ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತು ಎಚ್.ಕೆ.ಪಾಟೀಲ್ ಅವರಿಗೆ ಪೊಲಿಟಿಕಲ್ ಡೇಟ್ ಎಕ್ಸಪೈರ್ ಅಗಿದೆ. ಅವರು ಯಾಕೆ ಡೇಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೋ ಗೊತ್ತಿಲ್ಲ. ಮುರ್ಖತನ ಕಾಂಗ್ರೆಸ್ ರಾಜಕಾರಣಕ್ಕೊ ಅಥವಾ ಎಚ್.ಕೆ.ಪಾಟೀಲ ಅವರಿಗೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಔಟ್ಡೇಟೆಡ್ ಪಾರ್ಟಿ. ಹೀಗಾಗಿ ಮಹದಾಯಿ ಡಾಕ್ಯುಮೆಂಟ್ ಡೇಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಹಿಂದೆ ಹನಿ ನೀರು ಸಹ ಕೊಡೋದಿಲ್ಲ ಎಂದಿದ್ದರು. ಈ ಹೇಳಿಕೆಯನ್ನು ನೆನಪಿಸಿ ವಿಸ್ತೃತ ವರದಿ ಯೋಜನೆಗೆ ಗ್ರೀನ್ ಸಿಗ್ನಲ್ ವಿಚಾರ ಪ್ರಸ್ತಾಪಿಸಿ ಜೋಶಿ ತಿರುಗೇಟು ನೀಡಿದರು.
ವಿಸ್ತೃತ ವರದಿಯಲ್ಲಿ ಡೇಟ್ ಇದೆ, ನಾನು ತೋರಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್ ಔಟ್ಡೇಟಡ್ ಆಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಫಾರೆಸ್ಟ್ ಕ್ಲಿಯರನ್ಸ್ ಆಗಿ ಬರಲಿದೆ. ಕುಡಿಯುವ ನೀರಿನ ಪ್ರಾಜೆಕ್ಟ್ ಆಗಿರುವುದಕ್ಕೆ ಎನ್ವಾರ್ನಮೆಂಟ್ ಕ್ಲಿಯರನ್ಸ್ ಆಗತ್ಯವಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಇಡೇರಿದೆ ಎಂದರು.
ಬಿಜೆಪಿ ಸುಳ್ಳಿನ ಎಟಿಎಂ ಎಂಬುವಂತ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಯಾವ ಎಟಿಎಂ. ಸಮಾಜಕ್ಕೆ ದೇಶಕ್ಕೆ ಏನೂ ತ್ಯಾಗ ಮಾಡಿಲ್ಲ. ಅಪ್ಪ ಮಗನಿಗೆ, ಹೆಂಡತಿ ಮಗನಿಗೆ ತ್ಯಾಗ ಮಾಡಿದ್ದಾರೆ. ಕುಮಾರಸ್ವಾಮಿ ವಚನಭ್ರಷ್ಟರು. ದೇವೇಗೌಡರ ಮರಿ ಮೊಮ್ಮಗ ರಾಜಕೀಯಕ್ಕೆ ಸೇರಿಸಬಹುದು. ಭ್ರಷ್ಟ ಕುಟುಂಬದ ರಾಜಕೀಯ ಪಾರ್ಟಿ ಅದಕ್ಕೇನು ಉತ್ತರ ಕೊಡೋದು ಎಂದು ಅವರು ಹೇಳಿದರು.
ಇತ್ತೀಚೆಗೆ ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಕೊಟ್ಟಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಪ್ರತಿಕ್ರಿಯಿಸಿ, ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಕೇವಲ ಕಣ್ಣೊರೆಸುವುದರಿಂದ ಉಪಯೋಗವಿಲ್ಲ. ಜನರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕು ಹಿಂದೊಮ್ಮೆ ಪೂಜೆ ಮಾಡಿದ್ದರು. ಇವಾಗ ಮತ್ತೆ ಮಾಡ್ತಿದ್ದಾರೆ ಎಂದು ಹೇಳಿದ್ದರು.
ಈ ಬಗ್ಗೆ ಎಚ್.ಕೆ.ಪಾಟೀಲ್ ಕೂಡ ಪ್ರತಿಕ್ರಿಯೆ ನೀಡಿ, ಮಹತ್ವದ ಕಳಸಾ ಬಂಡೂರಿ ಯೋಜನೆಯಲ್ಲಿ ಯಾವುದೇ ರೀತಿಯಲ್ಲಿ ಅಧಿಕೃತವಲ್ಲದ ದಾಖಲೆಯನ್ನು ತೋರಿಸಿ ಜನರ ದಿಕ್ಕು ತಪ್ಪಿಸುವ ಹುನ್ನಾರವಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದಿಂದ ಹೋರಾಟದ ಸಿದ್ದತೆ ಆರಂಭವಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಗ್ದ ರೈತರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು ಬಿಜೆಪಿಯ ವರಸೆಯಾಗಿದೆ. ಚುನಾವಣೆ ಬಂದಾಗ ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ:ಬೊಮ್ಮಾಯಿ ಸರ್ಕಾರದ ಮೀಸಲಾತಿ ಅಸ್ತ್ರ: ಪ.ಜಾತಿಯ ಒಳ ಮೀಸಲಾತಿಯ ಒಳಸುಳಿ ಹೇಗಿದೆ?