ಕರ್ನಾಟಕ

karnataka

ಬಿಜೆಪಿ ಕಾರ್ಯಕರ್ತರ ಎಡವಟ್ಟು.. ಬದುಕಿದ್ದ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿ ಪೇಚಿಗೆ ಸಿಲುಕಿದ ಕೇಂದ್ರ ಸಚಿವರು..

By

Published : Aug 20, 2021, 6:27 PM IST

union-minister-a-narayanasamy-condolences-to-soldier
ಕೇಂದ್ರ ಸಚಿವ ನಾರಾಯಣಸ್ವಾಮಿ ()

ಸ್ಥಳೀಯ ಬಿಜೆಪಿ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು‌-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಎಂಬುವರ ಮನೆಗೆ ಭೇಟಿ ನೀಡಿದರು. ಕುಟುಂಬದ ಯೋಗಕ್ಷೇಮ ವಿಚಾರಿಸಿ ಕರ್ತವ್ಯನಿರತ ಸೈನಿಕನ ಪತ್ನಿಗೆ, ಸರ್ಕಾರಿ ನೌಕರಿ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆ ನೀಡಿದರು..

ಗದಗ :ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸ್ಥಳಿಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದಾಗಿ ಕರ್ತವ್ಯನಿರತ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಘಟನೆ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

ಬದುಕಿದ್ದ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಕೇಂದ್ರ ಸಚಿವ..

ನಿನ್ನೆ ರಾತ್ರಿ ಗದಗದಲ್ಲಿ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಆಗಮಿಸಿದ್ದರು.

ಈ ವೇಳೆ ಒಂದೂವರೆ ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತನಾಗಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ಬಸವರಾಜ ಹಿರೇಮಠ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳುವ ಯೋಜನೆ ಹಾಕಿಕೊಂಡಿದ್ದರು.

ಆದ್ರೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು‌-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಎಂಬುವರ ಮನೆಗೆ ಭೇಟಿ ನೀಡಿದರು. ಕುಟುಂಬದ ಯೋಗಕ್ಷೇಮ ವಿಚಾರಿಸಿ ಕರ್ತವ್ಯನಿರತ ಸೈನಿಕನ ಪತ್ನಿಗೆ, ಸರ್ಕಾರಿ ನೌಕರಿ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆ ನೀಡಿದರು.

ಕೇಂದ್ರ ಸಚಿವರ ತರಾತುರಿ‌ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬಾದರು. ಸ್ಥಳೀಯ ಕಾರ್ಯಕರ್ತರು ಮಾಡಿದ ಎಡವಟ್ಟಿನಿಂದ ಕೇಂದ್ರ ಸಚಿವರು ಪೇಚಿಗೆ ಸಿಲುಕಿದ್ದಂತೂ ಸತ್ಯ.

TAGGED:

ABOUT THE AUTHOR

...view details