ಕರ್ನಾಟಕ

karnataka

ದಸರಾ ರಜೆ 15 ದಿನಕ್ಕೆ ಸೀಮಿತಗೊಳಿಸಿದ್ದು ಸರಿಯಲ್ಲ, ಸದ್ಯಕ್ಕೆ ಶಾಲೆ ತೆರೆಯಬೇಡಿ: ಹೊರಟ್ಟಿ ಪತ್ರ

By

Published : Oct 14, 2022, 12:45 PM IST

ಶಾಲೆಗಳಿಗೆ ದಸರಾ ರಜೆ 15 ದಿನಕ್ಕೆ ಸೀಮಿತಗೊಳಿಸಿದ್ದು ಸರಿಯಲ್ಲ. ಈ ರಜೆಯನ್ನು ವಿಸ್ತರಿಸುವಂತೆ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.

ಹೊರಟ್ಟಿ ಪತ್ರ
ಹೊರಟ್ಟಿ ಪತ್ರ

ಹುಬ್ಬಳ್ಳಿ: ಶಾಲೆಗಳಿಗೆ ದಸರಾ ರಜೆ 15 ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮುಂಚೆ ಒಂದು ತಿಂಗಳು ದಸರಾ ರಜೆ ಕೊಡಲಾಗುತ್ತಿತ್ತು. ಎರಡು ತಿಂಗಳ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 15 ದಿನ ರಜೆ ನೀಡಿರೋದು ಸರಿಯಲ್ಲ. ದಸರಾ ಮತ್ತು ದೀಪಾವಳಿ ಹಬ್ಬ ಎರಡೂ ಬರುತ್ತೆ. ಈ ಎರಡೂ ಹಬ್ಬ ಮುಗಿಯೋವರೆಗೆ ರಜೆ ಕೊಡಬೇಕಾಗಿತ್ತು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ದಸರಾ ರಜೆ ವಿಸ್ತರಿಸುವಂತೆ ಹೊರಟ್ಟಿ ಅವರು ಮನವಿ ಮಾಡಿದ್ದಾರೆ.

ಹೊರಟ್ಟಿ ಪತ್ರ

ಕೇವಲ 15 ದಿನಗಳ ರಜೆಯಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಮಕ್ಕಳಿಗೆ ಶಾಲೆಯ ಪಾಠಗಳ ಜೊತೆಗೆ ಮನೆಯ ವಾತಾವರಣವು ಅಷ್ಟೇ ಮುಖ್ಯ. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಸದ್ಯಕ್ಕೆ ಶಾಲೆಯಗಳನ್ನ ತೆರೆಯಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

(ಓದಿ: ಸಾಮಾಜಿಕ ಸೇವೆ ಗುರುತಿಸಿ ಹೊರಟ್ಟಿ ಅವರಿಗೆ ಲಂಡನ್​ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೌರವ)

ABOUT THE AUTHOR

...view details