ETV Bharat / entertainment

'ದಯಮಾಡಿ ಉರಿಸಬೇಡ ಬಡವನ ಹೃದಯ'..ಗರಡಿ ಸಿನಿಮಾ ಸಾಂಗ್​ ಮೆಚ್ಚಿದ ಪ್ರೇಕ್ಷಕರು

author img

By ETV Bharat Karnataka Team

Published : Oct 18, 2023, 12:48 PM IST

ಯೋಗರಾಜ್ ಭಟ್ ಆ್ಯಕ್ಷನ್​ ಕಟ್​ ಹೇಳಿರುವ ಗರಡಿ ಸಿನಿಮಾದ 'ದಯಮಾಡಿ ಉರಿಸಬೇಡ ಬಡವನ ಹೃದಯ' ಹಾಡು ಅನಾವರಣಗೊಂಡಿದೆ.

Garadi movie song release
ಗರಡಿ ಸಿನಿಮಾ ಸಾಂಗ್​ ರಿಲೀಸ್​

ದೇಸಿ ಕ್ರೀಡೆ ಕಥೆ ಆಧರಿಸಿ ನಿರ್ಮಾಣಗೊಂಡಿರುವ ಸಿನಿಮಾ 'ಗರಡಿ'. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸೂರ್ಯ ಹಾಗೂ ಬಿ.ಸಿ ಪಾಟೀಲ್ ಮುಖ್ಯಭೂಮಿಕೆಯಲ್ಲಿರುವ' ಗರಡಿ' ಚಿತ್ರ ಹಾಡುಗಳಿಂದಲೇ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಚಿತ್ರದಿಂದ ಮತ್ತೊಂದು ಹಾಡು ಅನಾವರಣಗೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

  • " class="align-text-top noRightClick twitterSection" data="">

ಯೋಗರಾಜ್ ಭಟ್ ಅವರು ಬರೆದಿರುವ 'ಬಡವನ ಹೃದಯ' ಎಂಬ ಸಾಹಿತ್ಯಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಮನಸ್ಸಿಗೆ ಹತ್ತಿರವಾಗುವ ಈ ಹಾಡಿಗೆ ಕರುನಾಡ ಕಲಾರಸಿಕರು ತಲೆದೂಗುತ್ತಿದ್ದಾರೆ. ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ಹಾಡು ಸಖತ್​​ ಸದ್ದು ಮಾಡುತ್ತಿದೆ.

ಈ ಹಾಡಿನ‌ ಕುರಿತು ಮಾತು ಆರಂಭಿಸಿದ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್, ನಾನು ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ. ಈ ಹಾಡು, ನನಗೂ ಹಾಗೂ ನಿರ್ಮಾಪಕರಿಗೆ ಬಹಳ ಅಚ್ಚುಮೆಚ್ಚು. ಬಾದಾಮಿ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ಹರಿಕೃಷ್ಣರ ಸಂಗೀತ, ವಿಜಯ್ ಪ್ರಕಾಶ್ ಗಾಯನ, ಸೂರ್ಯ, ಸೋನಾಲ್ ಮೊಂತೆರೊ ಹಾಗೂ ಸುಜಯ್ ಅವರ ಅಭಿನಯ ಚೆನ್ನಾಗಿದೆ. 'ದಯಮಾಡಿ ಉರಿಸಬೇಡ ಬಡವನ ಹೃದಯ' ಎಂಬ ಮೊದಲ ಸಾಲೇ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Garadi movie song release
ಗರಡಿ ಚಿತ್ರತಂಡ

ನಟ ಸೂರ್ಯ ಮಾತನಾಡಿ, ಈ ಹಾಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. 'ಬಡವನ ಹೃದಯ' ಹಾಡು ಯೋಗರಾಜ್ ಭಟ್ ಅವರು ನನಗಾಗಿ ಬರೆದ ಹಾಗಿದೆ. ಈ ಹಾಡನ್ನು ದರ್ಶನ್ ಸರ್‌ಗೆ ಕೇಳಿಸಿದ್ದೆ.‌‌ ಹಾಡಿನ ಸಾಹಿತ್ಯವನ್ನು ಅವರು ಬಹಳ ಇಷ್ಟ ಪಟ್ಟಿದ್ದರು.‌ ವಿ. ಹರಿಕೃಷ್ಣ ಸಂಗೀತ, ಜೊತೆಗೆ ನಿರಂಜನ್ ಬಾಬು ಅವರ ಕ್ಯಾಮರಾ ಕೈಚಳಕ ಹಾಡಿನ ಅಂದ ಹೆಚ್ಚಿಸಿದೆ. ವಿಜಯ್ ಪ್ರಕಾಶ್ ಗಾಯನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಹಾಡಿನ ಹೈಲೆಟ್ ಎಂದು ತಿಳಿಸಿದರು.

ಇದನ್ನೂ ಓದಿ: ಮಲಯಾಳಂ ಪ್ರಸಿದ್ಧ ಖಳ ನಟ ಕುಂಡರ ಜಾನಿ ಹೃದಯಾಘಾತದಿಂದ ನಿಧನ

ಗರಡಿ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಬಿ.ಸಿ ಪಾಟೀಲ್ ಮಾತನಾಡಿ, ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡು ಕೇಳಿದಾಗ ನನಗೆ "ಮುಂಗಾರು ಮಳೆ" ಚಿತ್ರದ 'ಅನಿಸುತಿದೆ ಯಾಕೋ ಇಂದು' ಹಾಡು ನೆನಪಾಯಿತು. ಈ ಹಾಡಿನ ಸಾಹಿತ್ಯ, ಗಾಯನ ಹಾಗೂ ನಟನೆ ಎಲ್ಲವೂ ಚೆನ್ನಾಗಿದೆ. ನವೆಂಬರ್ 1 ರಂದು ರಾಣಿಬೆನ್ನೂರಿನಲ್ಲಿ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ದರ್ಶನ್ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ನವೆಂಬರ್ 10 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ‌ ಎಂದು ತಿಳಿಸಿದರು.

ಇದನ್ನೂ ಓದಿ: ನಾಳೆ ಲಿಯೋ ಬಿಡುಗಡೆ: ಆದರೆ ವಿಜಯ್​​ ಅಭಿಮಾನಿಗಳಿಗಿದೆ ಬೇಸರದ ಸಂಗತಿ! ಏನದು?

ಸುಜಯ್ ಬೇಲೂರು,‌ ರವಿಶಂಕರ್, ‌ಹಾಸ್ಯ ನಟ ಧರ್ಮಣ್ಣ, ಕಾಮಿಡಿ ಕಿಲಾಡಿ ಖ್ಯಾತಿಯ ನಯನ, ಟಗರು ಖ್ಯಾತಿಯ ತ್ರಿವೇಣಿ, ಸೇರಿದಂತೆ ದೊಡ್ಡ ತಾರಗಣವಿದೆ. ನಟ ದರ್ಶನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ವನಜಾ ಬಿ.ಸಿ ಪಾಟೀಲ್ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.