ಕರ್ನಾಟಕ

karnataka

ಬೆಳ್ತಂಗಡಿಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ!

By

Published : Dec 6, 2022, 12:17 PM IST

Rare snake  found in Belthangady

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಪತ್ತೆಯಾಗಿದೆ.

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆಯಾಗಿದೆ. ಉರಗತಜ್ಞ ಸ್ನೇಕ್ ಅಶೋಕ್ ಅವರನ್ನು ಹಾವುನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿ ಮರಿಯನ್ನು ನುಂಗುತ್ತಿತ್ತು. ಇದನ್ನು ಕಂಡ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು ಹಾವನ್ನು ರಕ್ಷಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ...

ಸಾರಿಬಾಳ ಬಗ್ಗೆ ಒಂದಿಷ್ಟು ಮಾಹಿತಿ..:ಫೋರೆಸ್ಟನ್ಸ್ ಬೆಕ್ಕು ಹಾವು ಎಂದು ಕರೆಯಲ್ಪಡುವ ಈ ಸಾರಿಬಾಳ ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ತೀರಾ ವಿರಾಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ಇತ್ಯಾದಿ. ಇವುಗಳಲ್ಲೂ ಎರಡು ಪ್ರಭೇದಗಳಿವೆ.

  • ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ
  • ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ ತಿಳಿ ಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ.

ಕೊಯ್ಯೂರಿನಲ್ಲಿ ಈ ಪ್ರಭೇದದ ಹಾವು ಕಂಡು ಬಂದಿದೆ. ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಈವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಉರಗತಜ್ಞ ಅಶೋಕ್ ತಿಳಿಸಿದರು.

ಇವು ವಿಷ ರಹಿತ ಹಾವುಗಳಾಗಿದ್ದು, ಕಟ್ಟುಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಿದ್ದಾರೆ. ಎಲ್ಲ ಜೀವಿಗಳಂತೆ ಹಾವುಗಳಿಗೂ ಬದುಕುವ ಹಕ್ಕಿದೆ ಯಾವುದೇ ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸುವುದು ಮುಖ್ಯ ಎಂದು ಸ್ನೇಕ್ ಅಶೋಕ್ ಹೇಳಿದರು.

ಇದನ್ನೂ ಓದಿ:ತುಮಕೂರಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ.. ಏನಿದರ ವಿಶೇಷತೆ?

ABOUT THE AUTHOR

...view details