ಕರ್ನಾಟಕ

karnataka

ಹಾಸನ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ.. ರ‌್ಯಾಂಕ್ ಸಮನಾಗಿ ಹಂಚಿಕೊಂಡ ವಿದ್ಯಾರ್ಥಿನಿಯರು!!

By

Published : Jul 14, 2020, 7:51 PM IST

ನಿತ್ಯ 3 ರಿಂದ 4 ಗಂಟೆ ಓದುತ್ತಿದ್ದೆ. ಜೀವನದಲ್ಲಿ ಏನಾದರೊಂದು ಸಾಧನೆ ಮಾಡುತ್ತೇನೆ. ಆದರೆ, ಅದರ ಬಗ್ಗೆ ಈಗ ಯೋಚಿಸಿಲ್ಲ ಎಂದರು. ಲಾಕ್​​ಡೌನ್‌ನಿಂದ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿತ್ತು..

Karnataka 2nd PUC Result 2020
ಸಿಹಿ ತಿನಿಸುತ್ತಿರುವ ಪೋಷಕರು

ಹಾಸನ :ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ನಗರದ ಮಾಸ್ಟರ್ಸ್ ಹಾಗೂ ಬ್ರಿಗೇಡ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು 592 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ‌್ಯಾಂಕ್ ಪಡೆದಿದ್ದಾರೆ.

ಮಾಸ್ಟರ್ಸ್ ಕಾಲೇಜಿನ ಟಿ ಡಿ ಹಂಸ ಅವರು ಕನ್ನಡದಲ್ಲಿ 98, ಇಂಗ್ಲಿಷ್ 95, ಭೌತಶಾಸ್ತ್ರ 100, ರಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರದಲ್ಲಿ 100 ಅಂಕ ಗಳಿಸಿದ್ದಾರೆ. ಅರಕಲಗೂಡು ಮೂಲದ ವಿದ್ಯಾರ್ಥಿನಿ ಹಂಸ ಕುಟುಂಬ ಹಾಸನದಲ್ಲೇ ನೆಲೆಸಿದೆ. ತಂದೆ ಟಿ ಡಿ ಧರ್ಮಪ್ಪ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಹೆಚ್ ಪೂರ್ಣಿಮಾ ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದಾರೆ. ಹಂಸ ಅವರು ವೈದ್ಯೆಯಾಗುವ ಕನಸು ಕಂಡಿದ್ದಾರೆ.

ನಿತ್ಯ 6 ರಿಂದ 7 ಗಂಟೆ ತಪ್ಪದೆ ಓದುತ್ತಿದ್ದೆ. ತರಗತಿಗಳಿಗೆ ಹಾಜರಾಗುತ್ತಿದ್ದೆ. ಪಾಠ ಗಮನವಿಟ್ಟು ಕೇಳುತ್ತಿದ್ದೆ. ವ್ಯಾಸಾಂಗವನ್ನು ಯಾವತ್ತಿಗೂ ಕಷ್ಟ ಎಂದು ಭಾವಿಸದೆ ಇಷ್ಟದಿಂದ ಮಾಡಿದೆ. ಪಠ್ಯದ ಕುರಿತು ಅನುಮಾನಗಳಿದ್ರೆ ಪ್ರಾಧ್ಯಾಪಕರಿಗೆ ಕರೆ ಮಾಡಿ ಬಗೆಹರಿಸಿಕೊಳ್ಳುತ್ತಿದ್ದೆ. ಲಾಕ್​​ಡೌನ್ ಕಾರಣದಿಂದ ಇಂಗ್ಲಿಷ್ ಪರೀಕ್ಷೆಗೆ ಸಾಕಷ್ಟು ಸಮಯ ಸಿಕ್ಕಿತು. ಹೀಗಾಗಿ ಅದರಲ್ಲೂ ನಾನು ಉತ್ತಮ ಅಂಕ ಪಡೆದಿದ್ದೇನೆ ಎಂದರು.

ಸಂತಸ ಹಂಚಿಕೊಂಡ ರ‌್ಯಾಂಕ್ ಬಂದ ವಿದ್ಯಾರ್ಥಿನಿಯರು!!

ಮೆದಿನಾ ಕೂಡ ಜಿಲ್ಲೆಗೆ ಪ್ರಥಮ :ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಕನ್ನಡದಲ್ಲಿ ತಲಾ 100, ಗಣಿತ 99 ಹಾಗೂ ಇಂಗ್ಲಿಷ್​​​ನಲ್ಲಿ 93 ಅಂಕ ಪಡೆಯುವ ಮೂಲಕ ಬ್ರಿಗೇಡ್ ಕಾಲೇಜಿನ ಮೆದಿನಾ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಸಮನಾಗಿ ಹಂಚಿಕೊಂಡಿದ್ದಾರೆ. ಉಡುಪಿ ಮೂಲದ ಶಾಮರಾಜ್ ಉಡುಪ ಹಿಮ್ಸ್‌ನಲ್ಲಿ ಪ್ರೊಫೆಸರ್ ಆಗಿದ್ದು ತಾಯಿ ರಾಧಿಕಾ ಗೃಹಿಣಿ.

ನಿತ್ಯ 3 ರಿಂದ 4 ಗಂಟೆ ಓದುತ್ತಿದ್ದೆ. ಜೀವನದಲ್ಲಿ ಏನಾದರೊಂದು ಸಾಧನೆ ಮಾಡುತ್ತೇನೆ. ಆದರೆ, ಅದರ ಬಗ್ಗೆ ಈಗ ಯೋಚಿಸಿಲ್ಲ ಎಂದರು. ಲಾಕ್​​ಡೌನ್‌ನಿಂದ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿತ್ತು. ಮೊದಲಿನಿಂದಲೂ ಪರಿಶ್ರಮದಿಂದ ಓದಿದ್ದೆ. ಆದರೆ, ಆ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details