ಕರ್ನಾಟಕ

karnataka

ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ನಿರ್ಣಯಗಳು ಹೀಗಿವೆ..

By

Published : Sep 19, 2021, 10:39 PM IST

Updated : Sep 19, 2021, 10:56 PM IST

bjp-core-committee-meeting-held-in-davanagere
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ()

ನಗರದಲ್ಲಿ ಎರಡು ದಿನಗಳ‌ ಕಾಲ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಇಡೀ ಕೇಸರಿ ನಾಯಕರ ದಂಡೇ ಆಗಮಿಸಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗು ಮಾಜಿ‌ ಸಿಎಂ ಬಿಎಸ್​ವೈ, ಹಾಲಿ‌ ಸಿಎಂ ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಭಾಗಿಯಾಗಿ ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಗಳನ್ನು ಎದುರಿಸುವ ಸಲುವಾಗಿ ರೂಪುರೇಷೆಗಳನ್ನು ತಯಾರು ಮಾಡಿದರು.

ದಾವಣಗೆರೆ:ಮಧ್ಯ ಕರ್ನಾಟಕದ ಕೇಂದ್ರಬಿಂದು ಬೆಣ್ಣೆ ನಗರಿ ಬಿಜೆಪಿಗೆ ಅದೃಷ್ಟದ ಮೆಟ್ಟಿಲು. ಇದೇ ಕಾರಣಕ್ಕೆ ಬಿಜೆಪಿಯ ಬಹುತೇಕ ಚುನಾವಣೆಯ ರೂಪರೇಷೆಗಳ ಪೂರ್ವ ತಯಾರಿಗಳು ದಾವಣಗೆರೆಯಿಂದಲೇ ಆರಂಭಿಸುವುದು ವಾಡಿಕೆ. ಇದೀಗ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯೂ ಇಲ್ಲಿಯೇ ನಡೆದಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಬ್ ಕಾ ಸಾತ್ - ಸಬ್ ಕಾ ವಿಕಾಸ್ ಮಂತ್ರ ಪಠಿಸಲಾಯಿತು. ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಹಾಗು ಹಿಂದುಳಿದ ವರ್ಗಗಳ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರ ಆಯಾಯ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ. ಈ ಎರಡು ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದಲ್ಲದೆ ರಾಜ್ಯದ ಪಂಚಮಸಾಲಿ, ಕುರುಬ ಸೇರಿದಂತೆ ಇತರೆ ಸಮುದಾಯದ ಬೇಡಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕಾಲಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು. ಇನ್ನು ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನಾ ನಿರ್ಣಯ ಕೂಡ ಚರ್ಚಿಸಲಾಗಿದ್ದು, ಬೊಮ್ಮಾಯಿ ಸಿಎಂ ಆದ್ಮೇಲೆ ರೈತ ವಿದ್ಯಾನಿಧಿ, ಸಂಧ್ಯಾ ಸುರಕ್ಷಾ ಸೇರಿದಂತೆ ಇತರೆ ಮಾಶಾಸನ ಹೆಚ್ಚು ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಇದಲ್ಲದೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಆಯಾಯ ರಾಜ್ಯಗಳಿಗೆ ಅವಕಾಶ ನೀಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಸಂಘಟನೆಯ ಜವಾಬ್ದಾರಿ ಈಶ್ವರಪ್ಪರಿಗೆ ನೀಡಲಾಯಿತು.

ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ

ವಿರೋಧ ಪಕ್ಷ ಕಾಂಗ್ರೆಸ್ ನಾಯಕರ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು ನಿರಂತರವಾಗಿ ವಾಗ್ದಾಳಿಗಳ ಸುರಿಮಳೆಗೈದರು.‌ ಬಳಿಕ ನಂಜನಗೂಡಿನ ದೇವಾಲಯ ತೆರವು ವಿಚಾರವನ್ನು ಕೂಡ ತೆಗೆದ ನಾಯಕರು ಯಾವುದೇ ಒಂದು ದೇವಾಲಯ ಮುಟ್ಟದೆ ಇರುವಂತೆ ಕಾನೂನು ತರುತ್ತೇವೆ ಎಂದು ತಿಳಿಸಿದರು.

