ಕರ್ನಾಟಕ

karnataka

ದಾವಣಗೆರೆ ಮಣ್ಣಲ್ಲಿ 'ಗರಡಿ' ಅಬ್ಬರ: ಯೋಗರಾಜ್​ ಭಟ್​, ಬಿ.ಸಿ ಪಾಟೀಲ್ ಪ್ರಚಾರ​

By ETV Bharat Karnataka Team

Published : Nov 1, 2023, 6:30 PM IST

ಮಾಜಿ ಸಚಿವ ಬಿ.ಸಿ ಪಾಟೀಲ್​ ಹಾಗೂ ನಿರ್ದೇಶಕ ಯೋಗರಾಜ್​ ಭಟ್​ ದಾವಣಗೆರೆಯಲ್ಲಿ 'ಗರಡಿ' ಸಿನಿಮಾದ ಪ್ರಮೋಷನ್​ ಮಾಡಿದರು.

Yograj Bhatt BC Patil are busy in the promotion of Garadi movie
ದಾವಣಗೆರೆ ಮಣ್ಣಲ್ಲಿ 'ಗರಡಿ' ಪ್ರಚಾರ ಮಾಡಿದ ಯೋಗರಾಜ್​ ಭಟ್​, ಬಿ.ಸಿ ಪಾಟೀಲ್​

ದಾವಣಗೆರೆ ಮಣ್ಣಲ್ಲಿ 'ಗರಡಿ' ಪ್ರಚಾರ ಮಾಡಿದ ಯೋಗರಾಜ್​ ಭಟ್​, ಬಿ.ಸಿ ಪಾಟೀಲ್​

ದಾವಣಗೆರೆ: ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಕೌರವ' ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಗರಡಿ'. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಚಾರವಾಗಿ ಟಾಕ್​ ಆಗುತ್ತಿದೆ. ಇಂದು ದರ್ಶನ್​ ಅವರು ಸಿನಿಮಾದ ಟ್ರೇಲರ್​ ಅನಾವರಣಗೊಳಿಸಲಿದ್ದಾರೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಿ.ಸಿ ಪಾಟೀಲ್​ ಹಾಗೂ ಯೋಗರಾಜ್​ ಭಟ್​ ದಾವಣಗೆರೆಯಲ್ಲಿ ಸಿನಿಮಾದ ಪ್ರಮೋಷನ್​ ಮಾಡಿದ್ದಾರೆ.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಯೋಗರಾಜ್ ಭಟ್, "ಬೆಣ್ಣೆನಗರಿಯೊಂದಿಗೆ ನನಗಿರುವಷ್ಟು ನೆನಪುಗಳು ಯಾರಿಗೂ ಇಲ್ಲ. ನಾನು ಹಂಸಬಾವಿಯಲ್ಲಿ ವ್ಯಾಸಂಗ ಮಾಡುವ ವೇಳೆ ಹಳಿಯಾಳ, ಶಿರಸಿ ಕಡೆಯಿಂದ ಬರುವ ಬಸ್​ಗಳು ಬೆಂಗಳೂರಿಗೆ ಹೋಗ್ಬೇಕಾದ್ರೆ ದಾವಣಗೆರೆ ಮೂಲಕವೇ ಹೋಗಬೇಕಿತ್ತು. ಕಾಲೇಜು ಬಿಟ್ಟ ತಕ್ಷಣ ಸ್ಪೆಷಲ್ ಸಿನಿಮಾ ನೋಡಲು ಹುಬ್ಬಳಿಗೆ ಹೋಗುತ್ತಿದ್ದೆವು. ಮೊದಲ ಶೋ ನೋಡಲು ದಾವಣಗೆರೆಗೆ ಬರುತ್ತಿದ್ದೆವು. ಬೆಂಗಳೂರಿಗೆ ಹೋಗುವ ವೇಳೆ ದಾವಣಗೆರೆಯಲ್ಲಿ ಇಳಿದು ಒಂದೂವರೆ ತಾಸು ಉಡಾಳ್ ಗಿರಿ ಮಾಡಿ ಸಿನಿಮಾ ನೋಡಿ ಮತ್ತೆ ಬಸ್ ಹತ್ತುತ್ತಿದ್ದೆವು. ಸಿನಿಮಾ ನಂಟನ್ನು ಬೆಳೆಸಿಕೊಂಡ ಊರು ಎಂದರೆ ಅದು ದಾವಣಗೆರೆ" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಇದನ್ನೂ ಓದಿ:'ದಯಮಾಡಿ ಉರಿಸಬೇಡ ಬಡವನ ಹೃದಯ'..ಗರಡಿ ಸಿನಿಮಾ ಸಾಂಗ್​ ಮೆಚ್ಚಿದ ಪ್ರೇಕ್ಷಕರು

