ಕರ್ನಾಟಕ

karnataka

'ಅಸ್ಥಿರತೆ-ರಾಜಕೀಯ ಹಿನ್ನಡೆಯಾದಾಗ ಇಂತಹ ಹೇಳಿಕೆ ಹೊರ ಬೀಳುತ್ತವೆ'

By

Published : Jan 31, 2021, 4:26 PM IST

ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಕನ್ನಡಿಗರು ಮತ್ತು ಮರಾಠರ ನಡುವೆ ವೈರತ್ವ ಬೆಳೆಸುವುದನ್ನು ಬಿಟ್ಟು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಕೊರೊನಾ ನಿಯಂತ್ರಣ ಮಾಡುವ ಕೆಲಸ ಮಾಡಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

jagdish-shettar
ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಅಸ್ಥಿರತೆ ಮತ್ತು ರಾಜಕೀಯ ಹಿನ್ನಡೆಯಾದಾಗ ಇಂತಹ ಗಡಿ ವಿಚಾರದ ಹೇಳಿಕೆಗಳು ಹೊರ ಬೀಳುತ್ತವೆ ಎಂದು ಸಿಎಂ ಉದ್ಧವ್​ ಠಾಕ್ರೆ ಹೇಳಿಕೆ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಭಾರತ ಪಲ್ಸ್ ಪೋಲಿಯೋದಿಂದ ಮುಕ್ತವಾಗಿದೆ. ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಪಲ್ಸ್ ಪೋಲಿಯೋ ಸಮಸ್ಯೆ ಇನ್ನೂ ಇದ್ದಿದ್ದರಿಂದ ದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೋ ಅಭಿಯಾನವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ನಮ್ಮ ದೇಶ ಪೋಲಿಯೋದಿಂದ ಸಂಪೂರ್ಣವಾಗಿ ಹೊರ ಬರಲಿದೆ ಎಂದರು.

ಮಹಾರಾಷ್ಟ್ರ ಸಿಎಂ ಗಡಿ ವಿಚಾರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಸ್ಥಿರತೆ ಮತ್ತು ರಾಜಕೀಯ ಹಿನ್ನಡೆಯಾದಾಗ ಇಂತಹ ಗಡಿ ವಿಚಾರದ ಹೇಳಿಕೆಗಳು ಹೊರ ಬೀಳುತ್ತವೆ. ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಕನ್ನಡಿಗರು ಮತ್ತು ಮರಾಠರ ನಡುವೆ ವೈರತ್ವ ಬೆಳೆಸುವುದನ್ನು ಬಿಟ್ಟು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಕೊರೊನಾ ನಿಯಂತ್ರಣ ಮಾಡುವ ಕೆಲಸ ಮಾಡಲಿ. ಇಂತಹ ಹೇಳಿಕೆಗಳು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.

ಓದಿ: ಜನಪ್ರಿಯತೆ ಪಡೆಯಲು ಗಡಿ ಕುರಿತು ಹೇಳಿಕೆ ನೀಡುತ್ತಿದ್ದಾರೆ: ಠಾಕ್ರೆಗೆ ಸಚಿವ ಈಶ್ವರಪ್ಪ ಟಾಂಗ್​​​

ಪೆ. 1ರ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಕುರಿತು ಮಾತನಾಡಿ, ರಾಜ್ಯಕ್ಕೆ ಏಮ್ಸ್ ಬರುವ ನಿರೀಕ್ಷೆ ಇದೆ. ಬಂದ್ರೆ ರಾಜ್ಯಕ್ಕೆ ಒಳಿತಾಗುತ್ತೆ. ಫಾರ್ಮೋ ಪಾರ್ಕ್​ನಂತಹ ಇನ್ನಿತರ ದೊಡ್ಡಮಟ್ಟದ ಪ್ರಾಜೆಕ್ಟ್ ನೀಡಿದರೆ ಕೈಗಾರಿಕಾ ಕ್ಷೇತ್ರಕ್ಕೆ ಅನುಕೂಲ ಆಗುತ್ತೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಹ ಸಲ್ಲಿಸಲಾಗಿದೆ ಎಂದರು.

TAGGED:

ABOUT THE AUTHOR

...view details