ಕರ್ನಾಟಕ

karnataka

ಹಿಟ್ ಅಂಡ್​​ ರನ್ ಮಾಡಿ ವೃದ್ದೆ ಸಾವಿಗೆ ಕಾರಣವಾಗಿದ್ದ ಕಾರು ಚಾಲಕನ ಬಂಧನ

By

Published : Feb 24, 2022, 3:50 PM IST

ಕೇಶ್ವಾಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ನಿರ್ಮಲಾದೇವಿ ಜೈನ್ ಎಂಬ ವೃದ್ಧೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

car-driver-arrested
ಕಾರು ಚಾಲಕ ಬಂಧನ

ಹುಬ್ಬಳ್ಳಿ: ನಗರದ ಕೇಶ್ವಾಪುರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು ವೃದ್ಧೆಯ ಸಾವಿಗೆ ಕಾರಣವಾಗಿದ್ದ ಕಾರು ಚಾಲಕ ನಾಪತ್ತೆಯಾಗಿದ್ದ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಸಂಚಾರಿ ಠಾಣೆ ಪೊಲೀಸರು

ಕೇಶ್ವಾಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ನಿರ್ಮಲಾದೇವಿ ಜೈನ್ ಎಂಬ ವೃದ್ಧೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಘಟನೆಯ ನಂತರ ಶಾಂತಿನಗರದ ಕಾರು ಚಾಲಕ ರಾಜೇಶ ಎಂಬಾತ ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮದಲ್ಲಿ ಕಾರನ್ನು ನಿಲ್ಲಿಸಿ ಬೆಂಗಳೂರಿಗೆ ಪರಾರಿಯಾಗಿದ್ದ.

ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಖಚಿತ ಮಾಹಿತಿಯನ್ನ ಕಲೆ ಹಾಕಿ, ಆರೋಪಿ ರಾಜೇಶನನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾರನ್ನ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ‌.

ಓದಿ:ಬಾತ್​ರೂಮ್​ ಟಬ್​ನಲ್ಲಿ ನವಜಾತ ಶಿಶು ಪತ್ತೆ!

ABOUT THE AUTHOR

...view details