"ಗರಡಿ ಸಿನಿಮಾ ಮಾಡಲು ಶುರುಮಾಡಿ ಒಂದೂವರೆ ವರ್ಷ ಕಳೆದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಲು ನಾನು ಬಿ.ಸಿ ಪಾಟೀಲ್ ಸರ್ ಇಬ್ಬರು ಕೂಡ ಒಂದು ದಿನಕ್ಕೆ ಇಪ್ಪತ್ತು ಸಭೆಗಳನ್ನು ಮಾಡುತ್ತಿದ್ದೇವೆ. ಗರಡಿ ಸಿನಿಮಾ ನಮ್ಮ ನೆಲದ ಸೊಗಡಿರುವ ಸಿನಿಮಾವಾಗಿದೆ. ದಾವಣಗೆರೆ ಎಂದರೆ, ಪೈಲ್ವಾನ್​ಗಳು ಹೆಚ್ಚು. ಆದ್ದರಿಂದ ಈ ಸಿನಿಮಾದಲ್ಲಿ ಸಾಕಷ್ಟು ರಾಜ್ಯದ ಅನೇಕ ಪೈಲ್ವಾನ್​ಗಳು ನಟಿಸಿದ್ದಾರೆ‌. ಇಂದು ಹಾವೇರಿ ಜಿಲ್ಲೆಯಲ್ಲಿ ನಟ ದರ್ಶನ್ ಅವರು ಈ ಗರಡಿ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್​, "ದೇಸಿ ಕಲೆಗಳನ್ನು ಅಧ್ಯಯನ ಮಾಡಿ ಗರಡಿ ಸಿನಿಮಾ ಮಾಡಲಾಗಿದೆ. ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಈ ಗರಡಿ ಸಿನಿಮಾ ಮಾಡಿದ್ದೇವೆ. ನವೆಂಬರ್ 10ಕ್ಕೆ ಬಿಡುಗಡೆ ಆಗಲಿದೆ. ಈ ಗರಡಿ ಸಿನಿಮಾದಲ್ಲಿ ನಟ ದರ್ಶನ್ ಅವರು ಕೂಡ ನಟಿಸಿದ್ದು, ಈ ಸಿನಿಮಾವನ್ನು ಬಾದಾಮಿ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸೂರ್ಯ ಎಂಬುವರು ನಾಯಕ ನಟರಾಗಿ ನಟಿಸುತ್ತಿದ್ದು, ಕೋಟಿಗಟ್ಟಲೇ ವೆಚ್ಚದಲ್ಲಿ ಈ ಸಿನಿಮಾ ಮಾಡಿದ್ದೇವೆ" ಎಂದರು.

ಇದನ್ನೂ ಓದಿ:ಬಿ.‌ಸಿ ಪಾಟೀಲ್ 'ಗರಡಿ' ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್​ ಸಾಥ್ - ಟ್ರೇಲರ್​ ಅನಾವರಣಗೊಳಿಸಲಿದ್ದಾರೆ ದರ್ಶನ್

ABOUT THE AUTHOR

...view details