ಬಳಿಕ 400ಕ್ಕೂ ಹೆಚ್ಚು ದೇವಾಲಯಗಳನ್ನು ರಕ್ಷಣೆ ಮಾಡುವ ಪ್ರತಿಜ್ಞೆ ಮಾಡಲಾಯಿತು. ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಬಿಜೆಪಿ ಮುಖಂಡರನ್ನು‌ ಸಂಪರ್ಕಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಕೂಡಾ ಆಪರೇಷನ್‌ ಹಸ್ತಕ್ಕೆ ಸಿದ್ಧವಾಗಿದೆ ಎಂದು ಮಾಜಿ ಸಿಎಂ ಬಿಎಸ್​ವೈ ಬಾಂಬ್ ಸಿಡಿಸಿದ್ರು. ಇನ್ನು ಹಾನಗಲ್, ಸಿಂದಗಿ ಉಪಚುನಾವಣೆ ಬಿಜೆಪಿ ಸವಾಲಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.

ರಾಜ್ಯದಿಂದ ಬಿಜೆಪಿ‌ ವಿಜಯಯಾತ್ರೆ ಆರಂಭಿಸಿದೆ. ಗ್ರಾಪಂ, ತಾಪಂ, ಜಿಪಂ ಹಾಗು ವಿಧಾನ ಪರಿಷತ್ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ. ಇದರ‌ ಬಗ್ಗೆ ಕೂಡ ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ‌ಇನ್ನು ಬಿಎಸ್​ವೈ ಅವರನ್ನು ಸೈಡ್ ಲೈನ್​ ಮಾಡಲಾಗಿದೆ ಎಂಬ ಡ್ಯಾಮೇಜ್ ಕಂಟ್ರೋಲ್ ಮಾಡಿದ ಅರುಣ್ ಸಿಂಗ್ ರಾಜ್ಯದಲ್ಲಿ ಬಿಎಸ್‌ವೈ ಅವರ ಯಶಸ್ಸಿನ‌ ಯಾತ್ರೆಯನ್ನು‌ ಬೊಮ್ಮಾಯಿ‌ ಮುಂದುರೆಸಲಿದ್ದಾರೆ ಎಂದರು. ಬೇರೆ ದೇಶಗಳ ಪೈಕಿ ಅತಿ ಹೆಚ್ಚು ಲಸಿಕೆಯನ್ನು ಜನರಿಗೆ ನೀಡಿದ ಏಕೈಕ ದೇಶ ಭಾರತ ಎಂದು ಕೇಂದ್ರ ಸರ್ಕಾರವನ್ನು ಕೊಂಡಾಡಿದರು‌.

ಒಟ್ಟಾರೆ ಸಿಎಂ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ಮೊಟ್ಟ ಮೊದಲ ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ಬೆಣ್ಣೆನಗರಿ ಸಾಕ್ಷಿಯಾಯ್ತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ಬಿಜೆಪಿಗೂ ಎಚ್ಚರಿಕೆ ಕರೆಗಂಟೆಯಾಗಿದೆ ಎಂಬ ವಿಚಾರ ಬಹಿರಂಗವಾಗಲು ವೇದಿಕೆಯಾಯ್ತು. ಹಾನಗಲ್‌, ಸಿಂದಗಿ ಉಪಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗೆ ಸಿದ್ಧತೆಗೆ ರಾಜ್ಯ ಕಾರ್ಯಕಾರಿಣಿ ಸಭೆ ಸಹಾಯಕವಾಯಿತು.

ಇದನ್ನೂ ಓದಿ:ಕೋವಿಡ್​ನಿಂದ ಮೃತರಾದ ಕುಟುಂಬದಿಂದ ಪರಿಹಾರ ಕೋರಿ ಸಾವಿರಾರು ಅರ್ಜಿ; ಯಾರೊಬ್ಬರಿಗೂ ಕೈಸೇರದ ಪರಿಹಾರ

Last Updated :Sep 19, 2021, 10:56 PM IST

ABOUT THE AUTHOR

...view details