ETV Bharat / state

ಸಾಮಾಜಿಕ ಸೇವೆ ಗುರುತಿಸಿ ಹೊರಟ್ಟಿ ಅವರಿಗೆ ಲಂಡನ್​ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೌರವ

author img

By

Published : Sep 2, 2022, 1:44 PM IST

ಬಸವರಾಜ ಹೊರಟ್ಟಿಯವರ ಸಾಮಾಜಿಕ ಸೇವೆ ಮತ್ತು ಒಂದೇ ಕ್ಷೇತ್ರದಿಂದ ಎಂಟು ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಲಂಡನ್​ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೌರವ ಸಂದಿದೆ. ​

basavaraja-horatti
ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಕಳೆದ ಐದು ದಶಕಗಳಿಂದ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ವಿಧಾಯಕ ಸೇವೆಗಳನ್ನು ಸಲ್ಲಿಸುವ ಮೂಲಕ ಬಸವರಾಜ ಹೊರಟ್ಟಿಯವರ ಹೆಸರು ಕನ್ನಡ ನಾಡಿಗೆ ಚಿರಪರಿಚಿತ. 1980 ರಿಂದ ವಿಧಾನ ಪರಿಷತ್ತಿಗೆ ಸತತ 8 ಬಾರಿ ಒಂದೇ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆಯನ್ನೂ ಇವರು ಮಾಡಿದ್ದಾರೆ. ಇವರ ಸಾಮಾಜಿಕ ಸೇವೆ ಮತ್ತು ಶೈಕ್ಷಣಿಕ ವಿಭಾಗಕ್ಕೆ ನೀಡಿರುವ ಕೊಡುಗೆ ಲಂಡನ್​ನ ವರ್ಲ್ಡ್​ ಬುಕ್ ಆಫ್ ರಿಕಾರ್ಡ್​ನಲ್ಲಿ ಗುರುತಾಗಿದೆ.

Basavaraja Horatti honored
ಬಸವರಾಜ ಹೊರಟ್ಟಿ ಅವರಿಗೆ ಲಂಡನ್ನಿನ ವರ್ಲ್ಡ ಬುಕ್ ಆಫ್ ರಿಕಾರ್ಡ್ ಗೌರವ ಸಂದಿದೆ

ಸಾಮಾನ್ಯ ಶಿಕ್ಷಕರಾದ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ, ವಿವಿಧ ಖಾತೆಗಳ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕವಾಗಿ ಅವರು ಮಾಡಿದ ಅಪ್ರತಿಮ ಸೇವೆ, ಕಳೆದ 5 ದಶಕಗಳಿಂದ ಶಿಕ್ಷಕರ ಹಿತಕ್ಕಾಗಿ ಹೋರಾಟ ಮಾಡಿದ್ದಾರೆ. ಹೊರಟ್ಟಿಯವರು ಜಾಗತಿಕ ಶಾಂತಿಗಾಗಿ ಸಲ್ಲಿಸಿದ ಮಾನವೀಯ ಸೇವೆಗಾಗೆ, ಅವರ ವ್ಯಕ್ತಿತ್ವದ ಇತರೆ ಮಜಲು, ಸಾಧನೆ ಹಾಗೂ ಮೇಲ್ಮನೆಗೆ ಸತತ 8 ಬಾರಿ ಆಯ್ಕೆಯಾಗಿರುವುದರ ಕುರಿತು ಅಧ್ಯಯನ ಮಾಡಿ ಈ ಗೌರವವನ್ನು ಸಂಸ್ಥೆ ನೀಡಿದೆ.

ಇದನ್ನೂ ಓದಿ : ದೇಶದ ಮೊದಲ ಸ್ವದೇಶಿ ವಿಮಾನ ವಾಹಕ 'INS Vikrant' ಲೋಕಾರ್ಪಣೆಗೊಳಿಸಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.