ಕರ್ನಾಟಕ

karnataka

ಬಿಜೆಪಿಯಿಂದ ಹಲವರು ಕಾಂಗ್ರೆಸ್‌ಗೆ, ಯಾರ್‌ಯಾರು ಬರ್ತಾರೆ ಎಂದು ಗೊತ್ತಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

By

Published : Jan 30, 2022, 6:58 PM IST

ಬಿಜೆಪಿಯಿಂದ ಯಾರೆಲ್ಲಾ ಕಾಂಗ್ರೆಸ್‌ಗೆ ಬರುತ್ತಾರೋ ಗೊತ್ತಿಲ್ಲ. ಚುನಾವಣೆಗೆ ಇನ್ನೂ ವರ್ಷ ಬಾಕಿ ಇದೆ. ಈಗಲೇ ಖಚಿತವಾಗಿ‌ ಯಾರ್‌ಯಾರು ಬರುತ್ತಾರೆ ಎಂದು‌ ಹೇಳಲು‌ ಸಾಧ್ಯವಿಲ್ಲ..

kpcc-president-satish-jarakiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ

ದಾವಣಗೆರೆ :2023ರಲ್ಲಿ ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಬಿಜೆಪಿಯಿಂದ ಹಲವರು ಕಾಂಗ್ರೆಸ್‌ಗೆ ಬರುತ್ತಾರೆ. ಈಗಾಗಲೇ ಖಚಿತವಾಗಿ‌ ಯಾರ್‌ಯಾರು ಬರುತ್ತಾರೆ ಎಂದು‌ ಹೇಳಲು‌ ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ನಗರದ ಹೊರವಲಯದ ಮೈತ್ರಿವನದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಯಾರೆಲ್ಲಾ ಕಾಂಗ್ರೆಸ್‌ಗೆ ಬರುತ್ತಾರೋ ಗೊತ್ತಿಲ್ಲ. ಚುನಾವಣೆಗೆ ಇನ್ನೂ ವರ್ಷ ಬಾಕಿ ಇದೆ. ಈಗಲೇ ಖಚಿತವಾಗಿ‌ ಯಾರ್‌ಯಾರು ಬರುತ್ತಾರೆ ಎಂದು‌ ಹೇಳಲು‌ ಸಾಧ್ಯವಿಲ್ಲ ಎಂದರು.

ಪಕ್ಷಾಂತರ ಪರ್ವದ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಮಾತನಾಡಿರುವುದು..

ಈಗಾಗಲೇ ಉತ್ತರಪ್ರದೇಶದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿಯಿಂದ ಬಹಳಷ್ಟು ಜನ ಕಾಂಗ್ರೆಸ್‌ಗೆ ಬರಲಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ‌ ಯಾರ್‌ಯಾರು ಬರುತ್ತಾರೆ ಎಂಬುದು ಖಚಿತವಾಗುತ್ತದೆ. ಉಮೇಶ ಕತ್ತಿ, ಲಕ್ಷ್ಮಣ ಸವದಿ ನಮ್ಮನ್ನು‌ ಸಂಪರ್ಕಿಸಿಲ್ಲ. ಚುನಾವಣೆ ಬರುವವರೆಗೂ ಏನೂ‌ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಾಜಿ‌ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್‌ಗೆ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಮಾಜಿ‌ ಸಚಿವ ಎಂ ಬಿ ಪಾಟೀಲ್‌ಗೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಎಂ.ಬಿ ಪಾಟೀಲ್ ಉತ್ಸಾಹಿ ವ್ಯಕ್ತಿ. ಅವರ ವಿಚಾರದಲ್ಲಿ ಪಕ್ಷ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದರು‌.

ಓದಿ:ಗಾಂಧೀಜಿ ಹುತಾತ್ಮರಾದರು ಅವರ ವಿಚಾರಧಾರೆ ನಮ್ಮೊಂದಿಗೆ ಇದೆ : ಸಿದ್ದರಾಮಯ್ಯ

TAGGED:

ABOUT THE AUTHOR

...view details