ಕರ್ನಾಟಕ

karnataka

ಹುಬ್ಬಳ್ಳಿ: ಏಳು ಜನರ ವಿರುದ್ಧ ಅಟ್ರಾಸಿಟಿ‌ ಕೇಸ್ ದಾಖಲು ಮಾಡಿದ ಕರವೇ ಕಾರ್ಯಕರ್ತ

By ETV Bharat Karnataka Team

Published : Nov 22, 2023, 4:03 PM IST

Updated : Nov 22, 2023, 5:43 PM IST

ಕೆಲ ದಿನಗಳ ಹಿಂದೆ ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಹಣದ ಬೇಡಿಕೆ ಇಟ್ಟಿರುವ ಆರೋಪದಡಿ ಕರವೇ ಪ್ರವೀಣ ಶೆಟ್ಟಿ‌ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ‌ಲೂತಿಮಠ ವಿರುದ್ದ ದೂರು ದಾಖಲಿಸಲಾಗಿತ್ತು. ಇದೀಗ ಕರವೇ ಕಾರ್ಯಕರ್ತ ಪ್ರವೀಣ ‌ಗಾಯಕವಾಡ ಎಂಬುವರು ಏಳು ಜನರ ವಿರುದ್ದ ಜಾತಿ ನಿಂದನೆ ದೂರನ್ನು ಘಂಟಿಕೇರಿ ಠಾಣೆಯಲ್ಲಿ ದಾಖಲಿಸಿದ್ದಾರೆ.

Karave activist filed an atrocity complaint
ಕರವೇ ಕಾರ್ಯಕರ್ತ ಪ್ರವೀಣ ಏಳು ಜನರ ವಿರುದ್ಧ ಅಟ್ರಾಸಿಟಿ‌ ಕೇಸ್ ದಾಖಲು ಮಾಡಿರುವುದು.

ಅಟ್ರಾಸಿಟಿ‌ ಕೇಸ್ ದಾಖಲು

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್ ವ್ಯಾಪಾರಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಡುವೆ ದೂರು ಹಾಗೂ ಪ್ರತಿ ದೂರು ದಾಖಲಾಗಿವೆ. ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ‌ ಬಣದ) ಕಾರ್ಯಕರ್ತರು ಏಳು ಜನರ ವಿರುದ್ದ ಅಟ್ರಾಸಿಟಿ‌ ಕೇಸ್ ದಾಖಲು ಮಾಡಿದ್ದಾರೆ. ಮಾಜಿ ಕಾರ್ಪೋರೆಟರ್ ಸೇರಿದಂತೆ ಏಳು ಜನರ ವಿರುದ್ಧ ಕರವೇ ಕಾರ್ಯಕರ್ತ ಪ್ರವೀಣ ಗಾಯಕವಾಡ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.

ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ:ಕಳೆದ ಕೆಲ ದಿನಗಳ ಹಿಂದೆ ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆ ಕರವೇ ಪ್ರವೀಣ ಶೆಟ್ಟಿ‌ ಬಣದ ಜಿಲ್ಲಾಧ್ಯಕ್ಷರ ವಿರುದ್ದ ದೂರು ದಾಖಲಾಗಿತು. ಸಚಿವರ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದಡಿ ಕರವೇ ಜಿಲ್ಲಾಧ್ಯಕ್ಷ ವಿರುದ್ದ ದೂರು ದಾಖಲಿಸಲಾಗಿತ್ತು. ಇದೀಗ ಕರವೇ ಕಾರ್ಯಕರ್ತ ಪ್ರವೀಣ ‌ಗಾಯಕವಾಡ ಅವರು ಪ್ಲಾಸ್ಟಿಕ್ ವ್ಯಾಪಾರಿಗಳು ಸೇರಿ ಏಳು ಜನರ ವಿರುದ್ದ ಜಾತಿ ನಿಂದನೆ, ಜೀವ ಬೆದರಿಕೆ ಕೇಸ್​ ಅನ್ನು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದಾರೆ.

ಪ್ಲಾಸ್ಟಿಕ್ ವ್ಯಾಪಾರಿಗಳಾದ ವಿಜಯ್ ಅಳಗುಂಡಗಿ, ಭರತ್ ಜೈನ್,ಲಲಿತ್ ಜೈನ್, ಭವೇಶ್ ಜೈನ್, ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪಾಜಿ ಹಾಗೂ ಓರ್ವ ಅಪರಿಚಿತ ಸೇರಿ ಏಳು ಜನರ ವಿರುದ್ದ ದೂರು ದಾಖಲಾಗಿದೆ. ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ SC ST act 504,506,143,147 ಅಡಿ ಜಾತಿ ಹಿಡಿದು ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಾತಿನಿಂದನೆ ಕೇಸ್ ದಾಖಲು:ಪ್ರಕರಣದಬಗ್ಗೆ ಮಾತನಾಡಿರುವಮಂಜುನಾಥ ‌ಲೂತಿಮಠ, ’’ಕರವೇ ಪ್ರವೀಣ ಶೆಟ್ಟಿ ಬಣದಿಂದ ಪ್ಲಾಸ್ಟಿಕ್ ‌ಮುಕ್ತ ಅಭಿಯಾನ ಯಶಸ್ವಿಯಾಗಿದೆ. ಇದನ್ನು ಸಹಿಸದೇ ಕೆಲ ಏಜೆಂಟರ್​ಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ.‌ ಈಗ ಕರವೇ ಪ್ರವೀಣ ಶೆಟ್ಟಿ ಬಣದಿಂದ ಜೀವ ಬೆದರಿಕೆ ಹಾಗೂ ಮಾನ ಹಾನಿ ಮಾಡಿದವರ ವಿರುದ್ಧ ಜಾತಿನಿಂದನೆ ಕೇಸ್ ದಾಖಲು ಮಾಡಿದ್ದೇವೆ‘‘ಎಂದು ಮಾಹಿತಿ ನೀಡಿದರು.‌

ದೂರುದಾರ ಪ್ರವೀಣ ಗಾಯಕವಾಡ ಮಾತನಾಡಿ, ’’ಕರ್ನಾಟ ರಕ್ಷಣಾ ವೇದಿಕೆಯಿಂದ ಪ್ಲಾಸ್ಟಿಕ್ ಗೋದಾಮಿನ ಮೇಲೆ ದಾಳಿ ಮಾಡಿದ್ದೆವು. ಆಗ ಮಾಧ್ಯಮಗಳು ಇದ್ದಾಗಲೂ ಭರತ ಜೈನ್ ಎಂಬುವರು ತಳ್ಳಾಡಿ ಗೋಡೌನ್​ಗೆ ಕೀಲಿ ಹಾಕಿಕೊಂಡು ಹೋಗಿದ್ದರು. ಅದಾದ ಬಳಿಕ ವಿಜಯ ಅಳಗುಂಡಗಿ, ಶಿವಾನಂದ ಮುತ್ತಣ್ಣನವರ್, ವಿಜಯಕುಮಾರ ಅಪ್ಪಾಜಿ ಸೇರಿದಂತೆ ಹಲವರು ಸೇರಿಕೊಂಡು ನನಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ ನಾನು ಜಾತಿನಿಂದನೆ ಕೇಸ್ ದಾಖಲಿಸಿದ್ದೇನೆ ಎಂದರು’’.

ಇದನ್ನೂಓದಿ:ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಬೆಟ್ಟಿಂಗ್: ಇಬ್ಬರ ಬಂಧನ

Last Updated :Nov 22, 2023, 5:43 PM IST

ABOUT THE AUTHOR

...view details