ಕರ್ನಾಟಕ

karnataka

ಎಪಿಎಂಸಿ ಕಾಯ್ದೆ ತಕ್ಷಣ ಕೈ ಬಿಡದಿದ್ದರೆ ಉಗ್ರ ಹೋರಾಟ: ಹೆಚ್​​.ಡಿ.ರೇವಣ್ಣ ಎಚ್ಚರಿಕೆ

By

Published : May 14, 2020, 8:13 PM IST

ಕೇಂದ್ರ ಸರ್ಕಾರದ ಪ್ಯಾಕೇಜ್​​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ರೇವಣ್ಣ, ಎಪಿಎಂಸಿ ಕಾಯ್ದೆಯನ್ನು ತಕ್ಷಣ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

hd revanna pressmeet in hassan
ಹೆಚ್​​.ಡಿ. ರೇವಣ್ಣ ಎಚ್ಚರಿಕೆ

ಹಾಸನ:ರೈತರ ಬಗ್ಗೆ ಕಾಳಜಿ ಇಲ್ಲದೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ರೈತರಿಗೆ ಯಾವುದೇ ರೀತಿಯ ಅನುದಾನ ನೀಡಿಲ್ಲ. ರೈತರು ದೇಶದ ಬೆನ್ನೆಲುಬು. ಅವರನ್ನೇ ಮರೆತರೆ ಹೇಗೆ..? ದಯಮಾಡಿ ಅವರಿಗೂ ವಿಶೇಷವಾಗಿ ಪ್ಯಾಕೇಜ್‌ ಘೋಷಣೆ ಮಾಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರು ನಿಮ್ಮ ಕೈತಪ್ಪಿ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

ಹೆಚ್​​.ಡಿ. ರೇವಣ್ಣ ಎಚ್ಚರಿಕೆ
ಇನ್ನು ಜಿಲ್ಲೆಯಲ್ಲಿ ರೈತರು ತಾವು ಬೆಳೆದ ಕಬ್ಬು ಬೆಳೆಗೆ ಬೆಂಕಿ ಹಾಕುತ್ತಾ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿಲ್ಲ. ದೇಶದಲ್ಲಿ 130 ಕೋಟಿ ಜನರಿದ್ದು ಅದರಲ್ಲಿ ಶೇ. 70ರಷ್ಟು ಕೃಷಿಕರು ಇರುವುದರಿಂದ ತಕ್ಷಣ ಅವರ ನೆರವಿಗೆ ನೀವು ಧಾವಿಸಬೇಕು. ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ಎಪಿಎಂಸಿ ಕಾಯ್ದೆಯನ್ನು ತಕ್ಷಣ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ವರ್ಷ ಪ್ರವಾಹದಿಂದ ರೈತರು ತತ್ತರಿಸಿ ಹೋಗಿದ್ದರು. ಈ ಬಾರಿ ಕೊರೊನಾ ಬಿಕ್ಕಟ್ಟಿನಿಂದ ರೈತಾಪಿ ವರ್ಗ ಮತ್ತು ಅಸಂಘಟಿತ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಮುಂದೆ ಇದೇ ಪರಿಸ್ಥಿತಿ ಎದುರಾದರೆ ರೈತರು ವಿಷ ತೆಗೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಾರೆ. ಹೀಗಾಗಿ ತಕ್ಷಣ ರೈತರ ಬೆಂಬಲಕ್ಕೆ ಸರ್ಕಾರಗಳು ನಿಲ್ಲಬೇಕು. ಕೇವಲ ಅನ್ನದಾತ ಎಂಬ ಜಾಹೀರಾತು ನೀಡುವ ಮೂಲಕ ಪತ್ರಿಕೆಗಳಲ್ಲಿ ಪ್ರಚಾರ ಪಡೆದುಕೊಂಡರೆ ಸಾಲದು ಎಂದರು.

ABOUT THE AUTHOR

...view details