಗಿಗೆ ಜಾಮೀನು ನೀಡಿತ್ತು. ಅದರಲ್ಲಿ ಸುಪಾರಿ ಕೊಟ್ಟಿದ್ದ ಕಿರಣ್ ಕೂಡ ಹೊರಬಂದಿದ್ದ.

ಆದರೆ, ಚನ್ನರಾಯಪಟ್ಟಣದ ಭೂಗತಲೋಕದ ದೊರೆಗಳಾಗಿ ಮೆರೆಯುತ್ತಿರುವ ಚೇತನ್ ಮತ್ತು ವಿಜಿಯನ್ನು ಹೆಡೆಮುರಿಕಟ್ಟಲು ಪೊಲೀಸರು ನಿರ್ಧರಿಸಿದ್ದರು. ಅದರಂತೆ ಚೇತುವನ್ನು ದೆಹಲಿಯ ಗುರ್ಗಾನ್ ಎಂಬುವಲ್ಲಿ ಬಂಧಿಸಿ ಈಗಾಗಲೆ ಜೈಲಿಗಟ್ಟಿದ್ದಾರೆ. ಆದರೆ, ಜೈಲಿನಲ್ಲಿರುವ ರೌಡಿಶೀಟರ್ ಚೇತು ತನ್ನ ಸಹಚರರ ಮೂಲಕ ಸುಪಾರಿ ಕೊಟ್ಟು ಕಿರಣ್​ನನ್ನು ಮುಗಿಸಲು ಮಾಡಿದ ಪ್ರಯತ್ನ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಿರಣ್ ದುಷ್ಕರ್ಮಿಗಳು ಪ್ರಾಣಾಪಾಯದಿಂದ ಪಾರಾಗಿದ್ದರೂ ಗಂಭೀರವಾಗಿ ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ.

ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಸ್ಕೆಚ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಅನತಿ ದೂರದಲ್ಲಿರುವ ರಾಘವೇಂದ್ರ ಮಠದ ಸಮೀಪವಿರುವ ಅರಳಿಮರ ಕಟ್ಟೆಯ ವೃತ್ತದ ಬಳಿ ಹೋಗುತ್ತಿದ್ದ ಕಿರಣ್ ಮೇಲೆ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಕಿರಣ್ ಈಗ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಚೇತು ಗ್ಯಾಂಗ್ ಹೆಡೆಮುರಿಕಟ್ಟಲು ಜಿಲ್ಲಾ ಪೊಲೀಸರು ಎರಡು ತಂಡ ರಚನೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇದನ್ನು ಓದಿ:ರೌಡಿಶೀಟರ್ ಮೇಲೆ ಗುಂಡಿನ ಮೊರೆತ.. ಹಾಸನ ಪೊಲೀಸರಿಂದ ಮಾಸ್ತಿ ಗ್ಯಾಂಗ್ ಅಂದರ್​

ABOUT THE AUTHOR

...view details