ಕರ್ನಾಟಕ

karnataka

Video: ಏಕಾಏಕಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

By

Published : Sep 17, 2021, 9:23 AM IST

Updated : Sep 17, 2021, 10:54 AM IST

ಹುಬ್ಬಳ್ಳಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ಎದುರು ಕಾರೊಂದು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

fire broke out on car in hubli
ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ಕಾರೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ಎದುರು ನಿನ್ನೆ ತಡರಾತ್ರಿ ನಡೆದಿದೆ.

ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕಾಲ ಸ್ಥಳೀಯರಲ್ಲಿ‌ ಆತಂಕ ಮನೆ ಮಾಡಿತ್ತು. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿದ್ದು, ಹೋಟೆಲ್​ನಲ್ಲಿರುವರು ಈ ಬೆಂಕಿಯ ನರ್ತನ ನೋಡಿ ಬೆಚ್ಚಿ ಬಿದ್ದರು.

ತಾಂತ್ರಿಕ ದೋಷದಿಂದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಇನ್ನು ಕಾರಿನ ಮಾಲೀಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಜೊತೆಗೆ ಕಾರು ಹೊತ್ತಿ ಉರಿಯಲು ಕಾರಣವೇನು? ಎಂಬುದು ತಿಳಿದು ಬರಬೇಕಿದೆ. ಈ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Last Updated : Sep 17, 2021, 10:54 AM IST

ABOUT THE AUTHOR

...view details