ಕರ್ನಾಟಕ

karnataka

ಚಿರತೆ ಹಾವಳಿ: ಒಂಟಿಯಾಗಿ ಸಂಚರಿಸದಂತೆ ನ್ಯಾಮತಿ ಗ್ರಾಮೀಣ ಜನರಿಗೆ ಅರಣ್ಯ ಇಲಾಖೆ ಸೂಚನೆ

By

Published : Aug 9, 2023, 7:55 PM IST

Leopard attack cases: ಶಿವಮೊಗ್ಗ ಜಿಲ್ಲೆಯ ಬಿಕ್ಕೋನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಘಟನೆ ಮಂಗಳವಾರ ನಡೆದಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ.

Forest department advises people not to go anywhere alone
ಒಂಟಿಯಾಗಿ ಎಲ್ಲೂ ತೆರಳದಂತೆ ಜನರಿಗೆ ಅರಣ್ಯ ಇಲಾಖೆ ಸೂಚನೆ

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕು ವಲಯದಲ್ಲಿ ಚಿರತೆಗಳ‌ ಹಾವಳಿ ಹೆಚ್ಚಾಗಿದೆ. ಮನೆಯಿಂದ ಹೊರಹೋಗಲಾರದೆ ಜನರು ಹೈರಾಣಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶವನ್ನು ನ್ಯಾಮತಿ ತಾಲೂಕು ಹಂಚಿಕೊಂಡಿದ್ದರಿಂದ ದಾಳಿಗಳು ಮರುಕಳಿಸುತ್ತಿವೆ. ಈಗಾಗಲೇ ಹಲವು ದಿನಗಳಿಂದ ನ್ಯಾಮತಿ ಭಾಗದಲ್ಲಿ ಆಹಾರ ಅರಸಿ ಚಿರತೆಗಳು ಲಗ್ಗೆ ಇಡುತ್ತಿದ್ದು ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ಚಿರತೆ ದಾಳಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಬಲಿಯಾಗಿದ್ದರು. ಚಿರತೆಯನ್ನು ಅರಣ್ಯ ಇಲಾಖೆ ಬೋನ್ ಇರಿಸುವ ಮೂಲಕ ಸೆರೆಹಿಡಿದಿತ್ತು. ಇದಕ್ಕಾಗಿ ಹರಸಾಹಸವೇ ನಡೆದಿತ್ತು. ಬಳ್ಳಾರಿ ಅರಣ್ಯ ವೃತ್ತದ ಹಿರಿಯ ಅಧಿಕಾರಿಗಳು ಸೆರೆ ಕಾರ್ಯಕ್ಕೆ ಸಾಥ್ ನೀಡಿದ್ದರು. ಶಿವಮೊಗ್ಗ ಗ್ರಾಮೀಣ ವಿಭಾಗದ ಶಂಕರ ಅರಣ್ಯ ವಲಯದ ಬಿಕ್ಕೋನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಮಹಿಳೆಯೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದರು. ಹೀಗಾಗಿ, ಅರಣ್ಯ ವ್ಯಾಪ್ತಿಯನ್ನು ಹಂಚಿಕೊಂಡಿರುವ ನ್ಯಾಮತಿ ತಾಲೂಕಿನ ಕೆಲವು ಗ್ರಾಮೀಣ ಭಾಗದಲ್ಲಿ ಜನರು ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ನ್ಯಾಮತಿ ತಾಲೂಕಿನ‌ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಒಂಟಿಯಾಗಿ ಹೊಲ-ಗದ್ದೆಗಳಿಗೆ ತೆರಳದಂತೆ ಜನರಿಗೆ ಮನವಿ ಮಾಡಿದ್ದಾರೆ. ಅರಣ್ಯ ವಲಯದ ನ್ಯಾಮತಿ ತಾಲೂಕಿನ ಮುಸ್ಸೇನಾಳ್, ಸೋಗಿಲು, ಚಟ್ನಹಳ್ಳಿ,‌ ಯರಮಡ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಚಿರತೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಒಂಟಿಯಾಗಿ ಜನ ಹೊಲ, ಜಮೀನು ತೋಟಗಳಿಗೆ ತೆರಳದಂತೆ ತಿಳಿಸಿದ್ದಾರೆ. ಅನಾವಶ್ಯಕವಾಗಿ ಯಾರೂ ಕೂಡ ಹೊರಭಾಗದಲ್ಲಿ ಹೆಚ್ಚು ಓಡಾಡಬಾರದು ಎಂದೂ ಮನವಿ ಮಾಡಿದ್ದಾರೆ.

ಶಿವಮೊಗ್ಗದ ಚಿರತೆ ದಾಳಿ ಪ್ರಕರಣದ ವಿವರ: ಜಮೀನಿಗೆ ಕೆಲಸಕ್ಕೆಂದು ತೆರಳಿದ್ದ ಮಹಿಳೆ ಯಶೋದಮ್ಮ ಚಿರತೆ ದಾಳಿಗೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಸಂಜೆಯಾದರೂ ಮಹಿಳೆ ಮನೆಗೆ ಹಿಂದಿರುಗದೇ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದರು. ಹೊಲದ ಬಳಿ 45 ವರ್ಷದ ಯಶೋದಮ್ಮರ ಶವ ಪತ್ತೆಯಾಗಿತ್ತು. ಕಳೆ ಕೀಳಲು ಹೋದ ಸಂದರ್ಭದಲ್ಲಿ ಅವರ ಮೇಲೆ ಚಿರತೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯಶೋದಮ್ಮ ಅವರ ದೇಹವನ್ನು ಭಾಗಶ: ಚಿರತೆ ತಿಂದು ಹಾಕಿತ್ತು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ರೈತ ಮಹಿಳೆ ಬಲಿ.. ಜನರಲ್ಲಿ ಹೆಚ್ಚಿದ ಆತಂಕ

ABOUT THE AUTHOR

...view details