ಕರ್ನಾಟಕ

karnataka

ನಾನು ಪ್ರಾಮಾಣಿಕ.. ಕೆಪಿಸಿಸಿಗೆ 2 ಲಕ್ಷ ಕೊಟ್ಟು ಏಕೆ ಟಿಕೆಟ್ ಪಡೆಯಬೇಕು: ಎಸ್ಎಸ್ ಮಲ್ಲಿಕಾರ್ಜುನ್ ಪ್ರಶ್ನೆ

By

Published : Nov 28, 2022, 10:35 PM IST

ಕಾಂಗ್ರೆಸ್​​ ಪಕ್ಷವು ಟಿಕೆಟ್ ಆಕಾಂಕ್ಷಿಗಳಿಗೆ ಎರಡು ಲಕ್ಷ ಡಿಡಿ ಜೊತೆ ಅರ್ಜಿ ಸಲ್ಲಿಸಲು ಹೇಳಿದ ಹಿನ್ನೆಲೆಯಲ್ಲಿ, ಎರಡು ಲಕ್ಷ ಏಕೆ ಕೊಡಬೇಕೆಂದು ಇದುವರೆಗೂ ನಾನು ಅರ್ಜಿ ಸಲ್ಲಿಕೆ ಮಾಡಿಲ್ಲ‌. ಮುಂದೆ ಅರ್ಜಿ ಮಾತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.

ss-mallikarjun-questions-congress-election-ticket-price
ನಾನು ಪ್ರಾಮಾಣಿಕ..ಕೆಪಿಸಿಸಿಗೆ 2 ಲಕ್ಷ ಕೊಟ್ಟು ಏಕೆ ಟಿಕೆಟ್ ಪಡೆಯಬೇಕು : ಎಸ್ಎಸ್ ಮಲ್ಲಿಕಾರ್ಜುನ್ ಪ್ರಶ್ನೆ

ದಾವಣಗೆರೆ: ಕೆಪಿಸಿಸಿಗೆ ಎರಡು ಲಕ್ಷ ಏಕೆ ಕೊಡಬೇಕು. ನಾವು ಪ್ರಾಮಾಣಿಕವಾಗಿ ಇರುವವರು. 2 ಲಕ್ಷ ಕೊಟ್ಟು ಏಕೆ ಟಿಕೆಟ್ ಪಡೆಯಬೇಕು ಎಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಸ್ವಪಕ್ಷದ ವಿರುದ್ಧವೇ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ, ಭಾರತ್ ಜೋಡೋ ಸಂವಿಧಾನ ಬಚಾವೋ ಯಾತ್ರೆಗೆ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಎರಡು ಲಕ್ಷ ರೂಪಾಯಿ ಏಕೆ ಕೊಡಬೇಕೆಂದು ಇದುವರೆಗೂ ನಾನು ಅರ್ಜಿ ಸಲ್ಲಿಕೆ ಮಾಡಿಲ್ಲ‌. ಮುಂದೆ ನಾನು ಕೇವಲ ಅರ್ಜಿಯನ್ನು ಮಾತ್ರ ಸಲ್ಲಿಕೆ ಮಾಡುತ್ತೇನೆ. ನನಗೆ ನಮ್ಮ ಪಕ್ಷದ ಮುಖಂಡರ ಮೇಲೆ ಬೇಸರವಾಗಿಲ್ಲ ಎಂದು ಹೇಳಿದರು. ಕಾಂಗ್ರೆಸ್​​ ಪಕ್ಷವು ಟಿಕೆಟ್ ಆಕಾಂಕ್ಷಿಗಳಿಗೆ ಎರಡು ಲಕ್ಷ ಡಿಡಿ ಜೊತೆ ಅರ್ಜಿ ಸಲ್ಲಿಸಲು ಹೇಳಿದ ಹಿನ್ನೆಲೆಯಲ್ಲಿ ಸ್ವಪಕ್ಷದವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕಿಡಿ :ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಎಸ್ ಎಸ್ ಮಲ್ಲಿಕಾರ್ಜುನ್, ಜನರು ಬೆಲೆ ಏರಿಕೆಯಿಂದ ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಎಲ್ಲಿ ನೋಡಿದರೂ 40% ಕಮಿಷನ್ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details