ಕರ್ನಾಟಕ

karnataka

ರಾಜ್ಯದಲ್ಲಿ ಎಲ್ಲೇ ಸ್ಪರ್ಧಿಸು ಅಂದ್ರೂ ಕಂಟೆಸ್ಟ್​ ಮಾಡುವೆ.. ಗ್ರಾಪಂಗೆ ನಿಲ್ಲಲೂ ರೆಡಿ: ಸಂಸದ ಜಿಎಂ ಸಿದ್ದೇಶ್ವರ್ ‌

By

Published : Nov 19, 2022, 3:19 PM IST

Updated : Nov 19, 2022, 4:44 PM IST

ದಾವಣಗೆರೆ ಉತ್ತರ ಮತಕ್ಷೇತ್ರದಲ್ಲಿ ಎಸ್ಎ ರವೀಂದ್ರನಾಥ್ ಅವರಿಗೆ ಟಿಕೆಟ್ ಕೊಡಬೇಕು ಎಂದು ವರಿಷ್ಠರನ್ನು ಒತ್ತಾಯಿಸಿದ್ದೇವೆ. ಪಕ್ಷದ ವರಿಷ್ಠರು ಹೇಳಿದರೆ ರಾಜ್ಯ ರಾಜಕಾರಣ ಅಲ್ಲ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸಲು ಸಿದ್ಧರಿರುವುದಾಗಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.

mp-gm-siddeshwar-statement-at-davanagere
ಸಂಸದ ಜಿಎಂ ಸಿದ್ದೇಶ್ವರ್

ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆಗೆ ನಮ್ಮ ವರಿಷ್ಠರು ರಾಜ್ಯದಲ್ಲಿ ಎಲ್ಲಿಯಾದರೂ ಸ್ಪರ್ಧೆ ಮಾಡು ಎಂದರೂ ಮಾಡ್ತೀನಿ, ಪಕ್ಷ ಹೇಳಿದರೆ ಗ್ರಾಪಂನಲ್ಲೂ ಸ್ಪರ್ಧೆ ಮಾಡುವುದಾಗಿ ಸಂಸದ ಜಿಎಂ ಸಿದ್ದೇಶ್ವರ್ ‌ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದರು.

ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಚುನಾವಣೆಯ ಸಾರಥ್ಯ ವಹಿಸುವುದಿಲ್ಲ, ಆದರೆ ನಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುತ್ತೇನೆ. ನಾನು ರಾಜ್ಯ ಕಾರಣಕ್ಕೆ ಬರುವುದು ನಮ್ಮ ವರಿಷ್ಠರಿಗೆ ಬಿಟ್ಟಿದ್ದು, ಪಕ್ಷ ಹೇಳಿದರೆ ನಾನು ಸ್ಪರ್ಧೆ ಮಾಡಲೇಬೇಕು, ಮನೆಗೆ ಹೋಗು ಅಂದರೆ ಹೋಗ್ಬೇಕು ಎಂದು ಹೇಳಿದರು.

ಇನ್ನು ಉತ್ತರ ಮತ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ದಾವಣಗೆರೆ ಉತ್ತರ ಮತಕ್ಷೇತ್ರದಲ್ಲಿ ಎಸ್ಎ ರವೀಂದ್ರನಾಥ್ ನವರಿಗೆ ಟಿಕೆಟ್ ಕೊಡಬೇಕು ಎಂದು ವರಿಷ್ಠರನ್ನು ಒತ್ತಾಯಿಸಿದ್ದೇವೆ. ಎಸ್ಎ ರವೀಂದ್ರನಾಥ್ ಉತ್ತರದಲ್ಲಿ ನಿಲ್ಲದೇ ಹೋದ್ರೇ ಒಳ್ಳೆ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದರು. ಪಕ್ಷದ ವರಿಷ್ಠರು ಹೇಳಿದರೆ ರಾಜ್ಯ ರಾಜಕಾರಣ ಅಲ್ಲ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸಲು ಸಿದ್ಧರಿರುವುದಾಗಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚು ಒತ್ತು: ನಮ್ಮ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಗುರುತಿಸಿ ಹೆಚ್ಚು ಒತ್ತು ನೀಡುತ್ತಿದೆ. ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಸಬ್ಸಿಡಿ ಕೊಡಿಸಲಾಗುತ್ತಿದೆ. ಮನೆಯಲ್ಲಿ ಕುಳಿತು ಮಾಡುವ ಸಿದ್ದಪಡಿಸುವ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ದಾವಣಗೆರೆ ದಕ್ಷಿಣ ವಿಧಾನಸಭೆ ಕೈ ಟಿಕೆಟ್​​​​ಗೆ ಸಾಧಿಕ್ ಫೈಲ್ವಾನ್ ಅರ್ಜಿ, ಶಾಮನೂರು ಕುಟುಂಬದಲ್ಲಿ ಸಂಚಲನ

Last Updated : Nov 19, 2022, 4:44 PM IST

ABOUT THE AUTHOR

...view details